'ಬಿ' ಗ್ರೇಡ್ ನಟಿ ಎಂದ ಕಂಗನಾಗೆ ತಾಪ್ಸಿ ತಿರುಗೇಟು: ತಾಪ್ಸಿ ಬೆಂಬಲಕ್ಕೆ ನಿಂತ ಬಾಲಿವುಡ್ ಸ್ಟಾರ್ಸ್
ಬಾಲಿವುಡ್ ನಲ್ಲಿ ಹೊರಗಿನಿಂದ ಬಂದರು ಮತ್ತು ಸಿನಿಮಾ ಕುಟುಂಬ ಹಿನ್ನಲೆಯಿಂದ ಬಂದವರು ಎನ್ನುವ ವಿಚಾರವಾಗಿ ನೆಡೆಯುತ್ತಿದ್ದ ಚರ್ಚೆ ಈಗ ತಾರಕ್ಕೇರಿದೆ. ಈ ವಿಚಾರವಾಗಿ ನಡೆಯುತ್ತರುವ ಚರ್ಚೆಯಲ್ಲಿ ನಟಿ ಕಂಗನಾ ರಣಾವತ್ ಮುಂಚೂಣಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಈ ವಿಚಾರ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ನಟಿ ಕಂಗನಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕೆಲವರನ್ನು ಬಾಲಿವುಡ್ ಮಾಫಿಯಾ ಮತ್ತು ಕೊಲೆಗಾರರು ಎಂದು ಕಂಗನಾ ಜರಿಯುತ್ತಿದ್ದಾರೆ.
Recommended Video
ನೆಪೋಟಿಸಂ ಬಗ್ಗೆ ಮಾತನಾಡುತ್ತಿದ್ದ ಕಂಗನಾ ಇದೀಗ ತಾಪ್ಸಿ ಪನ್ನು ವಿರುದ್ಧ ತಿರುಗಿ ಬಿದ್ದಾರೆ. ಕರಣ್ ಜೋಹರ್ ಅವರನ್ನು ಪ್ರೀತಿಸುತ್ತಿರುವುದಾದರೆ ತಾಪ್ಸಿ ಮತ್ತು ಸ್ವಾರಾ ಭಾಸ್ಕರ್ ಯಾಕೆ 'ಬಿ' ಗ್ರೇಡ್ ನಟಿಯರಾಗಿದ್ದಾರೆ. ಅಲಿಯಾ ಭಟ್ ಮತ್ತು ಅನನ್ಯಾ ಪಾಂಡೆ ಅವರಿಗಿಂತ ಚೆನ್ನಾಗಿದ್ದಾರೆ, ಉತ್ತಮ ನಟಿಯರು. ಆದರೂ ಯಾಕೆ ಅವರ ಗ್ರೇಡ್ ಏರಿಕೆಯಾಗಿಲ್ಲ ಎಂದು ಕಂಗನಾ ಪ್ರಶ್ನಿಸಿದ್ದಾರೆ.
ಕಂಗನಾ ಮಾತಿಗೆ ತಿರುಗೇಟು ನೀಡಿರುವ ನಟಿ ತಾಪ್ಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದಾರೆ. "10 ಮತ್ತು 12ನೇ ತರಗತಿ ಫಲಿತಾಂಶ ಬಂದ ಬಳಿಕ ನಮ್ಮ ಫಲಿತಾಂಶ ಬಂದಿದೆಯಂತೆ. ಈಗ ನಮ್ಮ ಗ್ರೇಡ್ ವ್ಯವಸ್ಥೆ ಅಧಿಕೃತವಾಗಿದೆ. ಇಲ್ಲಿವರೆಗೂ ನಂಬರ್ ಸಿಸ್ಟಮ್ ಯಿಂದನೆ ಮೌಲ್ಯ ನಿರ್ಧಾರ ಆಗುತ್ತಿತ್ತಲ್ಲವಾ" ಈಗ ಗ್ರೇಡ್ ಬಂದಿದೆ ಎಂದು ತಾಪ್ಸಿ ಬಿ ಗ್ರೇಡ್ ಎಂದಿದ್ದಕ್ಕೆ ತಿರುಗೇಟು ನೀಡಿದ್ದಾರೆ.

ಇನ್ನೂ ಬಾಲಿವುಡ್ ನ ಕೆಲವು ನಟಿಯರು ಮತ್ತು ನಟರು ನಟಿ ತಾಪ್ಸಿ ಬೆಂಬಲಕ್ಕೆ ನಿಂತಿದ್ದಾರೆ. ನಟಿ ರಿಚಾ ಚಡ್ಡ, ಸ್ವಾರಾ ಭಾಸ್ಕರ್, ಸಯಾನಿ ಗುಪ್ತ ಮತ್ತು ವೀರ್ ದಾಸ್ ಸೇರಿದ್ದಂತೆ ಅನೇಕರು ತಾಪ್ಸಿ ಪರ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವೀರ್ ದಾಸ್ "ಆ ವಿಷಯಗಳ ಬಗ್ಗೆ ಗೀಳು ಹೊಂದಿದವರಿಗೆ ಎ/ಬಿ/ಸಿ/ಡಿ ಎನ್ನುವ ಸೆಲೆಬ್ರಿಟಿಗಳು ಇರಬಹುದು. ಬಿ ದರ್ಜಿಯೆ ಕಲಾವಿದರು ಇಲ್ಲ. ತಾಪ್ಸಿ ನೀವು ಎ ಕಲಾವಿದೆ" ಎಂದು ಹೇಳಿದ್ದಾರೆ. ಇನ್ನೂ ನಟಿ ಸಯಾನಿ ಗುಪ್ತ ಟ್ವೀಟ್ ಮಾಡಿ "ವಿವೇಕ, ಅನುಭೂತಿ ಮತ್ತು ತಿಳುವಳಿಕೆಯನ್ನು ಮರಳಿ ತಂದಿದ್ದಕ್ಕೆ ಧನ್ಯವಾದಗಳು ತಾಪ್ಸಿ. ಹೆಚ್ಚು ಶಕ್ತಿ ಬರಲಿ ಸಹೋದರಿ." ಎಂದು ಹೇಳಿದ್ದಾರೆ.

ಸಾಕಷ್ಟು ಮಂದಿ ಟ್ವೀಟ್ ಮಾಡಿ ತಾಪ್ಸಿಗೆ ಬೆಂಬಲ ಸೂಚಿಸುತ್ತಿದ್ದಾರೆ. ನೆಪೋಟಿಸಂ ವಿರುದ್ಧ ಪ್ರಾರಂಭವಾದ ಹೋರಾಟವೀಗ ವೈಯಕ್ತಿಕ ಹೋರಾಟವಾಗಿ ಮಾರ್ಪಟ್ಟಿದೆ. ಕಂಗನಾ ಮತ್ತು ತಾಪ್ಸಿ ಕಿತ್ತಾಟ ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ.


Click it and Unblock the Notifications











