"ನನಗೆ ಹೃದಯಾಘಾತವಾಗಿತ್ತು, ಪ್ರಧಾನ ರಕ್ತನಾಳ 95%ರಷ್ಟು ಮುಚ್ಚಿ ಹೋಗಿತ್ತು": ಸುಷ್ಮಿತಾ ಸೇನ್

ಇತ್ತೀಚೆಗೆ ಮಾಜಿ ವಿಶ್ವಸುಂದರಿ ನಟಿ ಸುಷ್ಮಿತಾ ಸೇನ್‌ಗೆ ಹೃದಯಾಘಾತವಾಗಿತ್ತು. ಹೃದಯದ ಪ್ರಮುಖ ರಕ್ತನಾಳವು ಮುಚ್ಚಿ ಹೋಗಿತ್ತು, ಸಕಾಲಕ್ಕೆ ಆಸ್ಪತ್ರೆಗೆ ಹೋಗಿದ್ದಕ್ಕೆ ಸಕಾಲಕ್ಕೆ ಚಿಕಿತ್ಸೆ ಪಡೆದ ನಂತರ ತಾನು ಆರೋಗ್ಯವಾಗಿ ಇದ್ದಿದ್ದೇನೆ ಎಂದು ಸುಷ್ಮಿತಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವಿವರಿಸಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ.

"ತನ್ನ ಮೇಲೆ ನೀವು ತೋರಿದ ಪ್ರೀತಿಗೆ, ದೇವರಲ್ಲಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆಗಳು" ಎಂದು ಸುಷ್ಮಿತಾ ಸೇನ್ ಹೇಳಿದ್ದಾರೆ. ಸದ್ಯ ಗಂಟಲು ಇನ್‌ಫೆಕ್ಷನ್‌ನಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೆಲಹೊತ್ತು ಮಾತ್ರ ಮಾತನಾಡಿದ್ದಾರೆ. "ನನ್ನ ಆರೋಗ್ಯ ಪರಿಸ್ಥಿತಿ ತಿಳಿದು ಜಗತ್ತಿನ ಮೂಲೆ ಮೂಲೆಯಿಂದ ನನ್ನ ಮೇಲೆ ಪ್ರೀತಿ ಅಭಿಮಾನ ತೋರಿದರು. ನಾನು ಶೀಘ್ರದಲ್ಲೇ ಚೇತರಿಸಿಕೊಳ್ಳಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು. ನಿಮ್ಮೆಲ್ಲರ ಪ್ರಾರ್ಥನೆಯಿಂದ ನಾನು ಆರೋಗ್ಯವಾಗಿ ಇದ್ದೀನಿ. ವೈರಲ್ ಇನ್‌ಫೆಕ್ಷನ್‌ನ ಕಾರಣ ಮಾತನಾಡಲು ಗಂಟಲು ಸಹಕರಿಸುತ್ತಿಲ್ಲ. ನನ್ನ ಧ್ವನಿ ಕೇಳಿ ಅನಾರೋಗ್ಯದಿಂದ ಇದ್ದೀನಿ ಎಂದುಕೊಳ್ಳಬೇಡಿ" ಎಂದಿದ್ದಾರೆ.

Actress Sushmita sen revealed that she Survived Major heart attack With 95% blockage in Main Artery

"ನಾನು ಬಹಳ ಆರೋಗ್ಯವಾಗಿದ್ದೇನೆ. ನಾನು ಒತ್ತಡಕ್ಕೆ ಗುರಿಯಾಗಿ ಹೃದಯಾಘಾತ ಸಂಭವಿಸಿತ್ತು. ಪ್ರಧಾನ ರಕ್ತನಾಳ 95ರಷ್ಟು ಮುಚ್ಚಿ ಹೋಗಿತ್ತು. ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡೆ. ಅಲ್ಲಿನ ವೈದ್ಯರು, ಸಿಬ್ಬಂದಿ ಬಹಳ ಶ್ರಮವಹಿಸಿ ನನ್ನನ್ನು ಪ್ರಾಣಾಪಾಯದಿಂದ ಪಾರು ಮಾಡಿದರು. ನನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಮಾತ್ರ ಈ ವಿಷಯ ಗೊತ್ತಿತ್ತು. ಚಿಕಿತ್ಸೆ ಪಡೆಯುವಾಗ ಈ ಬಗ್ಗೆ ಯಾರಿಗೂ ಹೇಳುವುದು ಬೇಡ ಎಂದುಕೊಂಡೆ. ಚಿಕಿತ್ಸೆ ಮುಗಿದು ಚೇತರಿಸಿಕೊಂಡ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ನಂತರ ಅಭಿಮಾನಿಗಳು ಪ್ರತಿಕ್ರಿಯಿಸಿ ಶೀಘ್ರ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸಲು ಆರಂಭಿಸಿದರು" ಎಂದು ವಿವರಿಸಿದ್ದಾರೆ.

ಕೆಲವರು ಅತಿಯಾಗಿ ವರ್ಕ್‌ಔಟ್ ಮಾಡಬಾರದು. ಅತಿಯಾದ ವ್ಯಾಯಾಮದಿಂದ ಹೃದಯಾಘಾತವಾಗುತ್ತದೆ ಎಂದು ಹೇಳುತ್ತಾರೆ. ಸುಷ್ಮಿತಾ ಸೇನ್ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಎಷ್ಟೇ ಫಿಟ್ನೆಸ್ ಕಾಪಾಡಿಕೊಂಡರೂ ಹೃದಯಾಘಾತವಾಗುತ್ತದೆ. ಹಾಗಿರುವಾಗ ವರ್ಕೌಟ್ ಯಾಕೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಸರಿಯಲ್ಲ ಎಂದು ಸುಷ್ಮಿತಾ ಹೇಳಿದ್ದಾರೆ. ನಿಮ್ಮಲ್ಲಿ ಕೆಲವರು ಜಿಮ್‌ಗೆ ಹೋಗುವುದನ್ನೇ ನಿಲ್ಲುಸುತ್ತೀರಿ. ಅಷ್ಟೆಲ್ಲಾ ವರ್ಕೌಟ್ ಮಾಡಿ ಆಕೆಗೆ ಏನು ಪ್ರಯೋಜನ ಎಂದುಕೊಳ್ಳುತ್ತೀರಿ. ಆದರೆ ಅದು ಸರಿಯಲ್ಲ. ವರ್ಕೌಟ್‌ ನನಗೆ ಉಪಯೋಗಕ್ಕೆ ಬಂದಿದೆ. ನಾನು ತೀವ್ರ ಹೃದಯಾಘಾತದಿಂದ ಬದುಕುಳಿದಿದ್ದು ನಾನು ಕ್ರಿಯಾಶೀಲತೆಯಿಂದ ಇದ್ದಿದ್ದಕ್ಕೆ" ಎಂದು ತಿಳಿಸಿದ್ಧಾರೆ.

Actress Sushmita sen revealed that she Survived Major heart attack With 95% blockage in Main Artery

"ನನ್ನ ಮೇಲೆ ಪ್ರೀತಿ ತೋರಿಸುತ್ತಿರುವ ಎಲ್ಲರಿಗೂ ಧನ್ಯವಾದ. ಶೀಘ್ರದಲ್ಲೇ 'ಆರ್ಯ- 3' ಚಿತ್ರೀಕರಣದಲ್ಲಿ ಭಾಗಿಯಾಗಿ ಎಲ್ಲರನ್ನು ರಂಜಿಸುತ್ತೇನೆ. ನನ್ನ ಮನವಿ ಒಂದೇ, ಯಾರ ಮೇಲೂ ಒತ್ತಡ ಹಾಕಬೇಡಿ, ಎಲ್ಲರನ್ನು ಪ್ರೀತಿಸಿ" ಎಂದು ಸುಷ್ಮಿತಾ ಸೇನ್ ಹೇಳಿದ್ದಾರೆ.

More from Filmibeat

English summary
Actress Sushmita sen revealed that she Survived Major heart attack With 95% blockage in Main Artery. She shared her health update for all her fans and thanked them for pouring immense love. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X