ಹಿಂದೂಗಳ ಪವಿತ್ರ ತಾಣ ವಾರಣಾಸಿಯಲ್ಲಿ ನಟಿ ಸನ್ನಿ ಲಿಯೋನ್, ಗಂಗಾ ಆರತಿಯಲ್ಲಿ ಭಾಗಿ
ಬಾಲಿವುಡ್ ನಟಿ ಸನ್ನಿ ಲಿಯೋನ್ ಸದ್ಯ ತಮ್ಮ ಮುಂದಿನ ಮ್ಯೂಸಿಕ್ ವಿಡಿಯೋ 'ಥರ್ಡ್ ಪಾರ್ಟಿ' ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆಯೇ ನಟಿ ಹಿಂದೂಗಳ ಪವಿತ್ರ ತಾಣ ವಾರಣಾಸಿಗೆ ಭೇಟಿ ನೀಡಿದ್ದಾರೆ. ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ.
ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ, ಐಟಂ ಸಾಂಗ್‌ಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಸನ್ನಿ ಲಿಯೋನ್, ಸದ್ಯ ವಾರಣಾಸಿಗೆ ತೆರಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಗುರುವಾರವೇ ವಾರಣಾಸಿಗೆ ತೆರಳಿದ್ದ ಅವರು, ರಾತ್ರಿವರೆಗೂ ಅಲ್ಲೇ ಇದ್ದು, ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದರು.

ಪಿಂಕ್ ಸಲ್ವಾರ್‌ನಲ್ಲಿ ಸನ್ನಿ ಮಿಂಚು!
ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದ ಅವರು ಪಿಂಕ್ ಸಲ್ವಾರ್ ಸೂಟ್‌ನಲ್ಲಿ ಕಣ್ಮನ ಸೆಳೆದಿದ್ದಾರೆ. ಸನ್ನಿ ಲಿಯೋನ್ ಜೊತೆಗೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಕೂಡ ಇದ್ದರು. ನಟಿ, ನಟ, ಅರ್ಚಕರು ಮತ್ತು ಇತರರೊಂದಿಗೆ ಗಂಗಾ ಆರತಿಯಲ್ಲಿ ಪಾಲ್ಗೊಂಡಿರುವ ವೀಡಿಯೊವನ್ನು ಎಎನ್‌ಐ ಹಂಚಿಕೊಂಡಿದೆ.
ಪಿಂಕ್ ಸಲ್ವಾರ್ ಧರಿಸಿ, ತಲೆಯ ಮೇಲೆ ದುಪ್ಪಟ್ಟ ಧರಿಸಿದ್ದ ಅವರ ಕುತ್ತಿಗೆಯಲ್ಲಿ ಚಂಡು ಹೂವಿನ ಹೂ ಮಾಲೆ ಇತ್ತು. ಹಣೆಯ ಮೇಲೆ ಚಂದನ ಧರಿಸಿ ಅಪ್ಪಟ ಹಿಂದೂ ಮಹಿಳೆಯಂತೆ ಕಾಣಿಸುತ್ತಿದ್ದರು. ಅರ್ಚಕರು ಹೇಳುವ ಪ್ರತಿ ವಿವರಗಳನ್ನು ಆಲಿಸುತ್ತಿದ್ದ ಅವರು ಎರಡು ಕೈಗಳನ್ನು ಎತ್ತಿ ನಮಸ್ಕಾರ ಮಾಡಿದ್ದಾರೆ.

ಗಂಗಾ ಆರತಿಯ ವೀಡಿಯೊ ಹಂಚಿಕೊಂಡ ಸನ್ನಿ ಲಿಯೋನ್
ಗುರುವಾರ, ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಂಗಾ ಆರತಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ವಾರಣಾಸಿಯಲ್ಲಿ ಗಂಗಾ ಆರತಿಯನ್ನು ನೋಡುವುದು ಅತ್ಯಂತ ಅದ್ಭುತ ಅನುಭವ. ಅಭಿಷೇಕ್ ಸಿಂಗ್ ಮತ್ತು ಟಿ ಸೀರಿಸ್‌ಗೆ ಧನ್ಯವಾದಗಳು" ಎಂದು ಶೀರ್ಷಿಕೆ ನೀಡಿದ್ದಾರೆ.
ಬುಧವಾರ ಬಿಡುಗಡೆಯಾದ 'ಥರ್ಡ್ ಪಾರ್ಟಿ' ಎಂಬ ಹೊಸ ಮ್ಯೂಸಿಕ್ ವಿಡಿಯೋದಲ್ಲಿ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಮತ್ತು ಸನ್ನಿ ಲಿಯೋನ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಸಿಂಗ್ ಹೊಸ ಹಾಡನ್ನು ಹಾಡಿದ್ದಾರೆ. ಹಾಡನ್ನು ಸಂಯೋಜನೆ ಮಾಡಿದ್ದಾರೆ ಮತ್ತು ಅವರೇ ಬರೆದಿದ್ದಾರೆ. ಸನ್ನಿ ಲಿಯೋನ್ ಜೊತೆಯಲ್ಲಿ ಬಿಳಿ ಕುರ್ತಾ ಪೈಜಾಮದಲ್ಲಿ ಅಭಿಷೇಕ್ ಸಿಂಗ್ ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದಾರೆ.
ಸನ್ನಿ ಲಿಯೋನ್
ಕಳೆದ ತಿಂಗಳು, ನಟಿ ಸನ್ನಿ ಲಿಯೋನ್ 'ಮೇರಾ ಪಿಯಾ ಘರ್ ಆಯಾ 2.0' ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದು ಯಾರಾನಾ ಚಿತ್ರದ ಮಾಧುರಿ ದೀಕ್ಷಿತ್ ಅವರ ಐಕಾನಿಕ್ ಟ್ರ್ಯಾಕ್ ಮೇರಾ ಪಿಯಾ ಘರ್ ಆಯಾ ಹಾಡಿನ ಮರುಸೃಷ್ಟಿ ಆಗಿದೆ. ಹೊಸ ಆವೃತ್ತಿಗೆ ನೀತಿ ಮೋಹನ್ ಮತ್ತು ಎಂಬೀ ದನಿ ನೀಡಿದ್ದಾರೆ. ಎಂಬೀ ಜೊತೆಗೆ ಅನು ಮಲಿಕ್ ಹಾಡನ್ನು ಸಂಯೋಜಿಸಿದ್ದಾರೆ.
ಸನ್ನಿ ಲಿಯೋನ್ ಈಗ ರಿಯಾಲಿಟಿ ಶೋ ಗ್ಲಾಮ್ ಫ್ಲೇಮ್‌ನ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಅನುರಾಗ್ ಕಶ್ಯಪ್ ಅವರ ಚಲನಚಿತ್ರ ಕೆನಡಿಯಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾವನ್ನು ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಮತ್ತು ಮೆಲ್ಬೋರ್ನ್‌ನ 14 ನೇ ಭಾರತೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿದೆ. ಚಿತ್ರದಲ್ಲಿ ರಾಹುಲ್ ಭಟ್ ಮತ್ತು ಅಭಿಲಾಷ್ ಥಪ್ಲಿಯಾಲ್ ಕೂಡ ನಟಿಸಿದ್ದಾರೆ ಮತ್ತು ಭಾರತದಲ್ಲಿ ಇನ್ನೂ ಬಿಡುಗಡೆಯಾಗಬೇಕಿದೆ.


Click it and Unblock the Notifications











