ಮಾಧ್ಯಮಗಳ ಮೇಲೆ ಬೌನ್ಸರ್ ಹಾರಾಟ: ತಮನ್ನಾಗೆ ಮುಜುಗರ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯ ಭಾರತೀಯ ಚಿತ್ರರಂಗ ಬಹುಬೇಡಿಕೆಯ ನಟಿ. ಈ ಹಿಂದೆ ವಿಭಿನ್ನ ಪಾತ್ರಗಳನ್ನು ಮಾಡಿದ್ದ ತಮನ್ನ ಈಗ ಬೌನ್ಸರ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಮಧುರ್ ಬಂಡಾರ್ಕರ್ ನಿರ್ದೇಶನದ 'ಬಬ್ಲಿ ಬೌನ್ಸರ್' ಚಿತ್ರದಲ್ಲಿ ನಟಿಸಿರುವ ತಮನ್ನಾ ಹೊಸ ಲುಕ್ನಲ್ಲಿ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ.
ನಟಿ ತಮನ್ನಾ ಇದೇ ಮೊದಲ ಬಾರಿಗೆ ಲೇಡಿ ಬೌನ್ಸರ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ನಟಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ತಮನ್ನಾ ಸಖತ್ ಖಡಕ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದೇ ಸಪ್ಟೆಂಬರ್ 23ರಂದು 'ಬಬ್ಲಿ ಬೌನ್ಸರ್' ಚಿತ್ರ ಓಟಿಟಿಯಲ್ಲಿ ತೆರೆ ಕಾಣಲು ಸಜ್ಜಾಗಿದ್ದು ಸದ್ಯ ಚಿತ್ರತಂಡ ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿದೆ. ತಮನ್ನಾ ಕೂಡ ನಿನ್ನೆ(ಸಪ್ಟೆಂಬರ್ 17) ತಮ್ಮ ಮುಂದಿನ ಚಿತ್ರ 'ಬಬ್ಲಿ ಬೌನ್ಸರ್' ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್ಗೆ ತೆರಳಿದ್ದರು. ಈ ವೇಳೆ ಸಾರ್ವಜನಿಕರ ಮುಂದೆ ನಡೆದ ಘಟನೆಯನ್ನು ತಮನ್ನಾ ಅವರನ್ನು ಮುಜುಗರಕ್ಕೀಡು ಮಾಡಿದೆ.

ಬೌನ್ಸರ್ಗಳ ವರ್ತನೆಯಿಂದ ಮಿಲ್ಕಿ ಬ್ಯೂಟಿಗೆ ಮುಜುಗರ
'ಬಬ್ಲಿ ಬೌನ್ಸರ್' ಪಕ್ಕಾ ಕಾಮಿಡಿ ಸಿನಿಮಾವಾದ್ರೂ ಕೂಡ ಚಿತ್ರತಂಡ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಲು ಮುಂದಾಗಿದೆ. ಹೀಗಾಗಿ ನಿನ್ನೆ ಹೈದರಾಬಾದ್ದಲ್ಲಿ ನಡೆದ ಬಬ್ಲಿ ಬೌನ್ಸರ್ ಚಿತ್ರದ ಪ್ರಚಾರದ ವೇಳೆ ನಟಿ ತಮನ್ನಾ ಬೌನ್ಸರ್ಗಳ ಜೀವನದ ಬಗ್ಗೆ ಮಾತನಾಡಿದ್ದಾರೆ. ಬೌನ್ಸರ್ಗಳ ಕೆಲಸ ಹಾಗೂ ಅವರ ಜೀವನದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಇದಾದ ಕೆಲವೇ ಸಮಯದಲ್ಲಿ ಸ್ವತಃ ತಮ್ಮ ಬೌನ್ಸರ್ಗಳ ವರ್ತನೆಯಿಂದ ತಮ್ಮನ್ನಾ ಮುಜುಗರ ಪಡುವಂತಾಗಿದೆ.

'ಬಬ್ಲಿ ಬೌನ್ಸರ್' ಪ್ರಚಾರದ ವೇಳೆ ನಡೆದಿದ್ದೇನು..?
'ಬಬ್ಲಿ ಬೌನ್ಸರ್' ಪ್ರಚಾರದ ವೇಳೆ ನಟಿ ತಮನ್ನಾ ಭಾಟಿಯ ಫೋಟೊಗಳನ್ನು ತೆಗೆಯಲು ಫೋಟೊಗ್ರಾಫರ್ಗಳು ಮುಗಿಬಿದ್ದರು. ಅಲ್ಲದೇ ಓರ್ವ ಫೋಟೊಗ್ರಾಫರ್ ಬೈಟ್ ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ಈ ವೇಳೆ ತಮನ್ನಾ ಬೌನ್ಸರ್ಗಳು ಇದನ್ನು ತಡೆದಿದ್ದು, ಬೈಟ್ ತೆಗೆದುಕೊಳ್ಳಲು ಅವಕಾಶ ನೀಡದೆ ಅನುಚಿತ ವರ್ತನೆ ತೋರಿದ್ದಾರೆ.

ಕೆಟ್ಟ ಪದ ಬಳಸಿ ಫೋಟೊಗ್ರಾಫರ್ಗೆ ನಿಂದನೆ
ಬೈಟ್ ತೆಗೆದುಕೊಳ್ಳಲು ಬಂದ ವ್ಯಕ್ತಿಗೆ ತಮನ್ನಾ ಬೌನ್ಸರ್ ನಿಂದಿಸಿದ್ದು, ಕೆಟ್ಟ ಪದ ಬಳಸಿ ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಕೆಲ ಕಾಲ ಘಟನಾ ಸ್ಥಳದಲ್ಲಿ ಕೋಲಾಹಲ ಉಂಟಾಗಿತ್ತು. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಪಕ್ಕದಲ್ಲೇ ಇದ್ದ ಕಸದ ಬುಟ್ಟಿಯನ್ನು ಎತ್ತಕೊಂಡು ಹೊಡೆಯಲು ಮುಂದಾಗಿದ್ದು, ಫೋಟೊಗ್ರಾಫರ್ಗಳಿಗೆ ಬೆದರಿಕೆ ಹಾಕಿದ್ದಾರೆ.

ಇದು ಅತೀರೇಖ ಎಂದ ನೆಟ್ಟಿಗರು
ನಟಿ ತಮನ್ನಾ ಭಾಟಿಯ ಬೌನ್ಸರ್ಗಳ ಗೂಂಡಾ ವರ್ತನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡುಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ನಟಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಬೌನ್ಸರ್ಗಳ ಕರ್ತವ್ಯ. ನಟಿಯನ್ನು ರಕ್ಷಿಸಲು ಆತ ಹಾಗೆ ವರ್ತಿಸಿರಬಹುದು ಎಂದಿದ್ದರೆ, ಇನ್ನೂ ಕೆಲವರು ತಮನ್ನಾ ಬೌನ್ಸರ್ಗಳ ವರ್ತನೆ ಅತೀರೇಖ ಎಂದು ಕಮೆಂಟ್ ಮಾಡಿದ್ದಾರೆ.


Click it and Unblock the Notifications











