ಇದು 'ಜೈಲರ್' ಸಾಂಗ್ ಅಲ್ಲ.. 'ಸ್ತ್ರೀ 2' ಸಿನಿಮಾದ ಹಾಡು ; ಮಿಲ್ಕಿ ಬ್ಯೂಟಿ ಗ್ಲಾಮರ್ ಶೋ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಸಿನಿಮಾಗಳಿಗಿಂತ ಸ್ಪೆಷಲ್ ಸಾಂಗ್‌ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ 'ಜೈಲರ್' ಸಿನಿಮಾದ ಹಾಡೊಂದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಹೆಜ್ಜೆ ಹಾಕಿ ವೈರಲ್ ಆಗಿದ್ದರು. ಹಾಗೇ ಈಗ ಇನ್ನೊಂದು ಗ್ಲಾಮರಸ್ ಹಾಡಿಗೆ ಹೆಜ್ಜೆ ಹಾಕಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ತಮನ್ನಾ ಭಾಟಿಯಾ ಬಾಲಿವುಡ್‌ನ ಹೊಸ ಸಿನಿಮಾ 'ಸ್ತ್ರೀ 2' ಸಾಂಗ್ ಒಂದರಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ರಿಲೀಸ್ ಆಗುತ್ತಿದ್ದಂತೆ ಟ್ರೆಂಡಿಂಗ್‌ನಲ್ಲಿದೆ. ತಮನ್ನಾ ಗ್ಲಾಮರಸ್ ಲುಕ್ ನೋಡಿ ಬಾಲಿವುಡ್ ಮಂದಿನೇ ಕಳೆದು ಹೋಗಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ತಮನ್ನಾ ಭಾಟಿಯಾ ಡ್ಯಾನ್ಸ್ ಬಗ್ಗೆನೂ ಚರ್ಚೆಯಾಗುತ್ತಿದೆ.

'ಸ್ತ್ರೀ 2' ಸಿನಿಮಾ ಆಗಸ್ಟ್ 15ರಂದು ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರತಂಡ ಜೋರಾಗಿಯೇ ಪ್ರಚಾರ ಆರಂಭಿಸಿದ್ದಾರೆ. ಅದರಲ್ಲಿ ತಮನ್ನಾ ಡ್ಯಾನ್ಸ್ ಮಾಡಿದ ಈ ಗ್ಲಾಮರಸ್ ಹಾಡು ಕೂಡ ಒಂದು. ಸದ್ಯ ಈ ಹಾಡಿನ ಮೂಲಕ 'ಸ್ತ್ರೀ 2' ಸಿನಿಮಾ ಪ್ರೇಕ್ಷಕರನ್ನು ಈಗಾಗಲೇ ಸೆಳೆಯುವುದಕ್ಕೆ ಶುರು ಮಾಡಿದೆ. ಸಿನಿಮಾ ಬಿಡುಗಡೆವರೆಗೂ ಈ ಹಾಡು ಟ್ರೆಂಡಿಂಗ್‌ನಲ್ಲಿದ್ದರೆ, 'ಸ್ತ್ರೀ 2' ಸಿನಿಮಾದ ಮೊದಲ ಶೋ ಗೆದ್ದಂತೆ.
'ಸ್ತ್ರೀ 2' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರಾಜ್ಕುಮಾರ್ ರಾವ್, ಶ್ರದ್ಧಾ ಕಪೂರ್, ಅಪಾರಶಕ್ತಿ ಖುರಾನಾ, ಪಂಕಜ್ ತ್ರಿಪಾಠಿ ಸೇರಿದಂತೆ ಬಾಲಿವುಡ್‌ನ ದಿಗ್ಗಜರೇ ನಟಿಸಿದ್ದಾರೆ. ಇದು ಆರು ವರ್ಷ ಹಿಂದೆ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ 'ಸ್ತ್ರೀ' ಸಿನಿಮಾ ಸೀಕ್ವೆಲ್. ಈ ಹಾಡಿನಲ್ಲೂ ತಮನ್ನಾ ಭಾಟಿಯಾ ಗ್ಲಾಮರ್ ಶೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಅಂದ್ಹಾಗೆ, ತಮನ್ನಾ ಭಾಟಿಯಾ ಇತ್ತೀಚೆಗೆ ಗ್ಲಾಮರಸ್ ಸಾಂಗ್‌ಗಳಿಗೆ ಹೆಚ್ಚಾಗಿ ಹೆಜ್ಜೆ ಹಾಕುತ್ತಿದ್ದಾರೆ. 'ಕೆಜಿಎಫ್ 2' ಸಿನಿಮಾದಲ್ಲೂ ಜೋಕೆ ಅಂತ ಹೆಜ್ಜೆ ಹಾಕಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ರಜನಿಕಾಂತ್ ನಟಿಸಿದ 'ಜೈಲರ್'ನಲ್ಲೂ ಕಾವಲಯ್ಯ ಅಂತ ಡ್ಯಾನ್ಸ್ ಮಾಡಿದ್ದರು. ಆ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತ್ತು. ಹಾಗೇ 'ಅರಣ್ಮನೈ 4'ನಲ್ಲೂ ಗ್ಲಾಮರಸ್ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಅದೂ ಸೂಪರ್ ಹಿಟ್ ಆಗಿದೆ.
ಹೀಗಾಗಿ 'ಸ್ತ್ರೀ 2' ಸಿನಿಮಾ ಕೂಡ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅಂದ್ಹಾಗೆ 'ಸ್ತ್ರೀ 2' ಸಿನಿಮಾವನ್ನು ಅಮರ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜನ್ ನಿರ್ಮಾಣ ಮಾಡಿದ್ದು, ತಮನ್ನಾ ಭಾಟಿಯಾ ಸಾಂಗ್ ಈಗಾಗಲೇ ಯೂಟ್ಯೂಬ್‌ನಲ್ಲಿ ಮಿಲಿಯನ್ ಲೆಕ್ಕದಲ್ಲಿ ವೀಕ್ಷಣೆ ಪಡೆಯುವುದಕ್ಕೆ ಶುರುಮಾಡಿದೆ.


Click it and Unblock the Notifications











