twitter
    For Quick Alerts
    ALLOW NOTIFICATIONS  
    For Daily Alerts

    ''ತಿರುಚಿ ಬರೆದ ಚಿತ್ರಕಥೆಯಲ್ಲಿ ರಿಯಾ ಚಕ್ರವರ್ತಿ ಬಲಿಪಶು ಆದಳಷ್ಟೇ''

    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅಪರಾಧಿಯಂತೆ ಬಿಂಬಿತವಾದ ನಟಿ ರಿಯಾ ಚಕ್ರವರ್ತಿ ಈಗ ನಿಧಾನವಾಗಿ ಎಲ್ಲದರಿಂದ ಹೊರಬರುತ್ತಿದ್ದಾರೆ. ಒಂದು ತಿಂಗಳು ಜೈಲುವಾಸ ಅನುಭವಿಸಿ ಮಾನಸಿಕವಾಗಿ ನೊಂದಿದ್ದ ನಟಿ ಈಗ ಸಹಜ ಜೀವನದ ಕಡೆ ಹೆಜ್ಜೆಯಿಟ್ಟಿದ್ದಾರೆ.

    ಜೈಲಿನಿಂದ ಹೊರಬಂದ ಬಳಿಕ ಮನೆಯಲ್ಲಿ ಬಂಧಿಯಾಗಿದ್ದ ರಿಯಾ, ಇತ್ತೀಚಿಗಷ್ಟೆ ಕೆಲವು ಸ್ನೇಹಿತರ ಜೊತೆ ಹೊರಗೆ ಬಂದಿದ್ದರು. ಬಾಲಿವುಡ್‌ನಲ್ಲಿ ರಿಯಾ ಅವಕಾಶಗಳನ್ನು ಕಳೆದುಕೊಂಡರು, ಇನ್ಮುಂದೆ ಸಿನಿಮಾ ಮಾಡುವುದು ಕಷ್ಟ ಎಂದೆಲ್ಲ ಚರ್ಚೆಯಾಗುತ್ತಿರುವಾಗಲೇ ಬಿಟೌನ್‌ಗೆ ಕಂಬ್ಯಾಕ್ ಮಾಡುವ ತಯಾರಿ ನಡೆಸಿದ್ದಾರೆ ಎಂಬ ವಿಚಾರವೂ ಸುದ್ದಿಯಾಗಿತ್ತು.

    ಮತ್ತೊಮ್ಮೆ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ ರಿಯಾ ಚಕ್ರವರ್ತಿ ಮತ್ತು ಸಹೋದರಮತ್ತೊಮ್ಮೆ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ ರಿಯಾ ಚಕ್ರವರ್ತಿ ಮತ್ತು ಸಹೋದರ

    ''ಜೈಲಿಗೆ ಹೋಗಿ ಬಂದ ನಂತರ ರಿಯಾ ಚಕ್ರವರ್ತಿಯ ಸಿನಿ ಲೈಫ್ ಮುಗಿದಿದೆ'' ಎನ್ನಲಾಗಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಹಿರಿಯ ನಟಿ ಸೋನಿ ರಜ್ದಾನ್, ರಿಯಾ ಚಕ್ರವರ್ತಿ ಪರ ಬೆಂಬಲಕ್ಕೆ ನಿಂತಿದ್ದಾರೆ.

    Actress Soni razdan supports rhea chakraborty

    ''ರಿಯಾ ಚಕ್ರವರ್ತಿಯನ್ನು ಜೈಲಿಗೆ ಕಳುಹಿಸಿದ ವ್ಯಕ್ತಿಗಳು ಬಗ್ಗೆ ಸ್ಪಷ್ಟವಾಗಿ ತಿಳಿದಿದೆ, ಹಾಗೂ ಕೆಲವರು ತಿರುಚಿ ಬರೆದ ಚಿತ್ರಕಥೆಯಲ್ಲಿ ಆಕೆ ಬಲಿಪಶು ಆದಳಷ್ಟೇ. ರಿಯಾ ಜೊತೆ ಯಾರು ಕೆಲಸ ಮಾಡಲ್ಲ ಎಂದು ಏಕೆ ಭಾವಿಸಬೇಕು, ಅವಳು ಚೆನ್ನಾಗಿ ಅವಕಾಶ ಪಡೆಯುತ್ತಾಳೆ, ನನಗೆ ಆ ಭರವಸೆ ಇದೆ'' ಎಂದು ಸೋನಿ ತಿರುಗೇಟು ನೀಡಿದ್ದಾರೆ.

    ಆಕೆ ಪ್ರತಿಭಾವಂತೆ, ಮತ್ತೆ ಪುಟಿದೇಳುತ್ತಾಳೆ: ರಿಯಾ ಚಕ್ರವರ್ತಿ ಬಗ್ಗೆ 'ಚೆಹ್ರೆ' ನಿರ್ದೇಶಕ ರೂಮಿ ಮಾತುಆಕೆ ಪ್ರತಿಭಾವಂತೆ, ಮತ್ತೆ ಪುಟಿದೇಳುತ್ತಾಳೆ: ರಿಯಾ ಚಕ್ರವರ್ತಿ ಬಗ್ಗೆ 'ಚೆಹ್ರೆ' ನಿರ್ದೇಶಕ ರೂಮಿ ಮಾತು

    Recommended Video

    ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada

    ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ರೂಮಿ ಜಾಫೇರಿ ಅವರು ರಿಯಾ ಕಂಬ್ಯಾಕ್‌ಗೆ ಬಗ್ಗೆ ಮಾಹಿತಿ ನೀಡಿದ್ದರು. ''ಇತ್ತೀಚಿಗೆ ನಾನು ರಿಯಾ ಅವರನ್ನು ಭೇಟಿ ಮಾಡಿದೆ. ಬಹಳಷ್ಟು ನೊಂದಿದ್ದಾರೆ. ತುಂಬಾ ಶಾಂತವಾಗಿ ಕಾಣಿಸಿಕೊಂಡಳು. ಅವಳ ಕೆಲವು ನಿರ್ಧಾರಗಳಿಂದ ನಾವು ಅವಳನ್ನು ದೂಷಿಸಲು ಸಾಧ್ಯವಿಲ್ಲ. 2021ಕ್ಕೆ ರಿಯಾ ಬಾಲಿವುಡ್‌ಗೆ ಕಂಬ್ಯಾಕ್ ಮಾಡ್ತಾಳೆ'' ಎಂದು ತಿಳಿಸಿದ್ದರು.

    English summary
    'She was an innocent victim of a very twisted design': Actress Soni razdan supports rhea chakraborty.
    Tuesday, January 19, 2021, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X