ಮನೆಯ ವಿದ್ಯುತ್ ಬಿಲ್ ನೋಡಿ ಗಾಬರಿಯಾದ ತಾಪ್ಸಿ ಪನ್ನು
ಬಾಲಿವುಡ್ ನಟಿ ತಾಪ್ಸಿ ಪನ್ನು ತಮಗೆ ಬಂದ ವಿದ್ಯುತ್ ಬಿಲ್ ನೋಡಿ ಗಾಬರಿಯಾಗಿದ್ದಾರೆ. ಅಷ್ಟೆ ದುಬಾರಿ ವಿದ್ಯುತ್ ಬಿಲ್ ನೀಡಿದ ಸಂಸ್ಥೆಯ ವಿರುದ್ಧ ಗರಂ ಆಗಿದ್ದಾರೆ.
Recommended Video
ನಟಿ ತಾಪ್ಸಿ ಪನ್ನು ಗೆ ಬರೋಬ್ಬರಿ 36,000 ರೂಪಾಯಿಯ ವಿದ್ಯುತ್ ಬಿಲ್ ನೀಡಿದೆ ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಸಂಸ್ಥೆ. ಬಿಲ್ ನೋಡಿದ ತಾಪ್ಸಿ ಪನ್ನು ಗಾಬರಿಯಾಗಿಬಿಟ್ಟಿದ್ದಾರೆ.
ತಾಪ್ಸಿ ಪನ್ನು ಮಾತ್ರವಲ್ಲ ಬಾಲಿವುಡ್ ಸೆಲೆಬ್ರಿಟಿಗಳಾದ ನೇಹಾ ದೂಪಿಯಾ, ವೀರ್ ದಾಸ್, ರೇಣುಕಾ ಸಹಾನೆ ಸಹ ದುಬಾರಿ ವಿದ್ಯುತ್ ಬಿಲ್ ಪಡೆದಿದ್ದು, ಈ ಎಲ್ಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಬಿಲ್‌ನ ಚಿತ್ರ ಟ್ವಿಟ್ಟರ್‌ನಲ್ಲಿ
ತಮಗೆ ಬಂದಿರುವ ವಿದ್ಯುತ್ ಬಿಲ್‌ನ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ತಾಪ್ಸಿ ಪನ್ನು ಮೂರು ತಿಂಗಳಿಂದ ಲಾಕ್‌ಡೌನ್ ಆಗಿದೆ ಹೆಚ್ಚಿಗೆ ಯಾವ ಎಲೆಕ್ಟ್ರಿಟ್ ವಸ್ತುಗಳನ್ನು ಬಳಸಿಲ್ಲ ಹೊಸದಾಗಿ ಈ ಅಪಾರ್ಟ್‌ಮೆಂಟ್ ಗೆ ನಾನು ಶಿಫ್ಟ್ ಆಗಿದ್ದೇನೆ ಹಾಗಿದ್ದಮೇಲೆ ಇಷ್ಟೋಂದು ಬಿಲ್ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಜೂನ್ ತಿಂಗಳ ಬಿಲ್ 36000
ತಾಪ್ಸಿ ಅವರಿಗೆ ಜೂನ್ ತಿಂಗಳ ವಿದ್ಯುತ್ ಬಿಲ್ 36,000 ಬಂದಿದೆ. ಇದರ ಹಿಂದಿನ ಎರಡು ತಿಂಗಳ ಬಿಲ್ ಕ್ರಮವಾಗಿ 5000 ಮತ್ತು 4000 ಸನಿಹದಲ್ಲಿ ಬಂದಿದೆ. ಆದರೆ ಜೂನ್ ತಿಂಗಳಲ್ಲಿ ಮಾತ್ರ ವಿದ್ಯುತ್ ಬಿಲ್ ಒಮ್ಮಿಂದೊಮ್ಮೆಗೆ ಏರಿಕೆಯಾಗಿದೆ.

ಬಾಕಿ ಮೊತ್ತ ತಪ್ಪಾಗಿ ನಮೂದು
ಮೇ ತಿಂಗಳಲ್ಲಿ 5500 ವಿದ್ಯುತ್ ಬಿಲ್ ಬಂದಿತ್ತು, ಆದರೆ ಮುಂದಿನ ತಿಂಗಳ ಬಿಲ್‌ನಲ್ಲಿ ಕಳೆದ ತಿಂಗಳ ಬಾಕಿ 18,000 ಎಂದು ನಮೂದಿಸಲಾಗಿದೆ. 5500 ಇದ್ದ ಬಾಕಿ ಮೊತ್ತವನ್ನು 18,000 ಎಂದು ನಮೂದಿಸಿರುವುದೇಕೆ ಎಂದು ತಾಪ್ಸಿ ಪ್ರಶ್ನೆ ಮಾಡಿದ್ದಾರೆ.

ದೂರಿಗೆ ಪ್ರತಿಕ್ರಿಯಿಸಿರುವ ಸಂಸ್ಥೆ
ಅದಾನಿ ಎಲೆಕ್ಟ್ರಿಕ್ ಸಂಸ್ಥೆ ತಾಪ್ಸಿ ಅವರ ದೂರಿಗೆ ಸ್ಪಂದಿಸಿದ್ದು, ನಿಮ್ಮ ದೂರು ತಲುಪಿದ್ದು, ಮೀಟರ್ ರೀಡಿಂಗ್ ಮಾಡಿ ಪರಿಶ್ಕೃತ ಬಿಲ್ ನೀಡುತ್ತೀವೆಂದು ಹೇಳಿ ಸಂದೇಶ ಕಳುಹಿಸಿದ್ದಾರೆ, ಅದರ ಜೊತೆ ಮಾಹಿತಿ ನೋಡಲು ಲಿಂಕ್ ಒಂದು ನೀಡಲಾಗಿದೆ. ಆದರೆ ಆ ಲಿಂಕ್ ತೆರೆದುಕೊಳ್ಳುತ್ತಿಲ್ಲ. ಈ ಬಗ್ಗೆಯೂ ತಾಪ್ಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











