ಬಾಲಿವುಡ್‌ನ ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಬಂಧನ ವಾರೆಂಟ್!

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಪ್ರಕರಣವೊಂದು ದಾಖಲಾಗಿದೆ. ನಟಿಯ ವಿರುದ್ಧ ಬಂಧನ ವಾರೆಂಟ್ ಸಹ ಹೊರಡಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸುದ್ದಿಯನ್ನು ನಟಿ ಸೋನಾಕ್ಷಿ ಅಲ್ಲಗಳೆದಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ, ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುವುದಾಗಿ ಒಪ್ಪಿಕೊಂಡಿದ್ದರಂತೆ ಅದಕ್ಕೆಂದೇ 37 ಲಕ್ಷ ರುಪಾಯಿ ಹಣವನ್ನು ಸಹ ಪಡೆದಿದ್ದರು. ಆದರೆ ಸೋನಾಕ್ಷಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಆದರೆ ಪಡೆದ ಹಣವನ್ನು ಸಹ ಸೋನಾಕ್ಷಿ ಮರಳಿಸಿಲ್ಲ ಎನ್ನಲಾಗುತ್ತಿದೆ.

ಇದೇ ಕಾರಣಕ್ಕೆ ಕಾರ್ಯಕ್ರಮ ಆಯೋಜಕರು ಸೋನಾಕ್ಷಿ ವಿರುದ್ಧ ದೂರು ದಾಖಲಿಸಿದ್ದರು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ ಎಂಬ ಸುದ್ದಿ ನಿನ್ನೆ ಹರಿದಾಡಿತ್ತು. ಆದರೆ ಈ ಸುದ್ದಿಯನ್ನು ನಟಿ ಸೋನಾಕ್ಷಿ ಸಿನ್ಹ ಅಲ್ಲಗಳೆದಿದ್ದಾರೆ.

Actress Sonakshi Sinha Clarifies About Arrest Warrant News Against Her

ಸುದ್ದಿ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೋನಾಕ್ಷಿ ಸಿನ್ಹಾ, ''ನನ್ನ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ, ಕೆಲವು ಮಾಧ್ಯಮಗಳು ಯಾವುದೇ ಸ್ಪಷ್ಟನೆ ಪಡೆದುಕೊಳ್ಳದೆ ಹೀಗೆ ಸುಳ್ಳು ಸುದ್ದಿ ಪ್ರಕಟಿಸುತ್ತಿದ್ದಾರೆ'' ಎಂದಿದ್ದಾರೆ.

''ಕೆಲವು ಕೆಟ್ಟ ವ್ಯಕ್ತಿಗಳು ನನ್ನ ಮಾನಹಾನಿ ಮಾಡಲೆಂದೇ ಉದ್ದೇಶಪೂರ್ವಕವಾಗಿ ಹೀಗೆ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಎಲ್ಲ ಮಾಧ್ಯಮಗಳು, ಸುದ್ದಿ ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಈ ಸುಳ್ಳು ಸುದ್ದಿಯನ್ನು ಯಾರೂ ಪ್ರಕಟ ಮಾಡಬೇಡಿ'' ಎಂದು ಸೋನಾಕ್ಷಿ ಮನವಿ ಮಾಡಿದ್ದಾರೆ.

ತಮ್ಮ ವಿರುದ್ಧ ದೂರು ದಾಖಲಿಸಿರುವ ವ್ಯಕ್ತಿಯ ಬಗ್ಗೆಯೂ ಮಾತನಾಡಿರುವ ಸೋನಾಕ್ಷಿ ಸಿನ್ಹ, ''ಆ ವ್ಯಕ್ತಿ ಕೇವಲ ಪ್ರಚಾರಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಆ ವ್ಯಕ್ತಿಯ ವಿರುದ್ಧ ನನ್ನ ಕಾನೂನು ತಂಡ ಅಗತ್ಯ ಕ್ರಮ ಕೈಗೊಳ್ಳಲಿದೆ. ಬಹು ವರ್ಷಗಳಿಂದ ಕಷ್ಟಪಟ್ಟು ಕಟ್ಟಿಕೊಂಡಿರುವ ನನ್ನ ಇಮೇಜನ್ನು ಒಡೆಯುವ ಈ ಯತ್ನವನ್ನು ನಾನು ಸುಮ್ಮನೆ ಬಿಡುವುದಿಲ್ಲ'' ಎಂದಿದ್ದಾರೆ.

ಪ್ರಕರಣವು ಪ್ರಸ್ತುತ ಮುರಾದಾಬಾದ್ ನ್ಯಾಯಾಲಯದಲ್ಲಿದೆ. ಅಲಹಾಬಾದ್‌ ನ್ಯಾಯಾಲದಲ್ಲಿ ಇದೇ ಪ್ರಕರಣಕ್ಕೆ ತಡೆ ನೀಡಲಾಗಿದೆ. ನನ್ನ ಕಾನೂನು ತಂಡ ನ್ಯಾಯಾಲಯ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಿದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತದೆ. ಈ ಪ್ರಕರಣದ ಸದ್ಯಕ್ಕೆ ಮುರಾದಾಬಾದ್ ನ್ಯಾಯಾಲಯದಲ್ಲಿರುವ ಕಾರಣ ಈ ಪ್ರಕರಣದಲ್ಲಿ ಇದಕ್ಕಿಂತಲೂ ಹೆಚ್ಚಿನದ್ದೇನನ್ನೂ ನಾನು ಮಾತನಾಡುವುದಿಲ್ಲ'' ಎಂದಿದ್ದಾರೆ ಸೋನಾಕ್ಷಿ ಸಿನ್ಹ.

ಕೆಲವು ದಿನಗಳ ಹಿಂದಷ್ಟೆ ಸೋನಾಕ್ಷಿ ಸಿನ್ಹ ವಿರುದ್ಧ ಮತ್ತೊಂದು ಸುಳ್ಳು ಸುದ್ದಿ ಹರಿದಾಡಿತ್ತು. ತಮಿಳಿನ ನಟ ಆರ್ಯ ಮದುವೆಯ ಚಿತ್ರವನ್ನು ತಿರುಚಿ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿಬಿಡಲಾಗಿತ್ತು. ಈ ವಿಷಯವಾಗಿಯೂ ಸಹ ನಟಿ ಸೋನಾಕ್ಷಿ ಸಿನ್ಹ ಸ್ಪಷ್ಟನೆ ನೀಡಿದ್ದರು.

More from Filmibeat

English summary
Actress Sonakshi Sinha gave clarification about arrest warrant issued against her. She said that is a fake news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X