»   » ನಟಿ ಸೋನಂ ಕಪೂರ್ 'ಎಲ್ಲೇ' ಮೀರಿದ ಚಿತ್ರಗಳು

ನಟಿ ಸೋನಂ ಕಪೂರ್ 'ಎಲ್ಲೇ' ಮೀರಿದ ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನಲ್ಲಿ ಈಗಷ್ಟೆ ತಮ್ಮದೇ ಆದಂತಹ ಅಭಿಮಾನಿಗ ಬಳಗವನ್ನು ಸೃಷ್ಟಿಸಿಕೊಂಡು ಮುನ್ನುಗ್ಗುತ್ತಿರುವ ಬೆಡಗಿ ಸೋನಂ ಕಪೂರ್. ಈಗ ಹಾಟ್ ಅವತಾರದಲ್ಲಿ ಪಡ್ಡೆಗಳನ್ನೂ ಕೆಣಕುತ್ತಿದ್ದಾರೆ. ಇತ್ತೀಚೆಗೆ 'ಎಲ್ಲೇ' ನಿಯತಕಾಲಿಗೆಯಲ್ಲಿ ಎಲ್ಲೇ ಮೀರಿದ್ದಾರೆ.

ಅವರ ಚಿತ್ರಗಳು ಸಖತ್ ಹಾಟ್ ಆಗಿದ್ದು ಇದೇ ಮೊದಲ ಬಾರಿಗೆ ತಮ್ಮ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ. ತಾನೂ ಯಾವ ಬಿಂಕದ ಬೆಡಗಿಗಿಂತಲೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಾಲಿವುಡ್ ಚಿತ್ರಜಗತ್ತಿನಲ್ಲಿ ಬಿಚ್ಚಾಟದಲ್ಲಿ ಸಿಕ್ಕಾಪಟ್ಟೆ ಕಾಂಪಿಟೇಷನ್ ಶುರುವಾಗಿರುವುದು ಗೊತ್ತೇ ಇದೆಯಲ್ಲಾ.

ಈ ವರ್ಷ ಸೋನಂ ಅಭಿನಯದ ಚಿತ್ರಗಳು ಸಖತ್ ಸದ್ದು ಮಾಡಿವೆ. ರಾಂಜಾನಾ ಹಾಗೂ ಭಾಗ್ ಮಿಲ್ಕಾ ಭಾಗ್ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಒಳ್ಳೆಯ ಕಮಾಯನ್ನೇ ಮಾಡಿವೆ. ಈಗ ಕೆಂಪುಹಾಸಿನ ಮೇಲೆ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಸ್ಲೈಡ್ ಗಳಲ್ಲಿ ನೋಡಿ ಸೋನಂ ಹಾಟ್ ಅವತಾರ.

ಓರಗೆಯ ಬೆಡಗಿಯನ್ನು ಹಿಂದಿಕ್ಕಿದ ಬೆಡಗಿ

ಕಪೂರ್ ಖಾನ್ ದಾನಿಗೆ ಸೇರಿದ ಈ ಬೆಡಗಿ ತನ್ನ ಓರಗೆಯ ಬೆಡಗಿಯನ್ನು ಹಿಂದಿಕ್ಕಿ ಮುಂದೆ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿಂದೊಮ್ಮೆ ತಮ್ಮ ದೇಹಸಿರಿಯನ್ನು 'ಜಿಕ್ಯು' ನಿಯತಕಾಲಿಕೆಯಲ್ಲಿ ಬಿಚ್ಚಿಟ್ಟಿದ್ದು ತಮ್ಮ ವೃತ್ತಿ ಬದುಕಿನ ಹಾದಿಯನ್ನು ಇನ್ನಷ್ಟು ಸುಗಮವಾಗಿಸಿಕೊಳ್ಳಲು ಹೊರಟಿದ್ದಾರೆ.

ಕ್ಯಾನೆ ಚಿತ್ರೋತ್ಸವದಲ್ಲೂ ಎಲ್ಲರ ಗಮನಸೆಳೆದಿದ್ದರು

ಈ ಹಿಂದೆ ವೋಗ್ ಎಂಬ ನಿಯತಕಾಲಿಕೆಯಲ್ಲಿ ಎರಡು ಸಲ ತಮ್ಮ ವೈಯಾರ ಬಿಚ್ಚಿಟ್ಟಿದ್ದರು ಈ ಸುಂದರಿ. ಈ ಬಾರಿ ಅದೆಂಥದೋ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ನಡೆದ ಕ್ಯಾನೆ ಚಲನಚಿತ್ರೋತ್ಸವದಲ್ಲೂ ತಮ್ಮದೇ ಆದಂತಹ ಉಡುಗೆತೊಡುಗೆಯಲ್ಲಿ ಸೋನಂ ಎಲ್ಲರ ಗಮನಸೆಳೆದಿದ್ದರು.

ಟ್ವಿಟ್ಟರ್ ನಲ್ಲೂ ಸೋನಂಗೆ ಅತ್ಯಧಿಕ ಅಭಿಮಾನಿಗಳು

ಟ್ವಿಟ್ಟರ್ ಖಾತೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ತಾರೆ. ಅವರೆಲ್ಲರಿಗೂ ಆಗಾಗ ಈ ರೀತಿಯ ಹಾಟ್ ಚಿತ್ರಗಳ ಮೂಲಕ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಸೋನಂ. ಇತ್ತೀಚೆಗೆ ಒಂದು ಸಣ್ಣ ಎಡವಟ್ಟನ್ನೂ ಮಾಡಿಕೊಂಡಿದ್ದರು ಸೋನಂ.

wardrobe malfunctionನಿಂದ ಸ್ವಲ್ಪದಲ್ಲಿ ಪಾರು

ಅದೇನೆಂದರೆ ಕಾರ್ಯಕ್ರಮವೊಂದರಲ್ಲಿ ಅಚಾನಕ್ ಆಗಿ ಅವರ ಬ್ರಾ ಕಾಣಿಸಿಕೊಂಡಿತ್ತು. ಈ ಮೂಲಕ wardrobe malfunctionನಿಂದ ಸ್ವಲ್ಪದಲ್ಲಿ ಪಾರಾಗಿದ್ದರು. ಸದಾ ವಿವಾದಗಳಿಂದ ದೂರ ಇರುವ ಸೋನಂ ಗಾಸಿಪ್ ಗಳಲ್ಲೂ ಮಿಂಚಿದ್ದು ಕಮ್ಮಿ.

ಮೂರು ಚಿತ್ರಗಳಲ್ಲಿ ಸೋನಂ ಕಪೂರ್ ಬಿಜಿ

ಸದ್ಯಕ್ಕೆ ಮೂರು ಚಿತ್ರಗಳಲ್ಲಿ ಸೋನಂ ಬಿಜಿ. ಒಂದು 'ಖುಬ್ಸೂರತ್ ' ಚಿತ್ರವಾದರೆ ಇನ್ನೆರಡು ಚಿತ್ರಗಳಿಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಯಶ್ ರಾಜ್ ಜೊತೆಗಿನ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇನ್ನೆರಡು ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

English summary
Bollywood actress Sonam Kapoor unveils her sexiest side in her latest photo shoot for ELLE magazine. The actress has no qualms it seems when it comes to sizzling in some revealing costumes, which provoke youths more.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada