ಏರ್ ಪೋರ್ಟ್ ನಲ್ಲಿ ಅಭಿಮಾನಿಯ ವರ್ತನೆ ತಾಳಲಾರದೆ ಓಡಿ ಹೋದ ಸನ್ನಿ ಲಿಯೋನ್
ಸಿನಿಮಾ ಸ್ಟಾರ್ ಗಳಿಗೆ ಕೆಲವು ಬಾರಿ ಅಭಿಮಾನಿಗಳ ವರ್ತನೆ ಕಿರಿಕಿರಿ ಉಂಟು ಮಾಡುತ್ತದೆ. ಇದೀಗ ನಟಿ ಸನ್ನಿ ಲಿಯೋನ್ ಗೆ ಈ ರೀತಿಯ ಅನುಭವ ಆಗಿದೆ.
ನಟ ಸಲ್ಮಾನ್ ಖಾನ್ ಸೆಲ್ಫಿ ಕೇಳಿದ ಅಭಿಮಾನಿಯ ಮೊಬೈಲ್ ಅನ್ನು ಕಿತ್ತುಕೊಂಡಿದ್ದರು. ಅಭಿಮಾನಿಯ ಜೊತೆಗೆ ಸಲ್ಮಾನ್ ನಡೆದುಕೊಂಡ ರೀತಿಗೆ ವಿರೋಧ ವ್ಯಕ್ತವಾಗಿತ್ತು. ನಿನ್ನೆ ಈ ಘಟನೆ ದೊಡ್ಡ ಸುದ್ದಿ ಮಾಡಿತ್ತು. ಆದರೆ ಇದೀಗ ಸನ್ನಿ ಲಿಯೋನ್ ಗೆ ಸಹ ಸೆಲ್ಫಿ ಕಾಟ ಕೊಟ್ಟಿದೆ.
ಮುಂಬೈ ಏರ್ ಪೋರ್ಟ್ ನಲ್ಲಿ ಅಭಿಮಾನಿಯ ವರ್ತನೆ ತಡೆದುಕೊಳ್ಳಲು ಆಗದೆ ಸನ್ನಿ ಲಿಯೋನ್ ಅಲ್ಲಿಂದ ಓಡಿ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೆಲ್ಫಿ ಬೇಕು ಸೆಲ್ಫಿ
ನಟಿ ಸನ್ನಿ ಲಿಯೋನ್ ಸಿನಿಮಾವೊಂದರ ಚಿತ್ರೀಕರಣ ಮುಗಿಸಿಕೊಂಡು ಮುಂಬೈಗೆ ವಾಪಸ್ ಆಗುತ್ತಿದ್ದರು. ಪತಿ ಡೇನಿಯರ್ ಜೊತೆಗೆ ಏರ್ ಪೋರ್ಟ್ ನಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಅವರ ಎದುರಿಗೆ ಬಂದ ಅಭಿಮಾನಿಗಳ ಗುಂಪು ಸೆಲ್ಫಿ ಬೇಕು ಎಂದರು. ಮೊದಲು ಓಕೆ ಎಂದ ಸನ್ನಿ ನಂತರ ಅವರಿಂದ ಓಡಿ ಹೋಗಿದ್ದಾರೆ.

ಹತ್ತಿರ ಬರಲು ಅವಕಾಶ ನೀಡಲಿಲ್ಲ
ಈ ಹಿಂದೆ ಸೆಲ್ಫಿ ಬೇಕು ಎಂದು ಕೇಳಿದ ಅಭಿಮಾನಿಗಳಿಗೆ ಸನ್ನಿ ಲಿಯೋನ್ ನಿರಾಸೆ ಮಾಡಿರಲಿಲ್ಲ. ಅನೇಕ ಬಾರಿ ಅವರು ಅಭಿಮಾನಿಗಳ ಜೊತೆಗೆ ನಡೆದುಕೊಳ್ಳುವ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಈ ಬಾರಿ ಸೆಲ್ಫಿ ಕೇಳಿದ ಅಭಿಮಾನಿಯನ್ನು ಹತ್ತಿರಕ್ಕೆ ಸನ್ನಿ ಬಿಟ್ಟುಕೊಂಡಿಲ್ಲ. ಮಾತು ಕೇಳದ ಅಭಿಮಾನಿಯಿಂದ ಸನ್ನಿ ದೂರ ಓಡಿದ್ದಾರೆ.
ಕೊರೊನಾ ವೈರಸ್ ಆತಂಕ
ಕೊರೊನಾ ವೈರಸ್ ನಿಂದಾಗಿ ಅಭಿಮಾನಿಯನ್ನು ಸನ್ನಿ ಲಿಯೋನ್ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ವಿಶ್ವಾದ್ಯಂತ ಕೊರೊನಾ ವೈರಸ್ ಹಬ್ಬುತ್ತಿದೆ. ಈಗಾಗಲೇ ಮುಂಬೈನಲ್ಲಿಯೂ ವೈರಸ್ ಪತ್ತೆ ಆಗಿದೆ. ಈ ಕಾರಣದಿಂದ ಸನ್ನಿ ಲಿಯೋನ್ ಅಭಿಮಾನಿಗೆ ಫೋಟೋ ನೀಡಲು ನಿರಾಕರಿಸಿದ್ದಾರೆ. ಇದು ಅಭಿಮಾನಿಗೆ ಕೊಂಚ ನಿರಾಸೆ ಉಂಟು ಮಾಡಿದೆ.
ಮಾಸ್ಕ್ ಹಾಕಿಕೊಂಡ ಸನ್ನಿ
ಈ ಘಟನೆಯ ಬಳಿಕ ಮಾಸ್ಕ್ ಹಾಕಿಕೊಂಡ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ಅವರ ಜೊತೆಗೆ ಪತಿ ಡೇನಿಯರ್ ಕೂಡ ಇದ್ದಾರೆ. ಸುರಕ್ಷಿತವಾಗಿ ಇರುವುದು ಅಗತ್ಯ. ನಿರ್ಲಕ್ಷಾ ಮಾಡಬೇಡಿ ಎಂದು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.


Click it and Unblock the Notifications











