For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಖ್ಯಾತ ನಿರ್ದೇಶಕನ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು

  |

  ದಕ್ಷಿಣ ಭಾರತೀಯ ಚಿತ್ರರಗದಿಂದ ಖ್ಯಾತಿ ಗಳಿಸಿ ಸದ್ಯ ಬಾಲಿವುಡ್ ನಲ್ಲಿ ಟಾಂಪ್ ನಟಿಯಾಗಿ ಮಿಂಚುತ್ತಿರುವ ತಾಪ್ಸಿ ಪನ್ನು ಈಗ ಬಾಲಿವುಡ್ ಖ್ಯಾತ ನಿರ್ದೇಶಕನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, 'ಬಾಜಿರಾವ್ ಮಸ್ತಾನಿ', 'ಪದ್ಮಾವತ್' ಚಿತ್ರಗಳ ಸೃಷ್ಟಿಕರ್ತ ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ತಾಪ್ಸಿ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ದಕ್ಷಿಣ ಭಾರತೀಯ ಚಿತ್ರರಂಗದಿಂದ ಬಣ್ಣದ ಲೋಕದ ಪಯಣ ಆರಂಭಿಸಿದ ತಾಪ್ಸಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆದು ನಂತರ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ. ಬಾಲಿವುಡ್ ನಲ್ಲಿಯೂ ದೊಡ್ಡ ನಟಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವ ದೊಡ್ಡ ಕನಸು ಕಂಡಿದ್ದ ತಾಪ್ಸಿ ಸದ್ಯ ಬಹುಬೇಡಿಯ ನಟಿಯಾಗಿ ಹೊರಹೊಮ್ಮಿದ್ದಾರೆ.

  ಬಚ್ಚನ್ ಬಗ್ಗೆ ತಾಪ್ಸಿ ಪನ್ನು ಹೇಳಿಕೆ: ಪರ ವಿರೋಧ ಚರ್ಚೆ ಶುರುಬಚ್ಚನ್ ಬಗ್ಗೆ ತಾಪ್ಸಿ ಪನ್ನು ಹೇಳಿಕೆ: ಪರ ವಿರೋಧ ಚರ್ಚೆ ಶುರು

  ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ತಾಪ್ಸಿ ಅಭಿನಯಕ್ಕೆ ಚಿತ್ರ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈಗ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದ್ಮೇಲೆ ತಾಪ್ಸಿ ಪಾತ್ರ ಹೇಗಿರಲಿದೆ ಎನ್ನುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಬನ್ಸಾಲಿ ಜೊತೆ ಕೆಲಸ ಮಾಡಬೇಕು ಎನ್ನುವುದು ಅನೇಕ ಕಲಾವಿದರ ಕನಸಾಗಿರುತ್ತೆ.

  ಸದ್ಯ ತಾಪ್ಸಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬಂದಿದೆ. ಚಿತ್ರದಲ್ಲಿ ತಾಪ್ಸಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರಕ್ಕೆ 'ಸಿಯಾ ಜಿಯಾ' ಎಂದು ಟೈಟಲ್ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ.

  ಸಂಜಯ್ ಲೀಲಾ ಬನ್ಸಾಲಿ ಸದ್ಯ ಅಲಿಯಾ ಭಟ್ ಜೆತೆ' ಗಂಗುಬಾಯಿ ಕಥಿಯಾವಾಡಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತಾಪ್ಸಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಇಬ್ಬರ ಕಮಿಟ್ ಮೆಂಟ್ಸ್ ಮುಗಿದ ಬಳಿಕ ಸಂಜಯ್ ಲೀಲಾ ಬನ್ಸಾಲಿ ಮತ್ತು ತಾಪ್ಸಿ ಕಾಂಬಿನೇಷನ್ ಸಿನಿಮಾ ಪ್ರಾರಂಭವಾಗುವ ಸಾಧ್ಯತೆ ಇದೆ.

  English summary
  Bollywood actress Taapsee Pannu will playing lead role in Sanjay Leela Bansali next film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X