twitter
    For Quick Alerts
    ALLOW NOTIFICATIONS  
    For Daily Alerts

    ರೋಗನಿರೋಧಕ ಶಕ್ತಿ ಹೆಚ್ಚಿಸಲು ಟಿಪ್ಸ್ ಕೊಟ್ಟ ಬಾಲಿವುಡ್ ತಾರೆ ಸೊನಾಲಿ ಬೇಂದ್ರೆ

    |

    ಕೊರೊನಾ ವೈರಸ್ ಸೋಂಕಿನ ನಡುವೆ ಪ್ರತಿಯೊಬ್ಬರೂ ತಮ್ಮ ದೇಹದ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಮ್ಯುನಿಟಿ ಚೆನ್ನಾಗಿದ್ದರೆ ಸೋಂಕನ್ನು ಎದುರಿಸಬಹುದು ಎಂದು ತಿಳಿದ ಜನರು ಪುಸ್ತಕಗಳಲ್ಲಿ ಗೂಗಲ್‌ನಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಆರೋಗ್ಯಕಾರಿ ಹಣ್ಣು, ತರಕಾರಿ ಖಾದ್ಯಗಳ ಬಗ್ಗೆ ಹುಡುಕಾಡುತ್ತಿದ್ದಾರೆ.

    ಅನೇಕರು ಆರೋಗ್ಯ ವೃದ್ಧಿಗೆ ವಿವಿಧ ಬಗೆಯ ಸಲಹೆ ನೀಡುತ್ತಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಸಾವಿರಾರು ಮಂದಿಗೆ ಸ್ಫೂರ್ತಿ ನೀಡಿದ್ದ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಆಗಾಗ್ಗೆ ತಮ್ಮ ಆರೋಗ್ಯ ಕ್ರಮ ಹೇಗಿರಬೇಕು ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿರುತ್ತಾರೆ. ಆರೋಗ್ಯಕರ ಮತ್ತು ಪೌಷಿಕ ಆಹಾರಗಳ ಬಗ್ಗೆ ವಿವರ ನೀಡುವ ಸೋನಾಲಿ, ಇತ್ತೀಚೆಗೆ ಇಮ್ಯುನಿಟಿ ಹೆಚ್ಚಿಸುವ ವಿಧಾನವೊಂದನ್ನು ತಿಳಿಸಿದ್ದಾರೆ.

    ಲಾಕ್‌ಡೌನ್‌ನಲ್ಲಿಯೂ ಜತೆ ಸೇರಿಕೊಂಡು ಪಕೋಡಾ ಮಾಡಿದ 'ಅಗ್ನಿಸಾಕ್ಷಿ' ತಂಡ!ಲಾಕ್‌ಡೌನ್‌ನಲ್ಲಿಯೂ ಜತೆ ಸೇರಿಕೊಂಡು ಪಕೋಡಾ ಮಾಡಿದ 'ಅಗ್ನಿಸಾಕ್ಷಿ' ತಂಡ!

    ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸೊನಾಲಿ ಬೇಂದ್ರೆ, ಇಮ್ಯುನಿಟಿ ಹೆಚ್ಚಿಸುವ ಸ್ಮೂದಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಏನಿದು ಸ್ಮೂದಿ? ಏನಿದರ ರೆಸಿಪಿ? ಅವರೇ ವಿವರಿಸಿದ್ದಾರೆ.

    ಸಾಕಷ್ಟು ಅಧ್ಯಯನ ಮಾಡಿದ್ದೇನೆ

    ಸಾಕಷ್ಟು ಅಧ್ಯಯನ ಮಾಡಿದ್ದೇನೆ

    'ಪ್ರಬಲವಾದ ಇಮ್ಯುನಿಟಿ ಹೊಂದುವುದು ಎಷ್ಟು ಅಗತ್ಯವಾಗಿದೆ ಎಂಬುದನ್ನು ಹಿಂದೆಂದಿಗಿಂತಲೂ ನಾವೀಗ ಅರ್ಥ ಮಾಡಿಕೊಂಡಿದ್ದೇವೆ. ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ನನ್ನ ಇಮ್ಯುನಿಟಿ ವ್ಯವಸ್ಥೆಯನ್ನು ವೃದ್ಧಿಸುವ ಮಾರ್ಗಗಳ ಬಗ್ಗೆ ನಾನು ಬಹಳ ಅಧ್ಯಯನ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.

    ನನ್ನ ಸೀಕ್ರೆಟ್ ಫಾರ್ಮುಲಾ ಇದು

    ನನ್ನ ಸೀಕ್ರೆಟ್ ಫಾರ್ಮುಲಾ ಇದು

    'ನಾನು ಆ ಸಂದರ್ಭದಲ್ಲಿ ಇದೊಂದು ಪದ್ಧತಿಯನ್ನು ಆರಂಭಿಸಿದೆ. ಅದೀಗ ನನಗೆ ಹವ್ಯಾಸವಾಗಿಬಿಟ್ಟಿದೆ. ಇದರ ಕ್ರಮಗಳು ಬಹಳ ಸರಳ ಮತ್ತು ಇದನ್ನು ಅನೇಕ ಬಾರಿ ಪ್ರಯೋಗಿಸಿ ಪರೀಕ್ಷಿಸಿರುವಂಥದ್ದು. ನನ್ನ ಕೆಮೊ ಥೆರಪಿ ಸಂದರ್ಭದಲ್ಲಿ ಸೋಂಕು ಉಂಟಾಗದಂತೆ ಇದರಿಂದ ತಡೆದುಕೊಂಡಿದ್ದೇನೆ. ಇದೇ ನನ್ನ ಸೀಕ್ರೆಟ್ ಫಾರ್ಮುಲಾ ಎನ್ನುವುದು ನನ್ನ ನಂಬಿಕೆ. ಹೀಗಾಗಿ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ನಾವೆಲ್ಲರೂ ಪ್ರಜ್ಞಾಪೂರ್ವಕ ಹೆಜ್ಜೆಗಳನ್ನು ಇರಿಸುತ್ತೇವೆ ಎಂದು ಆಶಿಸುತ್ತೇನೆ' ಎಂದು ಹೇಳಿದ್ದಾರೆ.

    ಏಪ್ರಿಲ್‌ಅನ್ನು ಮಾಯವಾದ ತಿಂಗಳು ಎಂದು ಘೋಷಿಸಿ: ಸರ್ಕಾರಕ್ಕೆ ರಿಯಲ್ ಸ್ಟಾರ್ ಉಪ್ಪಿ ಸಲಹೆಏಪ್ರಿಲ್‌ಅನ್ನು ಮಾಯವಾದ ತಿಂಗಳು ಎಂದು ಘೋಷಿಸಿ: ಸರ್ಕಾರಕ್ಕೆ ರಿಯಲ್ ಸ್ಟಾರ್ ಉಪ್ಪಿ ಸಲಹೆ

    ತರಕಾರಿ, ಹಣ್ಣುಗಳ ಮಿಶ್ರಣ

    ತರಕಾರಿ, ಹಣ್ಣುಗಳ ಮಿಶ್ರಣ

    ವಿಡಿಯೋದಲ್ಲಿ ಅವರು 'ಸ್ಮೂದಿ'ಯನ್ನು ಮಾಡುವ ಬಗೆಯನ್ನು ವಿವರಿಸಿದ್ದಾರೆ. ಇದು ಆರೋಗ್ಯಕರ ಮತ್ತು ಸ್ವಾದಿಷ್ಟಭರಿತ ರೆಸಿಪಿ ಎಂದು ತಿಳಿಸಿದ್ದಾರೆ. ಇದರಲ್ಲಿ ತರಕಾರಿಗಳು, ಹಣ್ಣು, ನಟ್ಸ್‌, ಶುಂಠಿ ಮತ್ತು ಅರಿಶಿಣದ ಮಿಶ್ರಣವಿರುತ್ತದೆ.

    ಸ್ಮೂದಿ ಮಾಡುವುದು ಹೀಗೆ

    ಸ್ಮೂದಿ ಮಾಡುವುದು ಹೀಗೆ

    ಇದನ್ನು ತಯಾರಿಸಲು ನಿಮಗೆ ಒಂದು ಸೇಬು ಹಣ್ಣು, ಒಂದು ಕ್ಯಾರೆಟ್, ಒಂದು ನೆಲ್ಲಿಕಾಯಿ, ಎರಡು ಇಂಚು ತಾಜಾ ಅರಿಶಿಣ ಕೊಂಬು, ಎರಡು ಇಂಚು ದೊಡ್ಡದಾದ ಶುಂಠಿ, ಎರಡು ಏಪ್ರಿಕಾಟ್, ಬೊಗಸೆಯಷ್ಟು ಬ್ಲೂಬೆರ್ರಿ ಮತ್ತು ಕ್ರ್ಯಾನ್ ಬೆರ್ರಿಗಳು, ಏಳು ಬಾದಾಮಿ, ಸ್ವಲ್ಪ ದಾಲ್ಚಿನ್ನಿ ಪುಡಿ, 2-4 ವಾಲ್‌ನಟ್, 2 ಬೀಜ ತೆಗೆದ ಖರ್ಜೂರ ಮತ್ತು ಒಂದು ಮುಷ್ಟಿಯಷ್ಟು ಪ್ರಮಾಣದ ಪಾಲಕ್ ಸೊಪ್ಪು ಅಗತ್ಯ. ಈ ಎಲ್ಲ ಪದಾರ್ಥಗಳನ್ನೂ ಮಿಕ್ಸರ್‌ನಲ್ಲಿ ಚೆನ್ನಾಗಿ ರುಬ್ಬಿದಾಗ ಸ್ಮೂದಿ ಸಿದ್ಧ.

    English summary
    Bollywood actress Sonali Bendre has shared a special immunity boosting recipe of Smoothie to improve power system of the body.
    Monday, April 13, 2020, 19:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X