ಎರಡು ಬಾರಿ ನಾನು ಪ್ರೀತಿಯಲ್ಲಿ ನೊಂದು-ಬೆಂದು ಕಣ್ಣೀರು ಹಾಕಿದ್ದೇನೆ - ತಮನ್ನಾ...!
ಪ್ರೀತಿ-ಪ್ರೇಮ-ವಿರಹ-ವೇದನೆ ಬಣ್ಣದ ಪ್ರಪಂಚದಲ್ಲಿ ತೀರಾ ಕಾಮನ್ನು. ಇವತ್ತು ಜೊತೆಯಾಗಿದ್ದವರು ನಾಳೆಯೇ ಇಲ್ಲಿ ದೂರವಾಗುತ್ತಾರೆ. ನೀನೆ ನನ್ನ ಜೀವ, ಪ್ರಾಣ ಎಂದವರು ಮರುದಿನವೇ ಬೇರೆಯವರ ಜೊತೆ ಓಡಾಡುತ್ತಾರೆ. ಇದಕ್ಕೆ ಪೂರಕವಾಗಗಿ ಇಲ್ಲಿ ಬ್ರೇಕಪ್‌ನ ಹತ್ತು ಹಲವು ಕಥೆಗಳಿವೆ. ಸದ್ಯ ಮಿಲ್ಕಿ ಬ್ಯೂಟಿ ಎಂದೇ ಜಗತ್ಪಸಿದ್ದಿಯನ್ನು ಪಡೆದ ತಮನ್ನಾ ತಮ್ಮ ಬದುಕಿನ ಇಂತಹದ್ದೇ ಎರಡು ಕಥೆಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಅಸಲಿಗೆ ತಮನ್ನಾ ಅವರ ಹೃದಯ ಗೆದ್ದ ಏಕೈಕ ವ್ಯಕ್ತಿ ಅಂದರೆ ಅದು ವಿಜಯ್ ವರ್ಮಾ ಎನ್ನುವುದು ಅನೇಕರ ಕಲ್ಪನೆ. ಆದರೆ, ವಾಸ್ತವದಲ್ಲಿ ವಿಜಯ್ ವರ್ಮಾಗೂ ಮುನ್ನ, ಇನ್ನು ಇಬ್ಬರು ತಮನ್ನಾ ಬದುಕಿನಲ್ಲಿದ್ದರು. ಖುದ್ದು ತಮನ್ನಾ ಈ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಇಬ್ಬರಿಂದ ಕಲಿತ ಜೀವನದ ಪಾಠವನ್ನೂ ಹೇಳಿದ್ದಾರೆ.

ಹೌದು, ರಾಜ್ ಶಮಾನಿ ಅವರಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಲವ್ ಲೈಫ್ ಬಗ್ಗೆ ಮುಕ್ತವಾಗಿ ಮಾತನಾಡಿರುವ ತಮನ್ನಾ, ನಾನು ಆಗಿನ್ನೂ ಚಿಕ್ಕವಳಿದ್ದೆ. ಒಬ್ಬ ವ್ಯಕ್ತಿಗೋಸ್ಕರ ನನ್ನ ಬದುಕಿನ ಸಂಭ್ರಮಗಳನ್ನು-ಆಸೆಗಳನ್ನು ಮತ್ತು ಅಗತ್ಯತೆಗಳನ್ನು ತ್ಯಾಗ ಮಾಡುವುದು ಸರಿಯಲ್ಲ ಎಂಬ ಭಾವನೆ ನನ್ನಲ್ಲಿ ಬಂತು, ಯಾಕೆಂದರೆ ನಾನು ಜಗತ್ತನ್ನೂ ಇನ್ನೂ ಅನ್ವೇಷಣೆ ಮಾಡಬೇಕು ಎಂದುಕೊಂಡಿದ್ದೆ ಅಂದಿದ್ದಾರೆ. ಇನ್ನೂ ಎರಡನೇ ಬಾರಿ ಆ ವ್ಯಕ್ತಿಯ ಜೊತೆ ನಾನು ದೀರ್ಘ ಕಾಲದವರೆಗೆ ಬದುಕಲು ಸಾಧ್ಯ ಇಲ್ಲ ಎನ್ನುವುದು ನನಗೆ ಮನವರಿಕೆಯಾಯಿತು ಎಂದಿರುವ ತಮನ್ನಾಈ ಕಾರಣಕ್ಕೆ ಆ ಸಂಬಂಧದಿಂದ ಕೂಡ ನಾನು ಹೊರ ಬಂದೆ ಎಂದು ಹೇಳಿದ್ದಾರೆ.
ನನ್ನ ಈ ಎರಡು ಸಂಬಂಧಗಳಿಂದ ನಾನು ತುಂಬಾನೇ ಕಲಿತಿದ್ದೇನೆ ಎಂದಿರುವ ತಮನ್ನಾ, ಈ ಹಿಂದೆ ನಾನು ಹೀಗೆ ಇರಲಿಲ್ಲ. ನನ್ನನ್ನೂ ಪ್ರೀತಿ ಮಾಡುವ ವ್ಯಕ್ತಿಗೆ ಅರ್ಹತೆ -ಯೋಗ್ಯತೆ ಇದೆಯಾ ಇಲ್ಲವಾ ಎನ್ನುವುದನ್ನು ತಿಳಿಯದೇ ನಾನು ಎಲ್ಲವನ್ನೂ ಅವರಿಗೆ ನೀಡುತ್ತಿದ್ದೆ ಎಂದಿದ್ದಾರೆ. ಕೊಡು ಮತ್ತು ಕೊಳ್ಳುವಿಕೆಯಿಂದನೇ ಸಂಬಂಧ ಉಸಿರು ಚೆಲ್ಲುತ್ತೆ ಎಂದು ಕೂಡ ತಮನ್ನಾ ಹೇಳಿದ್ದಾರೆ.

ಮುಂದುವರೆದು ಪ್ರೀತಿಯ ಕುರಿತು ಉಪದೇಶವನ್ನೂ ಕೂಡ ನೀಡಿರುವ ತಮನ್ನಾ ಒಬ್ಬ ವ್ಯಕ್ತಿಯನ್ನೂ ಯಾವತ್ತು ನಾವು ಬದಲಾಯಿಸಲು ಹೋಗಬಾರದು ಎಂದಿದ್ದಾರೆ. ಇನ್ನೂ ಸಂಬಂಧಗಳಲ್ಲಿ ಸುಳ್ಳು ಹೇಳುವರನ್ನು ಕೂಡ ನಾವು ಯಾವತ್ತು ನಂಬಬಾರದು ಎಂದು ಹೇಳಿರುವ ತಮನ್ನಾ ಅವರು ಚಿಕ್ಕ ಚಿಕ್ಕ ವಿಚಾರಕ್ಕೆಲ್ಲ ಸುಳ್ಳು ಹೇಳುತ್ತಾರೆ. ಒಂದರ್ಥದಲ್ಲಿ ಅವರು ಹುಟ್ಟಾ ಸುಳ್ಳುಗಾರರಾಗಿರುತ್ತಾರೆ ಎಂದು ಹೇಳಿದ್ದಾರೆ. ಸುಳ್ಳಿನ ಮೇಲೆ ಸಂಬಂಧದ ಸೌಧ ಕಟ್ಟಿ ನಿಲ್ಲಿಸಲು ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯವನ್ನು ಕೂಡ ತಮನ್ನಾ ವ್ಯಕ್ತಪಡಿಸಿದ್ದಾರೆ.
ಇನ್ನೂಒಂದು ಸಂಬಂಧ ಯಶಸ್ವಿಯಾಗಿ ಮುಂದುವರೆಯಬೇಕೆಂದರೆ ಪುರುಷರಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು ಎಂದಿರುವ ತಮನ್ನಾ, ಹುಡುಗಿಯ ಸಮಸ್ಯೆಯನ್ನು ಬಗೆಹರಿಸುವುದು ಮುಖ್ಯವಲ್ಲ. ಆ ಸಮಸ್ಯೆಯನ್ನು ಶಾಂತ ಚಿತ್ತದಿಂದ ಕೇಳುವುದು ಮುಖ್ಯ ಎಂದು ಹೇಳಿದ್ದಾರೆ. ಆ ಹುಡುಗಿ ಬದುಕಿನಲ್ಲಿ ನಿಮ್ಮ ಪಾತ್ರ ಮುಖ್ಯವಾಗಿದೆಯಾ ಇಲ್ಲವಾ ಎನ್ನುವುದನ್ನು ಖಚಿತ ಪಡಿಸಿಕೊಂಡು ಮುಂದುವರೆಯಿರಿ ಎಂದು ಕೂಡಾ ಹೇಳಿದ್ದಾರೆ ತಮನ್ನಾ ಭಾಟಿಯಾ.


Click it and Unblock the Notifications











