50 ಸಾವಿರ ರೂಪಾಯಿ ಫೇಸ್‌ಕ್ರೀಮ್.. ತಬು ಸೌಂದರ್ಯದ ಗುಟ್ಟು ರಟ್ಟು!

ಬಾಲಿವುಡ್ ಬ್ಯೂಟಿ ತಬು ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ವಯಸ್ಸು 50 ದಾಟಿದರೂ ಈ ಹೈದರಾಬಾದ್ ಚೆಲುವೆ ಸೌಂದರ್ಯ ಮಾಸಿಲ್ಲ. ದಿನದಿಂದ ದಿನಕ್ಕೆ ತಬು ವಯಸ್ಸು ಹೆಚ್ಚುತ್ತಿದೆಯಾ ಕಮ್ಮಿಯಾಗುತ್ತಿದೆಯಾ ಎಂದು ಅಭಿಮಾನಿಗಳು ಅಚ್ಚರಿಪಡುವಂತೆ ತೆರೆಮೇಲೆ ಕಂಗೊಳಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬೆಡಗಿ ತನ್ನ ಸೌಂದರ್ಯದ ಸಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ಸೂಪರ್ ಹಿಟ್ ಆದ 'ಭೂಲ್ ಭುಲಯ್ಯ'-2 ಸಿನಿಮಾದಲ್ಲೂ ತಬು ಮಿಂಚಿದ್ದರು. 'ಕುಟ್ಟೆ', 'ದೃಶ್ಯಂ- 2', 'ಕುಫಿಯಾ', 'ಭೋಲಾ' ಹೀಗೆ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ತಬು ಹೈಸ್ಕೂಲ್ ಸಮಯದಲ್ಲಿ ಮುಂಬೈಗೆ ಶಿಫ್ಟ್ ಆಗಿದ್ದರು. 'ಬಝಾರ್' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರು. ತೆಲುಗು, ತಮಿಳು, ಬೆಂಗಾಲಿ, ಇಂಗ್ಲೀಷ್ ಚಿತ್ರಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡರು.

ಸಾಧಾರಣವಾಗಿ ನಟಿಯರು ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದ ರಸಹ್ಯಗಳನ್ನು ಹಂಚಿಕೊಳ್ಳುವುದಿಲ್ಲ. ಅದನ್ನೆಲ್ಲಾ ರಹಸ್ಯವಾಗಿ ಕಾಪಾಡಿಕೊಳ್ಳುತ್ತಾರೆ. ಪಬ್ಲಿಕ್ ಫಿಗರ್ಸ್ ಆಗಿರುವುದರಿಂದ ಅಂಹತ ವಿಚಾರಗಳು ಗೊತ್ತಾದರೆ ಭಾರೀ ಸುದ್ದಿಯಾಗುತ್ತದೆ. ಇನ್ನು ಸೋಶಿಯಲ್ ಮೀಡಿಯಾ ಬಂದಮೇಲೆ ಟ್ರೋಲ್ ಆಗುವ ಭಯವೂ ಇದೆ. ಆದರೆ ತಬು ತಮ್ಮ ಸೌಂದರ್ಯದ ಬಗ್ಗೆ ಒಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಒಮ್ಮೆ 50 ಸಾವಿರ ರೂಪಾಯಿ ಫೇಸ್‌ಕ್ರೀಮ್ ಬಳಸಿದ್ದಾಗಿಯೂ ವಿವರಿಸಿದ್ದಾರೆ.

Actress Tabu reveals her beauty secrets

ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ತಬು ಮಾತನಾಡುತ್ತಾ "ನಿಮ್ಮ ಸೌಂದರ್ಯದ ರಹಸ್ಯ ಏನು ಎಂದು ನನ್ನ ಮೇಕಪ್ ಆರ್ಟಿಸ್ಟ್ ನನ್ನನ್ನು ಕೇಳಿದ್ದಳು. ಆಗ ನಾನು ಅಂತಹ ರಹಸ್ಯ ಏನು ಇಲ್ಲ ಎಂದು ಹೇಳಿದ್ದೆ. ಆದರೆ ಕೆಲ ದಿನಗಳ ನಂತರ ಆಕೆ ನನಗೆ ಒಂದು ಫೇಸ್‌ಕ್ರೀಮ್ ಬಳಸಲು ಹೇಳಿದ್ದರು. ಅದರ ಬೆಲೆ ಬರೋಬ್ಬರಿ 50 ಸಾವಿರ ರೂಪಾಯಿ. ಅದನ್ನು ಒಮ್ಮೆ ಮಾತ್ರ ಖರೀದಿಸಿ ಬಳಸಿದ್ದೆ. ಮತ್ತೆ ಎಂದೂ ಖರೀದಿಸಲಿಲ್ಲ" ಎಂದು ಹೇಳಿದ್ದಾರೆ.

"ನಿಜ ಹೇಳಬೇಕು ಎಂದರೆ, ನಾನು ಸುಂದರವಾಗಿ ಕಾಣಲು ಯಾವುದೇ ಕ್ರೀಂ ಬಳಸುವುದಿಲ್ಲ. ಯಾವುದೇ ವಿಶೇಷ ಫೇಸ್‌ವಾಶ್ ಮಾಡಿಸಲ್ಲ. ಆದರೆ ಚೆನ್ನಾಗಿ ಕಾಣಿಸಲು ಸಾಧಾರಣವಾಗಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡ್ತೀನಿ. ವಿಶೇಷ ಕಾಳಜಿ ವಹಿಸುತ್ತೀನಿ. ಹೆಲ್ದಿಯಾಗಿ ಇರಲು ಶ್ರಮ ಪಡುತ್ತೀನಿ. ಆದರೆ ವಿಶೇಷವಾಗಿ ಯಾವುದೇ ಕಸರತ್ತು ಮಾಡುವುದಿಲ್ಲ" ಎಂದು ತಬು ಮಾಹಿತಿ ನೀಡಿದ್ದಾರೆ.

Actress Tabu reveals her beauty secrets

ಇನ್ನು ಇತ್ತೀಚೆಗೆ ತಬು ಮದುವೆ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದ ಮಾತುಗಳು ಸಖತ್ ವೈರಲ್ ಆಗಿತ್ತು. "ನನಗೂ ತಾಯಿ ಆಗುವ ಆಸೆ ಇದೆ. ಇದಕ್ಕಾಗಿ ಮದುವೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮದುವೆ ಆಗದೆಯೇ ಗರ್ಭ ಧರಿಸಬಹುದು. ಅದಕ್ಕೆ ಸಾರೊಗಸಿ ಪದ್ಧತಿ ಮೂಲಕ ತಾಯಿಯಾಗುವ ಅವಕಾಶ ಇದೆ. ಮದುವೆ ಆಗದಿದ್ದರೆ ಸತ್ತು ಹೋಗುವುದಿಲ್ಲ. ತಾಯಿ ಆಗದಿದ್ದರೂ ಸಾಯುವುದಿಲ್ಲ" ಎಂದಿದ್ದರು.

More from Filmibeat

English summary
Actress Tabu reveals her beauty secrets. After success of bhool bhulaiyaa 2 Tabu Doing Back Back Movie Movies.know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X