ಸಾವಿಗೂ ಮುನ್ನ ನೆರವೇರಲಿಲ್ಲ ಶ್ರೀದೇವಿ ಅವರ ಈ ಒಂದು ಆಸೆ
ಇಷ್ಟು ದಿನ ನಟಿ ಶ್ರೀ ದೇವಿಯ ಸಿನಿಮಾಗಳ ಬಗ್ಗೆ ಹೊಸ ಹೊಸ ಸುದ್ದಿ ಬರುತ್ತಿತ್ತು. ಆದರೆ ಇಂದು ಅವರ ಸಾವಿನ ಸುದ್ದಿ ಬಂದು ಎಲ್ಲರಿಗೆ ಆಘಾತ ಆಗುವಂತೆ ಮಾಡಿದೆ. ನಾಲ್ಕನೇ ವಯಸ್ಸಿನಲ್ಲಿ ನಟನೆ ಶುರು ಮಾಡಿದ ಶ್ರೀದೇವಿಯ ಅವರ ಸಿನಿಮಾ ಪ್ರಯಾಣ ಅಂತ್ಯವಾಗಿದೆ.
ಅಷ್ಟೊಂದು ಸಿನಿಮಾಗಳು, ಪ್ರಶಸ್ತಿ, ಹೆಸರು, ಆಸ್ತಿ ಎಲ್ಲವನ್ನು ಬಿಟ್ಟು ಶ್ರೀದೇವಿ ಹೋಗಿದ್ದಾರೆ. ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಆಗಿದ್ದ ಇವರು ಇಷ್ಟೇಲ್ಲ ಸಾಧನೆ ಮಾಡಿದರು ಕೂಡ ಅವರ ಒಂದು ಆಸೆ ಇನ್ನು ಕೂಡ ನೆರವೇರಿರಲ್ಲ. ತನ್ನ ರೀತಿ ತನ್ನ ಮಗಳು ಕೂಡ ನಟಿ ಆಗಬೇಕು ಎಂಬ ಕನಸು ಹೊಂದಿದ್ದ ಶ್ರೀದೇವಿ ಅದನ್ನು ನೋಡುವದಕ್ಕೆ ಮುಂಚೆಯೇ ವಿಧಿವಶರಾಗಿದ್ದಾರೆ.
ಶ್ರೀದೇವಿ ಅವರ ಮೊದಲ ಪುತ್ರಿ ಜಾನ್ವಿ ಆ ಸಿನಿಮಾ ಮಾಡ್ತಾರೆ..ಈ ಸಿನಿಮಾ ಮಾಡ್ತಾರೆ ಎನ್ನುವ ಅನೇಕ ಸುದ್ದಿಗಳು ಬಹಳ ದಿನದಿಂದ ಕೇಳಿಬರುತ್ತಿತ್ತು. ಈ ಯುವರಾಣಿಯ ಬಾಲಿವುಡ್ ಪ್ರವೇಶ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದರು. ಜೂನಿಯರ್ ಶ್ರೀದೇವಿಯ ಅದ್ದೂರಿ ಎಂಟ್ರಿಗೆ ವೇದಿಕೆ ಸಿದ್ಧವಾಗಿತ್ತು. ಅದೇ ರೀತಿ 'ದಡಕ್' ಎಂಬ ಚಿತ್ರ ಕೂಡ ಶುರುವಾಯ್ತು. ಇನ್ನು ಜಾನ್ವಿ ಅವರ ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ.

'ಜಾನ್ವಿ' ಅವರ 'ದಡಕ್' ಸಿನಿಮಾ ಶೂಟಿಂಗ್ ಸದ್ಯ ನಡೆಯುತ್ತಿತ್ತು. ಅದೇ ಕಾರಣದಿಂದ ಅಮ್ಮನ ಜೊತೆಗೆ ಜಾನ್ವಿ ದುಬೈಗೆ ಹೋಗಿರಲಿಲ್ಲ. ಆದರೆ ವಿಧಿ ಅದೇ ಸಮಯಕ್ಕೆ ಮಗಳಿನಿಂದ ಅಮ್ಮನನ್ನು ಕಿತ್ತುಕೊಂಡಿದೆ. ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಶ್ರೀದೇವಿ ಅಲ್ಲಿಯೇ ನಿಧನ ಹೊಂದಿದ್ದಾರೆ.
ತಮ್ಮ ಮಗಳನ್ನು ಬೆಳ್ಳಿ ತೆರೆಯ ಮೇಲೆ ನೋಡಬೇಕು ಎನ್ನುವ ಶ್ರೀದೇವಿ ಕನಸು ಹಾಗೆ ಉಳಿದು ಹೋಗಿದೆ. ಮಗಳ ಮೊದಲ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ತಾಯಿ ಶ್ರೀದೇವಿ ನಿಧನ ಹೊಂದಿದ್ದಾರೆ. ಜಾನ್ವಿ ನಟನೆಯ 'ದಡಕ್' ಸಿನಿಮಾ ಜುಲೈನಲ್ಲಿ ರಿಲೀಸ್ ಆಗಲಿದೆ.


Click it and Unblock the Notifications











