»   » ಪೂನಂ ಪಾಂಡೆ ದಾರಿಯಲ್ಲಿ ನಟಿ ಸೋನಂ ಕಪೂರ್

ಪೂನಂ ಪಾಂಡೆ ದಾರಿಯಲ್ಲಿ ನಟಿ ಸೋನಂ ಕಪೂರ್

Posted By:
Subscribe to Filmibeat Kannada

ಬಾಲಿವುಡ್ ಬ್ಯೂಟಿ ಸೋನಂ ಕಪೂರ್ ಕಡೆಗೂ ಹೊಸ ದಾರಿ ಕಂಡುಹಿಡಿದುಕೊಂಡಿದ್ದಾರಾ? ಬಿಚ್ಚಮ್ಮಳೆಂದೇ ಕುಖ್ಯಾತಿ ಪಡೆದಿರುವ ಪೂನಂ ಪಾಂಡೆ ದಾರಿ ಹಿಡಿದಿದ್ದಾರಾ? ಹೌದು ಎನ್ನುತ್ತವೆ ಬಾಲಿವುಡ್ ಮೂಲಗಳು. ಸೋನಂ ಕಪೂರ್ ಇಷ್ಟು ದಿನ ಡೀಸೆಂಟ್ ಪಾತ್ರಗಳಲ್ಲಿ ಕಾಣಿಸುತ್ತಿದ್ದರು ಈಗ ರೂಟು ಬದಲಾಯಿಸುತ್ತಿದ್ದಾರೆ.

ಇದೇ ಮೊಟ್ಟ ಮೊದ ಬಾರಿಗೆ ಸೋನಂ ಬಿಚ್ಚಮ್ಮಳ ಪಾತ್ರದಲ್ಲಿ ದರ್ಶನ ನೀಡುತ್ತಿದ್ದಾರೆ. ತಮ್ಮ ಸಹೋದರಿ ರಿಯಾ ಕಪೂರ್ ನಿರ್ಮಿಸುತ್ತಿರುವ 'ಖೂಬ್ ಸೂರತ್' ಚಿತ್ರದಲ್ಲಿ ಸಖತ್ ಹಾಟ್ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈಜುಡುಗೆಯಲ್ಲಿ ಪಡ್ಡೆಗಳನ್ನು ಮೈಮರೆಸಲಿದ್ದಾರೆ ಎಂಬುದು ಬಾಲಿವುಡ್ ಬಾತ್.


ರೇಖಾ ಹಾಗೂ ಹೃಷಿಕೇಶ್ ಮುಖರ್ಜಿ ಅಭಿನಯದ 'ಖೂಬ್ ಸೂರತ್' ಚಿತ್ರವನ್ನೇ ಈಗ ರೀಮೇಕ್ ಮಾಡಲಾಗುತ್ತಿದೆ. ಹಳೆ ಚಿತ್ರದಲ್ಲಿ ರೇಖಾ ಗೌರಮ್ಮನಂತೆ ಪಾರ್ಟ್ ಮಾಡಿದ್ದರು. ಈಗ ಸೋನಂ ಸಂಪೂರ್ಣ ಭಿನ್ನ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸೋನಂ ದೇಹವೂ ಬಿಕಿನಿಗೆ ಹೇಳಿ ಮಾಡಿಸಿದಂತಿದೆ.

ಈ ಪಾತ್ರಕ್ಕಾಗಿ ಡಯಟ್, ಜಿಮ್ ಹಾಳು ಮೂಳು ಮಾಡಿ ತಮ್ಮ ದೇಹದ ಸೌಂದರ್ಯವನ್ನು ಬಳುಕುವ ಲತೆಯಂತೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ ಅಲ್ಪಾಹಾರ ಸೇವನೆಯಂತಹ ಡಯಟ್ ಪಾಲಿಸುವುದು. ಊಟದ ಬಳಿಕ ಯಾವುದೇ ಕಾರ್ಬೋಹೈಡ್ರೇಟ್ ತಿನ್ನದಿರುವ ಸಲಹೆಗಳನ್ನು ಪಾಲಿಸುತ್ತಿದ್ದಾರೆ.

ಇನ್ನು ಈಜುಡುಗೆಯಲ್ಲಿ ಮಿಂಚಲು ಪ್ರತಿನಿತ್ಯ ಈಜುಕೊಳಕ್ಕೆ ಇಳಿಯುತ್ತಿದ್ದಾರಂತೆ. ಖೂಬ್ ಸೂರತ್ ಚಿತ್ರ ನವೆಂಬರ್ ತಿಂಗಳಲ್ಲಿ ಸೆಟ್ಟೇರಲಿದೆ. ಬಿಡುಗಡೆ ಭಾಗ್ಯ 2014ರಲ್ಲೇ. ಈ ಚಿತ್ರದ ಬಹುತೇಕ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯಲಿದೆ. (ಏಜೆನ್ಸೀಸ್)

English summary
Actress Sonam Kapoor will don a swimsuit in her home-production movie Khubsoorat, and her character will be far from the original version. The Khubsoorat remake goes on floors in mid-November and the film.
Please Wait while comments are loading...