For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಉಟ್ಟಿದ್ದ ಸೀರೆಗಳ ಹರಾಜು: 'ಇಂಗ್ಲಿಷ್‌-ವಿಂಗ್ಲಿಷ್‌' ಸಿನಿತಂಡದಿಂದ ಹೀಗೊಂದು ಸಮಾಜ ಸೇವೆ!

  |

  90ರ ದಶಕದ ಬಹುಬೇಡಿಕೆಯ ನಟಿ ಶ್ರೀದೇವಿ ಅಗಲಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ ಚಿತ್ರರಂಗ ಸದಾ ಅವರನ್ನು ಸ್ಮರಿಸುತ್ತದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಯ ಚಿತ್ರಗಳಲ್ಲಿ ಒಟ್ಟು 300 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದ ನಟಿ ಶ್ರೀದೇವಿ ಭಾರತೀಯ ಚಿತ್ರರಂಗದ ಎವರೆಗ್ರೀನ್‌ ಬ್ಯೂಟಿ ಸ್ಟಾರ್‌

  ತಮ್ಮ ಚಂದ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಶ್ರೀದೇವಿ ಎಲ್ಲರ ಮನಸ್ಸು ಕದ್ದಿದ್ದರು. ತಮ್ಮ 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ಬಾಲಿವುಡ್‌ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್‌ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಶ್ರೀದೇವಿ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ.

  ಸೋಶಿಯಲ್​ ಮೀಡಿಯಾದಲ್ಲಿ ಕಂಗನಾ ಹೊಸ ಪೋಸ್ಟ್​: ಶ್ರೀದೇವಿ ಬಗ್ಗೆ ಹೇಳಿದ್ದೇನು..?ಸೋಶಿಯಲ್​ ಮೀಡಿಯಾದಲ್ಲಿ ಕಂಗನಾ ಹೊಸ ಪೋಸ್ಟ್​: ಶ್ರೀದೇವಿ ಬಗ್ಗೆ ಹೇಳಿದ್ದೇನು..?

  ಹೀಗಾಗಿ ಶ್ರೀದೇವಿ ಅವರ ಹೆಸರಿನಲ್ಲಿ ಒಂದು ಉತ್ತಮ ಕೆಲಸಕ್ಕೆ ಚಿತ್ರತಂಡವೊಂದು ಸಜ್ಜಾಗಿದೆ. ೧೯೯೭ರಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಶ್ರೀದೇವಿ, 2012ರಲ್ಲಿ 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರದ ಮೂಲಕ ಮತ್ತೆ ನಟನೆಗೆ ವಾಪಸ್‌ ಆದರು. ಗೌರಿ ಶಿಂಧೆ ನಿರ್ದೇಶನದ 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶ್ರೀದೇವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

  'ಇಂಗ್ಲಿಷ್‌-ವಿಂಗ್ಲಿಷ್‌' ಮೂಲಕ ಕಂಬ್ಯಾಕ್‌ ಮಾಡಿದ್ದ ಶ್ರೀದೇವಿ

  'ಇಂಗ್ಲಿಷ್‌-ವಿಂಗ್ಲಿಷ್‌' ಮೂಲಕ ಕಂಬ್ಯಾಕ್‌ ಮಾಡಿದ್ದ ಶ್ರೀದೇವಿ

  ಮಹಿಳಾ ಸಬಲೀಕರಣಕ್ಕೆ ಬೆಂಬಲ ನೀಡಿದ 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಕ್ಸ್‌ ಆಫೀಸ್‌ನಲ್ಲೂ ಯಶಸ್ಸು ಕಂಡಿರುವ ಇಂಗ್ಲಿಷ್‌-ವಿಂಗ್ಲಿಷ್‌ ಚಿತ್ರ ಅನೇಕ ಮಹಿಳೆಯರಿಗೆ ಸ್ಫೂರ್ತಿ ನೀಡಿದೆ. ಅಕ್ಟೋಬರ್ 5 2022ರಂದು ಶ್ರೀದೇವಿ ಅಭಿನಯದ 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರ ತೆರೆ ಕಂಡು ಹತ್ತು ವರ್ಷ ಕಳೆಯುತ್ತದೆ. ಈ ದಿನ ಸಂಭ್ರಮಾಚರಣೆಗಾಗಿ ನಟಿ ಶ್ರೀದೇವಿ ಅವರ ಹೆಸರಿನಲ್ಲಿ ಉತ್ತಮ ಕೆಲಸವೊಂದನ್ನು ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಶ್ರೀದೇವಿ ಉಟ್ಟಿದ್ದ ಸೀರೆಗಳು ಹರಾಜು

  ಶ್ರೀದೇವಿ ಉಟ್ಟಿದ್ದ ಸೀರೆಗಳು ಹರಾಜು

  'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರದಲ್ಲಿ ಶ್ರೀದೇವಿ ಕಂಪ್ಲೈಂಟ್ ಶಶಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡರು. ಒಬ್ಬ ಗೃಹಿಣಿ ಪಾತ್ರ ನಿರ್ವಹಿಸಿದ್ದ ನಟಿ ಶ್ರೀದೇವಿ ಈ ಚಿತ್ರದಲ್ಲಿ ತುಂಬಾ ಆಕರ್ಷಣೀಯವಾಗಿ ಕಂಡಿದ್ದರು. ಚಿತ್ರದಲ್ಲಿ ಆ ಪಾತ್ರಕ್ಕೆ ಒಪ್ಪುವಂತಿದ್ದ ಅವರ ಕಾಸ್ಟ್ಯೂಮ್‌ ಎಲ್ಲರ ಗಮನ ಸೆಳೆದಿತ್ತು. ಹೀಗಾಗಿ ಚಿತ್ರತಂಡ 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರದಲ್ಲಿ ಶ್ರೀದೇವಿ ಧರಿಸಿರುವ ಬಟ್ಟೆಯನ್ನು ಹರಾಜು ಹಾಕಲು ಮುಂದಾಗಿದ್ದಾರೆ. 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರದಲ್ಲಿ ಶ್ರೀದೇವಿ ಬಹುತೇಕ ಎಲ್ಲಾ ದೃಶ್ಯಗಳಲ್ಲೂ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರದ 10ನೇ ವರ್ಷದ ಸವಿ ನೆನಪಿಗಾಗಿ ಶ್ರೀದೇವಿ ಅವರು ಧರಿಸಿದ್ದ ಸೀರೆಯನ್ನು ಚಿತ್ರತಂಡ ಹರಾಜು ಹಾಕಲು ಮುಂದಾಗಿದೆ.

  10 ವರ್ಷಗಳಿಂದ ಸೇರೆ ಜೋಪಾನ ಮಾಡಿದ್ದೇನೆ

  10 ವರ್ಷಗಳಿಂದ ಸೇರೆ ಜೋಪಾನ ಮಾಡಿದ್ದೇನೆ

  ಅಕ್ಟೋಬರ್‌ 10ರಂದು ಮುಂಬೈನ ಅಂಧೇರಿ ಉಪನಗರದಲ್ಲಿ ಶ್ರೀದೇವಿ ಅವರು ಧರಿಸಿದ್ದ ಸೀರೆಯ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು 'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರದ ನಿರ್ದೇಶಕಿ ಗೌರಿ ಶಿಂಧೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಕ್ಟೋಬರ್‌ 10ರಂದು ಶ್ರೀದೇವಿ ಅವರು ಧರಿಸಿದ್ದ ಸೀರೆಯ ಹರಾಜು ಪ್ರಕ್ರಿಯೆ ನಡೆಯಲಿದೆ. ಸುಮಾರು 10 ವರ್ಷಗಳಿಂದ ಈ ಸೀರೆಗಳನ್ನು ಜೋಪಾನ ಮಾಡಿದ್ದೇನೆ. ಶ್ರೀದೇವಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೀರೆ ಖರೀದಿಸಿ. ಈ ಹರಾಜು ಪ್ರಕ್ರಿಯೆಯಲ್ಲಿ ಬಂದ ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಲಾಗುತ್ತದೆ ಎಂದಿದ್ದಾರೆ.

  ನಿರ್ದೇಶಕಿ ಗೌರಿ ಶಿಂಧೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

  ನಿರ್ದೇಶಕಿ ಗೌರಿ ಶಿಂಧೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

  'ಇಂಗ್ಲಿಷ್‌-ವಿಂಗ್ಲಿಷ್‌' ಚಿತ್ರತಂಡ ತಮ್ಮ 10ನೇ ವರ್ಷದ ಸಂಭ್ರಮಾಚರಣೆಗೆ ವಿಶೇಷವಾದ ಕೆಲಸಕ್ಕೆ ಮುಂದಾಗಿದೆ. ಶ್ರೀದೇವಿ ಅವರು ಧರಿಸಿದ್ದ ಸೀರೆಯ ಹರಾಜಿನಲ್ಲಿ ಬಂದ ಹಣವನ್ನು ಚಿತ್ರತಂಡ ದೇಶದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿದೆ. ಈ ಮೂಲಕ ತಮ್ಮ ಚಿತ್ರದ ಪರವಾಗಿ ಸಾಮಾಜಿಕ ಸೇವೆಗೆ ಮುಂದಾಗಿದೆ. ನಿರ್ದೇಶಕಿ ಗೌರಿ ಶಿಂಧೆ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಕ್ಟೋಬರ್‌ 10ರಂದು ನಡೆಯುವ ಶ್ರೀದೇವಿ ಅವರು ಧರಿಸಿದ್ದ ಸೀರೆಯ ಹರಾಜು ಪ್ರಕ್ರಿಯೆಯಲ್ಲಿ ಅವರ ಅಪಾರ ಅಭಿಮಾನಿಗಳು ಭಾಗಿಯಾಗುವ ಸಾಧ್ಯತೆ ಇದೆ.

  English summary
  Actress Sridevi's Sarees From English Vinglish Set To Be Auctioned as film completes 10 years.
  Wednesday, October 5, 2022, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X