For Quick Alerts
  ALLOW NOTIFICATIONS  
  For Daily Alerts

  ಹಲವು ಬಾರಿ ನನ್ನನ್ನು ಕೊಲ್ಲಲು ಯತ್ನಿಸಲಾಗಿದೆ: ನಟಿ ತನುಶ್ರೀ ದತ್ತ

  |

  ಬಾಲಿವುಡ್‌ನ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ನಟಿ ತನುಶ್ರೀ ದತ್ತ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮೇಲೆ ಹತ್ಯಾ ಪ್ರಯತ್ನ ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ.

  ಮೀ ಟೂ ಆರೋಪ ಮಾಡಿದ ಬಳಿಕ ನನ್ನ ಮೇಲೆ ಹಲವು ಬಾರಿ ಹತ್ಯಾ ಯತ್ನಗಳು ನಡೆದಿವೆ. ''ನಾನು ಉಜ್ಜೈನಿಯಲ್ಲಿದ್ದಾಗ ನನ್ನ ಕಾರಿನ ಬ್ರೇಕ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಇದರಿಂದಾಗಿ ನಾನು ಅಫಘಾತಕ್ಕೆ ಈಡಾಗಿ ಗಾಯಗೊಂಡಿದ್ದೆ ಎಂದಿದ್ದಾರೆ.

  ಮತ್ತೊಮ್ಮೆ ನನಗೆ ವಿಷ ನೀಡಿ ಕೊಲ್ಲಲು ಯತ್ನಿಸಿದ್ದರು. ನನ್ನ ಮನೆಗೆ ಒಬ್ಬ ಕೆಲಸದಾಕೆಯನ್ನು ಶತ್ರುಗಳು ಕಳಿಸಿದ್ದರು. ಆಕೆ ಬಂದ ಕೆಲ ದಿನಗಳಿಗೆ ನಾನು ಹುಷಾರು ತಪ್ಪಲು ಆರಂಭಿಸಿದೆ. ಆಗ ನನಗೆ ಗೊತ್ತಾಯಿತು. ನಾನು ಕುಡಿಯುತ್ತಿರುವ ನೀರಿನಲ್ಲಿ ಏನೋ ಬೆರೆಸಲಾಗುತ್ತಿದೆ ಎಂದು ಎಂದು ತನುಶ್ರೀ ದತ್ತ ಸಂದರ್ಶನದಲ್ಲಿ ಹೇಳಿದ್ದಾರೆ.

  ನಾನು ಈ ಮೊದಲು ಮೀ ಟೂ ಆರೋಪ ಮಾಡಿದ್ದ ನಟರು, ಸೆಲೆಬ್ರಿಟಿಗಳು ಹಾಗೂ ಬಾಲಿವುಡ್ ಮಾಫಿಯಾ ನನ್ನನ್ನು ಕೊಲ್ಲಲು ಯತ್ನಿಸುತ್ತಿದೆ. ನನಗೆ ಏನಾದರೂ ಆದರೆ ಅದಕ್ಕೆ ನಾನಾ ಪಾಟೇಕರ್ ಹಾಗೂ ಬಾಲಿವುಡ್ ಮಾಫಿಯಾ ಹೊಣೆಯಾಗಿರುತ್ತಾರೆ ಎಂದಿದ್ದಾರೆ ತನುಶ್ರೀ ದತ್ತ.

  ಬಾಲಿವುಡ್‌ನಲ್ಲಿ ಮೀ ಟೂ ಅಭಿಯಾನ ಜೋರಾಗಿದ್ದ ಸಮಯದಲ್ಲಿ ನಟಿ ತನುಶ್ರೀ ದತ್ತ 2018 ರಲ್ಲಿ ಹಿರಿಯ ನಟ ನಾನಾ ಪಾಟೇಕರ್, 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. 'ಹಾರ್ನ್ ಓಕೆ ಪ್ಲೀಸ್' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಾನಾ ಪಾಟೇಕರ್ ನನ್ನನ್ನು ಕೆಟ್ಟದಾಗಿ ಮುಟ್ಟಿದರು ಎಂದು ತನುಶ್ರೀ ಆರೋಪಿಸಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಬಿ ರಿ-ಪೋರ್ಟ್ ಸಲ್ಲಿಸಿದರು.

  English summary
  Actress Tanushree Dutta said attempts made to kill me several times. She also said If anything happens to her then Nana Patekar and Bollywood Mafia is the reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X