»   » 'ಅತಿಲೋಕ ಸುಂದರಿ' ಶ್ರೀದೇವಿ ಅಗಲಿಕೆಗೆ ಕಂಬನಿ ಮಿಡಿದ ಬಾಲಿವುಡ್

'ಅತಿಲೋಕ ಸುಂದರಿ' ಶ್ರೀದೇವಿ ಅಗಲಿಕೆಗೆ ಕಂಬನಿ ಮಿಡಿದ ಬಾಲಿವುಡ್

Posted By:
Subscribe to Filmibeat Kannada

ಬಾಲಿವುಡ್ ತಾರೆ ಶ್ರೀದೇವಿ (54) ಹೃದಯಾಘಾತದಿಂದ ನಿನ್ನೆ ರಾತ್ರಿ (ಫೆಬ್ರವರಿ 24) ದುಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಪಂಚಭಾಷೆಗಳಲ್ಲಿ ಮಿನುಗಿದ 'ಅತಿಲೋಕ ಸುಂದರಿ' ಶ್ರೀದೇವಿ ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗವೇ ದಿಗ್ಭ್ರಮೆಗೊಂಡಿದೆ.

ನಟಿ ಶ್ರೀದೇವಿ ಇನ್ನಿಲ್ಲ ಎಂಬ ಕೂಗು ಬಾಲಿವುಡ್ ಗೆ ಬೇಸರ ತಂದಿದೆ. ಶ್ರೀದೇವಿ ನಿಧನದ ಸುದ್ದಿ ಕೇಳಿ ಅವರ ಒಡನಾಡಿಗಳು, ಬಾಲಿವುಡ್ ನಟ-ನಟಿಯರು, ನಿರ್ದೇಶಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ನಂಬರ್ 1 ನಟಿಯಾಗಿ ಮಿಂಚಿದ ಶ್ರೀದೇವಿ ಬಗ್ಗೆ ಖ್ಯಾತನಾಮರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀದೇವಿ ಬಗ್ಗೆ ಯಾರ್ಯಾರು ಏನು ಹೇಳಿದ್ದಾರೆ ಎಂಬುದನ್ನ ಮುಂದೆ ನೋಡಿ...

ಶಾಕ್ ಆದ ಸುಶ್ಮಿತಾ ಸೇನ್

''ಈಗಷ್ಟೇ ಶ್ರೀದೇವಿ ಮೇಡಂ ನಿಧನದ ಸುದ್ದಿ ಕಿವಿಗೆ ಬಿತ್ತು. ನಾನು ಶಾಕ್ ನಲ್ಲಿದ್ದೇನೆ'' ಎಂದು ಕಣ್ಣೀರಿಡುತ್ತಾ ಟ್ವೀಟ್ ಮಾಡಿದ್ದಾರೆ ಸುಶ್ಮಿತಾ ಸೇನ್

ಪದಗಳೇ ಹೊರಡುತ್ತಿಲ್ಲ

''ನನಗೆ ಶಾಕ್ ಆಗಿದೆ. ಪದಗಳೇ ಹೊರಡುತ್ತಿಲ್ಲ'' ಎಂದು ನಟಿ ಅನುಶ್ಕಾ ಶರ್ಮಾ ಸಂತಾಪ ಸೂಚಿಸಿದ್ದಾರೆ.

ದಿಗ್ಭ್ರಮೆಗೊಂಡಿರುವೆ

''ಶ್ರೀದೇವಿ ನಮ್ಮ ಜೊತೆ ಇನ್ಮುಂದೆ ಇರಲ್ಲ ಎಂದು ಕಲ್ಪನೆ ಮಾಡಿಕೊಳ್ಳುವುದಕ್ಕೆ ಅಸಾಧ್ಯವಾಗಿದೆ. ಶ್ರೀದೇವಿ ನಿಧನದ ವಾರ್ತೆ ಕೇಳಿ ದಿಗ್ಭ್ರಮೆಗೊಂಡಿರುವೆ. ಶ್ರೀದೇವಿ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನ ಆ ದೇವರು ನೀಡಲಿ ಎಂದು ಪ್ರಾರ್ಥಿಸುವೆ'' ಅಂತ ಗಾಯಕ ಶಂಕರ್ ಮಹಾದೇವನ್ ಟ್ವೀಟ್ ಮಾಡಿದ್ದಾರೆ.

ಹೃದಯ ಚೂರಾಗಿದೆ

''ಇದು ಶಾಕಿಂಗ್ ನ್ಯೂಸ್. ಚಿತ್ರರಂಗ ಕಂಡ ಅತ್ಯುತ್ತಮ ನಟಿಯರ ಪೈಕಿ ಶ್ರೀದೇವಿ ಕೂಡ ಒಬ್ಬರು. ಸದ್ಮಾ ಚಿತ್ರದಿಂದ ಹಿಡಿದು ಚಾಲ್ ಬಾಝ್, ಚಾಂದ್ನಿ, ಖುದ್ ಗವಾ ಮತ್ತು ಲಮ್ಗೆ ವರೆಗೂ ಆಕೆ ಪ್ರತಿಭಾವಂತ ನಟಿ. ನನ್ನ ಹೃದಯ ಚೂರಾಗಿದೆ'' - ನಟಿ ಇಶಾ ಕೊಪ್ಪಿಕರ್

ಕರಾಳ ದಿನ

''ನನಗೆ ಪದಗಳೇ ಹೊರಡುತ್ತಿಲ್ಲ. ಇಂದು ಕರಾಳ ದಿನ'' - ಟ್ವೀಟ್ ಮಾಡಿದ್ದಾರೆ ಪ್ರಿಯಾಂಕಾ ಛೋಪ್ರಾ

ನಿಜಕ್ಕೂ ಶಾಕ್ ಆಗಿದೆ

''ಶ್ರೀದೇವಿ ಮೇಡಂ ಸಾವಿನ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಗಿದೆ'' - ಸಿದ್ಧಾರ್ಥ್ ಮಲ್ಹೋತ್ರ

ಟೆರಿಬಲ್ ನ್ಯೂಸ್

''ಶ್ರೀದೇವಿ ಇನ್ನಿಲ್ಲ ಎಂಬ ಟೆರಿಬಲ್ ಸುದ್ದಿ ಕೇಳಿ ಪದಗಳ ವರ್ಣನೆಗಿಂತ ಹೆಚ್ಚು ಶಾಕ್ ಆಗಿದೆ'' - ನಟ ರಿತೇಶ್ ದೇಶ್ ಮುಖ್.

ಹೃದಯ ಛಿದ್ರವಾಗಿದೆ

''ನನ್ನ ಅಚ್ಚುಮೆಚ್ಚಿನ ಶ್ರೀದೇವಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ನನ್ನ ಹೃದಯ ಛಿದ್ರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ಪ್ರೀತಿ ಜಿಂಟಾ

English summary
Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, Bollywood celebrities have tweeted expressing their grief.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada