15 ಕೆಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ ನಟಿ ತನುಶ್ರೀ ದತ್ತ

ಬಾಲಿವುಡ್ ನ ಹಾಟ್ ನಟಿ ತನುಶ್ರೀ ದತ್ತ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ. ವ್ಯಾಯಾಮ, ಯೋಗ ಮತ್ತು ಡಯಟ್ ಅಂತ ಕಟ್ಟುನಿಟ್ಟಿನ ಜೀವನ ಮಾಡಿ ತನ್ನ ಗುರಿ ತಲುಪುವಲ್ಲಿ ತನುಶ್ರೀ ಯಶಸ್ವಿಯಾಗಿದ್ದಾರೆ. ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿರುವ ತನುಶ್ರೀ ತೂಕ ಇಳಿಸಿಕೊಂಡ ಪಯಣದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಸದ್ಯ ಅಮೆರಿಕದಲ್ಲಿ ವಾಸಿಸುತ್ತಿರುವ ತನುಶ್ರೀ ತೆಳ್ಳಗಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಮತ್ತೆ ಬಾಲಿವುಡ್ ಗೆ ವಾಪಸ್ ಆಗುವ ಕನಸು ಕಂಡಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ನಟಿ ತನುಶ್ರೀ ದತ್ತ ಅಲ್ಪಾವಧಿಯಲ್ಲೇ ಚಿತ್ರರಂಗದಿಂದ ದೂರ ಸರಿದರು.

'ಆಶಿಕ್ ಬಯಾನಾ ಆಪ್ನ' ಚೊಚ್ಚಲ ಸಿನಿಮಾದಲ್ಲೇ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದ ತನುಶ್ರೀ, 2010 ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಸಿನಿಮಾರಂಗದಿಂದ ದೂರ ಸರಿಯುತ್ತಿದ್ದಂತೆ ತನುಶ್ರೀ ಸಿಕ್ಕಾಪಟ್ಟೆ ದಪ್ಪ ಆಗಿದ್ದರು. ದಪ್ಪ ಆಗಿದ್ದ ತನುಶ್ರೀ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದರು.

Actress Tanushree Dutta Sheds 15 kgs Body weight

ಇದೀಗ 10 ವರ್ಷಗಳ ಬಳಿಕ ಮತ್ತೆ ಬಣ್ಣಹಚ್ಚುವ ಆಸೆಯೊಂದಿಗೆ ತನುಶ್ರೀ ತಯಾರಿ ನಡೆಸುತ್ತಿದ್ದಾರೆ. ಕಠಿಣ ವರ್ಕೌಟ್ ಮಾಡಿ, 15 ಕೆಜಿ ಇಳಿಸಿಕೊಂಡಿದ್ದಾರೆ. ವರ್ಕೌಟ್ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

'ಹಾಟ್ ಆಗಿ ಕಾಣಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಹೊಸ ಬಾಡಿ ಶೇಪ್ ಗೆ ತಕ್ಕಂತೆ ಪೂರ್ತಿ ಹೊಸ ಬಟ್ಟೆಗಳನ್ನು ಖರೀದಿಸಬೇಕಾಗುತ್ತೆ' ಎಂದು ಬರೆದುಕೊಂಡಿದ್ದಾರೆ. ತೆಳ್ಳಗೆ ಬಳಕುವ ಬಳ್ಳಿಯಂತಿದ್ದ ತನುಶ್ರೀ ದತ್ತ ಏಕಾಏಕಿ ದಪ್ಪ ಆಗಿರುವುದನ್ನು ನೋಡಿ ಅನೇಕರು ಬಾಡಿ ಶೇಮಿಂಗ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಇದೀಗ ತೂಕ ಇಳಿಸಿಕೊಂಡು ಮತ್ತೆ ಹಳೆ ಫಾರ್ಮ್ ಗೆ ಮರಳಿರುವ ತನುಶ್ರೀ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Bollywood Actress Tanushree dutta loss 15 kg weight. She Speak about her weight journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X