For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ

  By Naveen
  |

  ನಟಿ ಶ್ರೀದೇವಿ ನಿಧನ ಭಾರತೀಯ ಚಿತ್ರರಂಗಕ್ಕೆ ಆಗಿರುವ ದೊಡ್ಡ ನಷ್ಟ. ಅವರನ್ನು ಕೆಳದುಕೊಂಡ ಚಿತ್ರರಂಗ ಈಗ ಕಣ್ಣೀರು ಹಾಕುತ್ತಿದ್ದೆ. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟಿ ಲೀಲಾವತಿ ಕೂಡ ಶ್ರೀದೇವಿ ಬಗ್ಗೆ ಮಾತನಾಡಿದ್ದಾರೆ.

  ನಟಿ ಶ್ರೀದೇವಿ ಕನ್ನಡ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು. ಅದರಲ್ಲಿಯೂ ಲೀಲಾವತಿ ಜೊತೆಗೆ ಅವರ ಮಗಳಾಗಿ ಶ್ರೀದೇವಿ ನಟನೆ ಮಾಡಿದ್ದರು. ಶ್ರೀದೇವಿ ಜೊತೆಗೆ ಕಳೆದ ಆ ದಿನಗಳನ್ನು ಲೀಲಾವತಿ ನೆನಪು ಮಾಡಿಕೊಂಡರು. ಇಂತಹ ಚಿಕ್ಕವಯಸ್ಸಿನಲ್ಲಿ ಬರದ ಲೋಕಕ್ಕೆ ಹೋದ ಶ್ರೀದೇವಿ ಅವರನ್ನು ನೆನೆಸಿಕೊಂಡು ಲೀಲಾವತಿ ಕಣ್ಣೀರು ಸುರಿಸಿದರು.

  ''ಇಂದು ಶ್ರೀದೇವಿ ಅವರನ್ನು ನೆನೆದು ಇಡೀ ಜಗತ್ತೆ ಕಣ್ಣೀರು ಹಾಕುತ್ತಿದೆ. ನನ್ನ ಮನಸಿಗೆ ಬಹಳ ನೋವು ಆಗಿದೆ. ಆ ಮಕ್ಕಳಿಗಾಗಿ ಅವರು ಇನ್ನೂ ಬದುಕಬೇಕಿತ್ತು. ಆ ರೀತಿಯ ಸುಂದರಿಯನ್ನು ಯಾರು ಮತ್ತೆ ನೋಡುವುದಕ್ಕೆ ಆಗುವುದಿಲ್ಲ. ನನ್ನ ಜೊತೆಗೆ ಶ್ರೀದೇವಿ ನಟಿಸುವಾಗ ಅವರ ಅಮ್ಮ ಒಮ್ಮೆ ನನ್ನ ಆಶೀರ್ವಾದ ಪಡೆಯುವಂತೆ ಅವರಿಗೆ ಹೇಳಿದರು. ನಾನು ಆಗ ನೀನು ದೊಡ್ಡ ನಟಿಯಾಗು ಅಂತ ಹೇಳಿದ್ದೆ. ಅದೇ ರೀತಿ ಆಕೆ ದೊಡ್ಡ ನಟಿ ಆದರು. ಆಕೆ ನನಗೆ ಮಗಳಾಗಿ ನಟನೆ ಮಾಡಿದ್ದಳು. ಈಗ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಆಕೆ ಹೋಗಿದ್ದಾಳೆ. ಎಲ್ಲರನ್ನು ಪ್ರೀತಿ ಮಾಡುವುದನ್ನು ಶ್ರೀದೇವಿ ಅವರನ್ನು ನೋಡಿ ಕಲಿಯಬೇಕು. ಆಕೆ ಶ್ರೇಷ್ಟಳು.'' ಎಂದು ಲೀಲಾವತಿ ಹೇಳಿದರು.

  ಅಂದಹಾಗೆ, ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ(54) ಹೃದಯಾಘಾತದಿಂದ ದುಬೈನಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಪುತ್ರಿ ಖುಷಿ ಜೊತೆ ದುಬೈಗೆ ಹಾರಿದ್ದರು. ದುಬೈನಲ್ಲಿ ಮೋಹಿತ್ ಮಾರ್ವಾ ವಿವಾಹ ಮಹೋತ್ಸವ ಇದ್ದ ಕಾರಣ ಇಡೀ ಕಪೂರ್ ಫ್ಯಾಮಿಲಿ ಅಲ್ಲಿಗೆ ತೆರಳಿತ್ತು. ಈ ವೇಳೆ ಈ ಘಟನೆ ನಡೆದಿದೆ.

  English summary
  Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, Kannada actress Leelavathi express his grief.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X