ಮುಂಬೈ ಪೊಲೀಸರಿಗೆ, ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ಸನ್ನಿ ಲಿಯೋನ್!: ಆಗಿದ್ದೇನು?

ಬಾಲಿವುಡ್ ನಟಿ ಮತ್ತು ಮಾಡೆಲ್ ಸನ್ನಿ ಲಿಯೋನ್ ಕಳೆದ ಎರಡು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿ ಅಭಿಮಾನಿಗಳು ಮತ್ತು ಪೊಲೀಸರ ಸಹಾಯ ಕೇಳಿದ್ದರು. ಇದಕ್ಕೆಲ್ಲ ಅವರ ಮನೆಯಲ್ಲಿ ಕೆಲಸ ಮಾಡುವವರ ಮಗಳು ಕಾಣೆಯಾಗಿದ್ದೆ ಕಾರಣ.

ನವೆಂಬರ್ 9 ರಂದು ನಡಿ ಸನ್ನಿ ಲಿಯೋನ್ ಅವರು ತನ್ನ ಮನೆಯ ಸಹಾಯಕಿಯ ಒಂಬತ್ತು ವರ್ಷದ ಮಗಳು ಅನುಷ್ಕಾ ಕಿರಣ್ ಮೋರ್ ಮುಂಬೈನ ಜೋಗೇಶ್ವರಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸಹಾಯ ಮಾಡುವವರಿಗೆ ತಾನು 50,000 ರೂಪಾಯಿ ಬಹುಮಾನ ನೀಡುವುದಾಗಿಯೂ ಸನ್ನಿ ಘೋಷಿಸಿದ್ದರು.

sunny-leone-thanks-mumbai-police

ಸದ್ಯ ಕಾಣಿಯಾಗಿದ್ದ ಅನುಷ್ಕಾ ಕಿರಣ್ ಮೋರ್ ಕೊನೆಗೂ ಪತ್ತೆಯಾಗಿದ್ದು, ನಂತರ ನಟಿ ಸನ್ನಿ ಲಿಯೋನ್ ನಿರಾಳರಾಗಿದ್ದಾರೆ. ಈ ಖುಷಿ ಸುದ್ದಿಯನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಕೆ ಕಾಣೆಯಾದ 24 ಗಂಟೆಗಳಲ್ಲಿ ಅವರನ್ನು ಹುಡುಕಿ ಕೊಟ್ಟ ಮುಂಬೈ ಪೊಲೀಸರಿಗೆ ಪತ್ರದ ಬರೆದಿದ್ದು ಕೃತಜ್ಞತೆ ಸಲ್ಲಿಸಿದ್ದಾರೆ.

ಕಾಣೆಯಾಗಿದ್ದ ಸನ್ನಿ ಲಿಯೋನ್ ಮನೆಕೆಲಸದವರ ಮಗಳು

ಮನೆ ಸಹಾಯಕರ ಮಗಳು ಕಾಣೆಯಾಗಿದ್ದ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಕಾಣೆಯಾದ ಮಗುವಿನ ಬಗ್ಗೆ ಫೋಟೋ ಮತ್ತು ಮಾಹಿತಿಯನ್ನು ಒದಗಿಸಿದ್ದರು. ಜೊತೆಗೆ ಬಾಲಕಿಯನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವವರಿಗೆ 50,000 ಬಹುಮಾನ ಘೋಷಿಸಿದ್ದರು. ಇದಾದ ನಂತರ ಅನುಷ್ಕಾ ಪತ್ತೆಯಾಗಿದ್ದಾಳೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸನ್ನಿ ಲಿಯೋನ್ ಮುಂಬೈ ಪೊಲೀಸರು ಮತ್ತು ಫ್ಯಾನ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

sunny-leone-thanks-mumbai-police

"ನಮ್ಮ ಪ್ರಾರ್ಥನೆ ಫಲಿಸಿದೆ! ದೇವರು ತುಂಬಾ ದೊಡ್ಡವನು! ದೇವರು ಈ ಕುಟುಂಬವನ್ನು ಆಶೀರ್ವದಿಸಲಿ! ಕುಟುಂಬದ ಕಡೆಯಿಂದ ಮುಂಬೈ ಪೊಲೀಸರಿಗೆ ತುಂಬಾ ಧನ್ಯವಾದಗಳು. ಅನುಷ್ಕಾ ನಾಪತ್ತೆಯಾಗಿದ್ದ 24 ಗಂಟೆಗಳ ಒಳಗೆ ಸಿಕ್ಕಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ಈ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಮತ್ತು ಸುದ್ದಿಯನ್ನು ವೈರಲ್ ಮಾಡಿದವರಿಗೆ,ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ" ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪೋಸ್ಟ್‌ನಲ್ಲಿ ಬಾಲಕಿ ಅನುಷ್ಕಾಳನ್ನು ಆಕೆಯ ಪೋಷಕರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿರುವ ಚಿತ್ರವನ್ನು ಸಹ ಶೇರ್ ಮಾಡಿದ್ದಾರೆ. ಇನ್ನು, ಸನ್ನಿ ಲಿಯೋನ್ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಶೀಘ್ರವಾಗಿ ಕ್ರಮ ಕೈಗೊಂಡ ಮುಂಬೈ ಪೊಲೀಸರನ್ನು ಶ್ಲಾಘಿಸಿದ್ದಾರೆ.

More from Filmibeat

English summary
Sunny Leone Thanks Mumbai Police, here the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X