For Quick Alerts
  ALLOW NOTIFICATIONS  
  For Daily Alerts

  Sonam Kapoor: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸೋನಂ ಕಪೂರ್ ದಂಪತಿ!

  |

  ಬಾಲಿವುಡ್ ನಟಿ ಸೋನಂ ಕಪೂರ್ ಖುಷಿ ವಿಚಾರ ಒಂದನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾದ್ದಾರೆ. 2018ರ ಮೇ8 ರಂದು ಬಹಳ ಅದ್ಧೂರಿಯಾಗಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸೋನಂ ಕಪೂರ್ ಇದೀಗ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ವತಃ ಸೋನಂ ಕಪೂರ್ ದಂಪತಿಗಳು ಈ ಖುಷಿ ವಿಚಾರವನ್ನು ಅಭಿಮಾನಿಗಳಲ್ಲಿ ಇಂದು ಹಂಚಿಕೊಂಡಿದ್ದಾರೆ. ಸುದ್ದಿ ತಿಳಿದು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

  ಮದುವೆ ಆದ ಬಳಿಕ ಮುಂಬೈ ಬಿಟ್ಟು ಆನಂದ್ ಆಹುಜಾ ಜೊತೆ ಲಂಡನ್‌ನಲ್ಲಿ ಸೆಟಲ್ ಆಗಿದ್ದ ಸೋನಂ ಕಪೂರ್ ಒಂದಷ್ಟು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕವೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಅವರು ಇದೀಗ ಗರ್ಭಿಣಿ ಅನ್ನೋ ವಿಚಾರವನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸೋನಂ ಮತ್ತು ಆನಂದ್ ಅಹುಜಾ ದಂಪತಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದು, ಫೋಟೋ ಶೂಟ್‌ ಕೂಡ ಮಾಡಿಸಿದ್ದಾರೆ.

  ಪತಿ ಆನಂದ್ ಅಹುಜಾ ಮಡಿಲಿನಲ್ಲಿ ಮಲಗಿ ಪೋಸ್ ನೀಡಿರುವ ಸೋನಂ ಕಪೂರ್ ಕಪ್ಪು ಬಣ್ಣದ ಜಂಪ್ ಸೂಟ್ ಮಾಧರಿಯ ಬಟ್ಟೆ ಧರಿಸಿದ್ದಾರೆ. ಇನ್ನು ಆನಂದ್ ಆಹುಜಾ ಕೂಡ ಬಿಳಿ ಬಣ್ಣದ ಬಟ್ಟೆ ತೊಟ್ಟಿದ್ದು ಈ ಖುಷಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೋಗ್ ಛಾಯಾಗ್ರಾಹಕ ಆಶಿಶ್ ಶಾ ಇವರಿಬ್ಬರ ಸುಂದರ ಚಿತ್ರವನ್ನು ಸೆರೆ ಹಿಡಿದಿದ್ದು, ರಿಯಾ ಕಪೂರ್ ಸೋನಂ ಕಪೂರ್‌ಗೆ ಸ್ಟೈಲಿಸ್ಟ್ ಆಗಿದ್ದಾರೆ.

  ಈ ಖುಷಿ ವಿಚಾರವನ್ನು ಹಂಚಿಕೊಂಡಿರುವ ಸೋನಂ ಕಪೂರ್ ಹೀಗೆಂದು ಬರೆದುಕೊಂಡಿದ್ದಾರೆ. "ನಾಲ್ಕು ಕೈಗಳು ನಾವು ನಿಮ್ಮನ್ನು ಅತ್ಯುತ್ತಮವಾಗಿ ಬೆಳೆಸಲು. ಎರಡು ಹೃದಯಗಳು ಅದು ನಿಮ್ಮ ಪ್ರತಿ ಹೆಜ್ಜೆಯೊಂದಿಗೆ ನಾವಿರಲು. ಒಂದು ಕುಟುಂಬ ನಿಮಗೆ ಪ್ರೀತಿ ಮತ್ತು ಬೆಂಬಲವನ್ನು ನೀಡಲು. ನಿಮ್ಮನ್ನು ಸ್ವಾಗತಿಸಲು ನಾವು ಕಾಯಲು ಸಾಧ್ಯವಿಲ್ಲ. #ಪ್ರತಿದಿನವೂ ಅಪೂರ್ವ" ಎಂದು ಬರೆದುಕೊಂಡಿದ್ದಾರೆ. ಸೋನಂ ಕಪೂರ್ ಪೋಸ್ಟ್‌ಗೆ ಹಲವರು ಕಮೆಂಟ್ ಕೂಡ ಮಾಡುತ್ತಿದ್ದಾರೆ.

  ಸೋನಂ ಕಪೂರ್ ಈ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ ಹಲವು ಸ್ಟಾರ್ ಸೆಲೆಬ್ರೆಟಿಗಳು ಕಮೆಂಟ್ ಮಾಡುವ ಮೂಲಕ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ. ನಟಿ ಕರೀನಾ ಕಪೂರ್ ಕೂಡ ಅವರನ್ನು ಅಭಿನಂದಿಸುತ್ತಾ, "ಸುದ್ದಿ ತಿಳಿದು ನಿಮ್ಮ ಬಗ್ಗೆ ತುಂಬ ಖುಷಿಯಾಗುತ್ತಿದೆ. ಮಕ್ಕಳೊಂದಿಗೆ ಆಟವಾಡಲು ಕಾಯಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವರು ಸೋನಂ ಕಪೂರ್ ದಂಪತಿಗೆ ಶುಭ ಕೋರುತ್ತಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ ಸೋನಂ ಕಪೂರ್ ದಂಪತಿ ಮತ್ತು ಕುಟುಂಬ ಸದಸ್ಯರು.

  English summary
  Sonam Kapoor took to Instagram to announce the news that she is pregnent through a photoshoot with her husband Anand Ahuja and with an adorable note that she penned for her unborn child.
  Monday, March 21, 2022, 13:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X