»   » ಇದು ಶ್ರೀದೇವಿ ಪುತ್ರಿಯ ಸಿನಿಮಾ ಕಥೆಯಲ್ಲ, ಮದುವೆ ಸುದ್ದಿ.!

ಇದು ಶ್ರೀದೇವಿ ಪುತ್ರಿಯ ಸಿನಿಮಾ ಕಥೆಯಲ್ಲ, ಮದುವೆ ಸುದ್ದಿ.!

Posted By:
Subscribe to Filmibeat Kannada

ಬಾಲಿವುಡ್ ಎವರ್ ಗ್ರೀನ್ ಸುಂದರಿ ಶ್ರೀದೇವಿ ಇತ್ತೀಚೆಗೆ, ತಮ್ಮ ಚಿತ್ರಗಳಿಗಿಂತ ತಮ್ಮ ಮಗಳ ಚಿತ್ರಕ್ಕೆ ಸಂಬಂಧಪಟ್ಟಂತೆ ಹೆಚ್ಚು ಸುದ್ದಿಯಾಗುತ್ತಿದ್ದರು. ಶ್ರೀದೇವಿ ಪುತ್ರಿ ಯಾವ ಸಿನಿಮಾದಲ್ಲಿ ಅಭಿನಯಿಸ್ತಾರೆ, ಯಾರು ಡೈರೆಕ್ಟ್ ಮಾಡ್ತಾರೆ, ಯಾರು ಹೀರೋ.....ಹೀಗೆ ದಿನೇ ದಿನೇ ಇದೇ ಚರ್ಚೆಯಾಗಿತ್ತು.

'ಮಾಮ್' ನಂತರ 'ಮಿಸ್ಟರ್ ಇಂಡಿಯಾ 2'ನಲ್ಲಿ ಶ್ರೀದೇವಿ

ಆದ್ರೀಗ, ಶ್ರೀದೇವಿ ತಮ್ಮ ಮಗಳ ಜೀವನದ ಬಗ್ಗೆ ಶಾಕಿಂಗ್ ಸಂಗತಿಯೊಂದನ್ನ ಬಹಿರಂಗಪಡಿಸಿದ್ದಾರೆ. ಸುಮಾರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಮಹಾರಾಣಿಯಂತೆ ಮಿಂಚಿದ್ದ ಶ್ರೀದೇವಿ ಮಗಳ ವಿಚಾರದಲ್ಲಿ ಬಹುದೊಡ್ಡ ನಿರ್ಣಯ ಕೈಗೊಳ್ಳುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಏನದು? ಮುಂದೆ ಓದಿ......

ಜಾಹ್ನವಿ ಮದುವೆ ತಯಾರಿ?

ಶ್ರೀದೇವಿ ಪುತ್ರಿ ಜಾಹ್ನವಿ ಮದುವೆಗೆ ತಯಾರಿ ನಡೆಯುತ್ತಿದೆಯಾ ಎಂಬ ಕುತೂಹಲ ಈಗ ಎಲ್ಲರನ್ನ ಕಾಡುತ್ತಿದೆ. ಇದಕ್ಕೆ ಕಾರಣ ಸ್ವತಃ ಜಾಹ್ನವಿ ತಾಯಿ ಶ್ರೀದೇವಿ.

ಪತಿ ಬೋನಿ ಕಪೂರ್ ಜೊತೆಗೆ 3 ತಿಂಗಳ ಕಾಲ ಮಾತು ಬಿಟ್ಟಿದ್ದ ಶ್ರೀದೇವಿ.! ಯಾಕೆ.?

ಮಗಳ ಮದುವೆ ಬಗ್ಗೆ ಸುಳಿವು

ಶ್ರೀದೇವಿ ಅಭಿನಯದ 'ಮಾಮ್' ಚಿತ್ರದ ಪ್ರಮೋಷನ್ ವೇಳೆ ಮಾತನಾಡಿದ ನಟಿ ಶ್ರೀದೇವಿ, ತಮ್ಮ ಮಗಳ ಮದುವೆ ಬಗ್ಗೆ ಚಿಂತಿಸುತ್ತಿರುವುದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ, ಜಾಹ್ನವಿ ಮದುವೆಯ ಬಗ್ಗೆ ಈಗ ಎಲ್ಲೆಡೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಅಂತೂ ಇಂತೂ ಶ್ರೀದೇವಿ ಪುತ್ರಿ ಬಣ್ಣ ಹಚ್ಚುವುದು ಪಕ್ಕಾ ಆಯ್ತು.!

ಶ್ರೀದೇವಿ ಏನು ಹೇಳಿದರು?

ಮಗಳ ಚಿತ್ರದ ಬಗ್ಗೆ ಕೇಳಿದಾಗ ಶ್ರೀದೇವಿ ''ಚಿತ್ರರಂಗ ಕೆಟ್ಟ ಕ್ಷೇತ್ರವೇನು ಅಲ್ಲ, ನಾನು ಈ ರಂಗದಿಂದಲೇ ಬೆಳಕಿಗೆ ಬಂದವಳು ಆದರೆ ತಾಯಿಯಾಗಿ ಮಗಳ ಜೀವನ ಸುಖಮಯವಾಗಿರುವುದನ್ನು ನೋಡುವುದೇ ಖುಷಿ. ಜಾಹ್ನವಿ ಸಿನಿಮಾದಲ್ಲಿ ನಟಿಸುವುದಕ್ಕಿಂತ ಮದುವೆಯಾಗಿ ‘ಸೆಟ್ಲ್' ಆದರೆ ಹೆಚ್ಚು ಸಂತೋಷ' ಎಂದಿದ್ದಾರೆ. ಮೂಲಕ ಜಾಹ್ನವಿ ಆದಷ್ಟೂ ಬೇಗ ಮದುವೆ ಆಗಲು ಶ್ರೀದೇವಿ ನಿರ್ಧರಿಸಿದ್ದಾರೆ ಎಂಬುದು ಖಚಿತವಾಗಿದೆ.

ಸುರಸುಂದರಿ ಶ್ರೀದೇವಿ ಪುತ್ರಿ ಬಾಲಿವುಡ್ ಎಂಟ್ರಿ ಖಚಿತ

ಮದುವೆಯ ನಂತರ ನಟಿಸಲಿ

ಒಬ್ಬ ತಾಯಿ ಆಗಿ ಯೋಚಿಸಿರುವ ಶ್ರೀದೇವಿ ತಮ್ಮ ಪುತ್ರಿ ಮೊದಲು ಮದುವೆ ಆಗಲಿ. ನಂತರ ಸಿನಿಮಾಗಳಲ್ಲಿ ನಟಿಸಲಿ ಎಂದು ಮಗಳ ಜೀವನದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಶ್ರೀದೇವಿ ಕೂಡ ಮದುವೆ ನಂತರವೂ ಸತತವಾಗಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ.

ಕರಣ್ ಜೋಹರ್ ಚಿತ್ರದಲ್ಲಿ ಜಾಹ್ನವಿ.!

ಕರಣ್ ಜೋಹರ್ ನಿರ್ಮಾಣ ಮಾಡಲಿರುವ 'ಸ್ಟೂಡೆಂಟ್ ಆಫ್ ಇಯರ್-2' ಚಿತ್ರದ ಮೂಲಕ ಶ್ರೀದೇವಿ ಪುತ್ರಿ ಜಾಹ್ನವಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಇನ್ನು ಈ ಸುದ್ದಿ ಘೋಷಣೆ ಆಗಿಲ್ಲ. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

English summary
Actress Sridevi Says that to See Jhanvi Married will Give her 'Greater joy' than to see Her in films. But Sridevi added that Jhanvi's 'happiness matters more'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada