For Quick Alerts
  ALLOW NOTIFICATIONS  
  For Daily Alerts

  ತೆರೆ ಮೇಲೆ ಮಾದಕ ಬೆಡಗಿ ಸನ್ನಿಯ ಪ್ರೇಮಕಥೆ-ವ್ಯಥೆ.?

  By ಸೋನು ಗೌಡ
  |

  ಅಡಲ್ಟ್ ಸಿನಿಮಾಗಳ ನಟಿ ಎಂಬ ಇಮೇಜ್ ಬದಲಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ನಟಿ ಸನ್ನಿ ಲಿಯೋನ್ ಅವರು, ಸದ್ಯಕ್ಕೆ ಬಾಲಿವುಡ್ ಚಿತ್ರರಂಗ ಕ್ಷೇತ್ರದಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

  ಇತ್ತೀಚೆಗಷ್ಟೇ ಪ್ರೋ ಕಬಡ್ಡಿ ಲೀಗ್ ನಲ್ಲಿ ರಾಷ್ಟ್ರಗೀತೆಯನ್ನು ತಪ್ಪು-ತಪ್ಪಾಗಿ ಉಚ್ಛರಿಸಿ ಭಾರಿ ಸುದ್ದಿಯಾಗಿದ್ದ ಬೇಬಿ ಡಾಲ್ ಸನ್ನಿ ಲಿಯೋನ್ ಅವರು, ಇದೀಗ ಒಳ್ಳೆ ರೀತಿಯಲ್ಲಿ ಸುದ್ದಿಯಾಗಿದ್ದಾರೆ.

  ಅಂದಹಾಗೆ ನಟಿ ಸನ್ನಿ ಲಿಯೋನ್ ಅವರ ಬದುಕಿನ ಬಗ್ಗೆ ಯಾರಿಗೂ ಅಷ್ಟಾಗಿ ಸಂಪೂರ್ಣ ಮಾಹಿತಿ ಇಲ್ಲ. ನಟಿ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ದಾಂಪತ್ಯ ಸಂಬಂಧ ತುಂಬಾ ಚೆನ್ನಾಗಿದೆ ಅಂತ ಅನ್ನೋದು ಬಿಟ್ಟರೆ ಮಿಕ್ಕಂತೆ ಮಾದಕ ಬೆಡಗಿ ಸನ್ನಿ ಬಗ್ಗೆ ಅಸ್ಪಷ್ಟ ಮಾಹಿತಿ.[ಸುಖಿ ಸಂಸಾರದ ಸೀಕ್ರೆಟ್ ಬಿಚ್ಚಿಟ್ಟ ಬೇಬಿ ಡಾಲ್ ಸನ್ನಿ ಲಿಯೋನ್]

  2011ರ ಬಿಗ್ ಬಾಸ್ ಮೂಲಕ ಬಿಟೌನ್ ಎಂಬ ಸಾಗರಕ್ಕೆ ಕಾಲಿಟ್ಟ ನಟಿ ಸನ್ನಿ ಲಿಯೋನ್ ಅವರು ಇದೀಗ ಸದ್ಯಕ್ಕೆ ಬಾಲಿವುಡ್ ನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂತಹ ಅಪರೂಪದ ನಟಿ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇನೆಂಬುದನ್ನು ತಿಳಿಯಲು ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ....

  ಸನ್ನಿ ಜೀವನ ಸಿನಿಮಾ ಆಗುತ್ತೆ

  ಸನ್ನಿ ಜೀವನ ಸಿನಿಮಾ ಆಗುತ್ತೆ

  ಮಾದಕ ಬೆಡಗಿ ಸನ್ನಿ ಲಿಯೋನ್ ಅವರ ಜೀವನಾಧರಿತ ಕಥೆಯನ್ನು ಸಿನಿಮಾ ಮಾಡಲು 'ತೆರೆ ಬಿನ್ ಲಾಡೆನ್' ನಿರ್ದೇಶಕ ಅಭಿಷೇಕ್ ವರ್ಮಾ ಮುಂದೆ ಬಂದಿದ್ದಾರೆ ಎಂದು ಸನ್ನಿ ಲಿಯೋನ್ ಮೂಲಗಳು ಬಹಿರಂಗಪಡಿಸಿವೆ.[ಸನ್ನಿ ಲಿಯೋನ್- ಗುರುಕಿರಣ್ ಮಧ್ಯೆ ಇದೆಂತಹ ಜುಗಲ್ ಬಂದಿ.?]

  ಲವ್ ಸ್ಟೋರಿ/ಮದುವೆ ಕಥೆ ತೆರೆ ಮೇಲೆ

  ಲವ್ ಸ್ಟೋರಿ/ಮದುವೆ ಕಥೆ ತೆರೆ ಮೇಲೆ

  ನಿಜ ಜೀವನ ಕಥೆಯಾಧರಿತ ಈ ಚಿತ್ರದಲ್ಲಿ ಸನ್ನಿ ಲಿಯೋನ್ ಅವರ ಲವ್ ಸ್ಟೋರಿ, ಡೇನಿಯಲ್ ವೆಬರ್ ಜೊತೆ ಮದುವೆ ಇದೆಲ್ಲದರ ಬಗ್ಗೆಯೂ ವಿವರವಾಗಿ ಹೇಳಲಾಗುತ್ತೆ, ಎಂದಿದ್ದಾರೆ ಸನ್ನಿ ಲಿಯೋನ್.[ತಾಯ್ತನದ ಸುಖ ಅನುಭವಿಸಲು ಸನ್ನಿ ಲಿಯೋನ್ ಸಿದ್ಧ!]

  ಸನ್ನಿ ಲಿಯೋನ್ ನಟಿ

  ಸನ್ನಿ ಲಿಯೋನ್ ನಟಿ

  ಅಂದಹಾಗೆ ಸನ್ನಿ ಅವರ ಜೀವನಾಧರಿತ ಚಿತ್ರದಲ್ಲಿ ಖುದ್ದು ಸನ್ನಿ ಲಿಯೋನ್ ಅವರೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರಂತೆ. ಜೊತೆಗೆ ಸನ್ನಿ ಅವರ ಪತಿ ಡೇನಿಯಲ್ ವೆಬರ್ ಅವರು ಕೂಡ ಈ ಚಿತ್ರದ ಭಾಗವಾಗಲಿದ್ದಾರೆ.

  ಅಭಿಮಾನಿಗಳಿಗೆ ಕುತೂಹಲ

  ಅಭಿಮಾನಿಗಳಿಗೆ ಕುತೂಹಲ

  ಕ್ರಿಕೆಟ್ ಸ್ಟಾರ್, ರಾಜರುಗಳ ನಿಜ ಜೀವನ ಕಥೆಯನ್ನು ಸಿನಿಮಾ ಮಾಡುತ್ತಿರುವ ಇತ್ತೀಚಿನ ದಿನಗಳಲ್ಲಿ ಸನ್ನಿ ಲಿಯೋನ್ ಅವರ ನಿಜ ಕಥೆ ತೆರೆ ಮೇಲೆ ಬರುತ್ತೆ ಅಂದಾಗ ಅಭಿಮಾನಿಗಳ ಮೈ ಬೆಚ್ಚಗಾಗಿದೆ. ಹೇಳಿ-ಕೇಳಿ ಸನ್ನಿ ಈ ಮೊದಲು ನೀಲಿ ಚಿತ್ರ ತಾರೆ ಆಗಿದ್ದರು. ಆದ್ದರಿಂದ ತೆರೆ ಮೇಲೆ ಸನ್ನಿ ಜೀವನ ಯಾವ ರೀತಿ ರಾರಾಜಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  ಗೂಗಲ್ ರಾಣಿ ಸನ್ನಿ

  ಗೂಗಲ್ ರಾಣಿ ಸನ್ನಿ

  ಸನ್ನಿ ಅವರು ಬರೀ ಬಾಲಿವುಡ್ ನಲ್ಲಿ ಮಾತ್ರವಲ್ಲದೇ ಗೂಗಲ್ ನಲ್ಲೂ ಸ್ಟಾರ್ ಆಗಿದ್ದಾರೆ. ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಟಾರ್ ನಟಿ ಎಂಬ ಹೆಗ್ಗಳಿಕೆಗೆ ಕೂಡ ಸನ್ನಿ ಲಿಯೋನ್ ಪಾತ್ರರಾಗಿದ್ದಾರೆ.['ಗೂಗಲ್ ಸರ್ಚ್'ನಲ್ಲೂ ಸನ್ನಿ-ಸಲ್ಲುದೇ ದರ್ಬಾರ್]

  ದುಬೈನಲ್ಲಿ ಸನ್ನಿ

  ದುಬೈನಲ್ಲಿ ಸನ್ನಿ

  ಸದ್ಯಕ್ಕೆ ಎಲ್ಲಾ ಕೆಲಸಗಳಿಗೆ ಬ್ರೇಕ್ ಹಾಕಿರುವ ನಟಿ ಸನ್ನಿ ಲಿಯೋನ್ ಅವರ ತಮ್ಮ ಪತಿ ಡೇನಿಯಲ್ ಮತ್ತು ಆಪ್ತ ಗೆಳೆಯರ ಜೊತೆ ದುಬೈನ ಮರಳುಗಾಡಿನಲ್ಲಿ ಸಖತ್ ಮಸ್ತಿ ಮಾಡುತ್ತಿದ್ದಾರೆ.

  English summary
  Sunny Leone, who was an adult actress in the USA, came to India in 2011 for the reality television show Big Boss and since then the actress has stayed put in the country and starred in several Bollywood films. After back-to-back failures at the box office for Sunny Leone, it looks like the sizzling beauty is all set to star in a biopic on her own life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X