For Quick Alerts
  ALLOW NOTIFICATIONS  
  For Daily Alerts

  'ಶಬಾಷ್ ಮಿಥು' ಫಸ್ಟ್ ಲುಕ್: ಫೋಟೋ ಶೇರ್ ಮಾಡಿ ನಟಿ ತಾಪ್ಸಿ ಹೇಳಿದ್ದೇನು?

  |

  ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ಈಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಭಾರತದ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಜೀವನ ಚರಿತ್ರೆಯ ಮೊದಲ ಲುಕ್ ರಿಲೀಸ್ ಆಗಿದ್ದು, ನಟಿ ತಾಪ್ಸಿ, ಮಿಥಾಲಿ ರಾಜ್ ಆಗಿ ಮಿಂಚಿದ್ದಾರೆ.

  ಉತ್ತರಾಖಂಡದ ಬೀದಿಯಲ್ಲಿ ಕುರುಕಲು ತಿಂಡಿ ಸವಿದ ದರ್ಶನ್ | DARSHAN | JHARKHAND | FILMIBEAT KANNADA

  'ಶಬಾಷ್ ಮಿಥಾಲಿ' ಹೆಸರಿನಲ್ಲಿ ಬಯೋಪಿಕ್ ತಯಾರಾಗಿದ್ದು, ಈಗಾಗಲೆ ಬಹುತೇಕ ಚಿತ್ರೀಕರಣ ಕೂಡ ಮಾಡಿ ಮುಗಿಸಲಾಗಿದೆ. ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ ಚಿತ್ರಾಭಿಮಾನಿಗಳ ಮತ್ತು ಕ್ರಿಕೆಟ್ ಪ್ರಿಯರ ಗಮನ ಸೆಳೆಯುತ್ತಿದೆ. ತಾಪ್ಸಿ ಬ್ಯಾಟಿಂಗ್ ಮಾಡುತ್ತಿರುವ ಲುಕ್ ಇದಾಗಿದೆ. ಗಂಭೀರ ನೋಟ ಬೀರುತ್ತ ಬ್ಯಾಟ್ ಬೀಸುತ್ತಿರುವ ತಾಪ್ಸಿ ಲುಕ್ ಚಿತ್ರದ ಮೇಲಿನ ನಿರೀಕ್ಷೆ ಇಮ್ಮಡಿ ಮಾಡಿದೆ.

  ತೆರೆಮೇಲೆ ಟೀಂ ಇಂಡಿಯಾ ನಾಯಕಿ ಮಿಥಾಲಿ ಬಯೋಪಿಕ್: ನಾಯಕಿ ಇವರೇ ನೋಡಿತೆರೆಮೇಲೆ ಟೀಂ ಇಂಡಿಯಾ ನಾಯಕಿ ಮಿಥಾಲಿ ಬಯೋಪಿಕ್: ನಾಯಕಿ ಇವರೇ ನೋಡಿ

  ಮೊದಲ ಲುಕ್ ಶೇರ್ ಮಾಡಿ, ತಾಪ್ಸಿ ಮಿಥಾಲಿ ರಾಜ್ ಹೇಳಿಕೆಯನ್ನು ನೆನೆಪಿಸಿಕೊಂಡಿದ್ದಾರೆ.

  "ನಿಮ್ಮ ನೆಚ್ಚಿನ ಪುರುಷ ಕ್ರಿಕೆಟರ್ ಯಾರು ಎಂದು ನನ್ನನ್ನು ಯಾವಾಗಲು ಕೇಳಲಾಗುತ್ತದೆ. ಆದರೆ ಅವರು ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರು ಎಂದು ಕೇಳುವಂತೆ ಆಗಬೇಕು. ಮಿಥಾಲಿಯ ಈ ಹೇಳಿಕೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗಳು ಆಟ ಮುಖ್ಯನ ಅಥವಾ ಲಿಂಗ ಮುಖ್ಯನಾ ಎಂದು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿತ್ತು" ಎಂದು ಹೇಳಿದ್ದಾರೆ.

  ಅಂದ್ಹಾಗೆ ಮಹಿಳಾ ಕ್ರಿಕೆಟರ್ ಬಗ್ಗೆ ಬರುತ್ತಿರುವ ಮೊದಲ ಬಯೋಪಿಕ್ ಇದಾಗಿದೆ. ಈಗಾಗಲೆ ಸಾಕಷ್ಟು ಬಯೋಪಿಕ್ ಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ. ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ, ಭಾರತ ಮೊದಲಬಾರಿಗೆ ಕಿಕ್ರೆಟ್ ವಿಶ್ವಕಪ್ ಗೆದ್ದ ಕ್ಷಣ, ಜೊತೆಗೆ ಅನುಷ್ಕಾ ಶರ್ಮಾ ಅಭಿನಯದ ಮತ್ತೋರ್ವ ದಿಗ್ಗಜ ಆಟಗಾರ್ತಿ ಜೂಲನ್ ನಿಶಿತ್ ಗೋಸ್ವಾಮಿ ಜೀವನ ಕೂಡ ತೆರೆಮೇಲೆ ಬರುತ್ತಿದೆ.

  Actress Taapsee Pannu Shared Mithali Raj Biopics First Look

  ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ವಿರಾಟ್ ಪತ್ನಿ: ಕ್ರಿಕೆಟ್ ಆಟಗಾರ್ತಿಯಾದ ನಟಿ ಅನುಷ್ಕಾಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ವಿರಾಟ್ ಪತ್ನಿ: ಕ್ರಿಕೆಟ್ ಆಟಗಾರ್ತಿಯಾದ ನಟಿ ಅನುಷ್ಕಾ

  ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೀರ್ತಿ ಮಿಥಾಲಿ ರಾಜ್ ಅವರದ್ದು. ಅಲ್ಲದೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಥಾಲಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ್ದಾರೆ. ಖ್ಯಾತ ಆಟಗಾರ್ತಿಯ ಚಿತ್ರಕ್ಕೆ ನಿರ್ದೇಶಕ ರಾಹುಲ್ ಧೋಲಾಕಿಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹು ನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ.

  English summary
  Shabaash Mithu first look: Actress Taapsee Pannu shared Mithali Raj Biopic's first look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X