ನಕಲಿ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು
ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ನಕಲಿ ಕೊರೊನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯನ ತೀವ್ರಗೊಂಡಿದೆ. ಕೊರೊನಾ ವಿರುದ್ಧ ಹೋರಾಡಲು ಲಸಿಕೆಯೊಂದೆ ದಾರಿ ಎಂದು ಅನೇಕರು ಲಸಿಕೆ ಮೊರೆ ಹೋಗಿದ್ದಾರೆ.
ಆದರೆ ಕೊರೊನಾ ಲಸಿಕೆ ಜೊತೆಗೆ ಕೊಲ್ಕತ್ತಾದಲ್ಲಿ ನಕಲಿ ಲಸಿಕೆ ನೀಡಿ ಜನರನ್ನು ಯಾಮಾರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ ಹಿಂದೆ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಕೊರೊನಾ ಲಸಿಕೆ ಪಡೆದಿದ್ದರು. ನಕಲಿ ಲಸಿಕೆ ಹಗರಣ ಬೆಳಕಿಗೆ ಬಂದ ಬಳಿಕ ಮಿಮಿ ಚಕ್ರವರ್ತಿ ತಾನು ಪಡೆದ ಸಲಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ನಕಲಿ ಲಸಿಕೆಯೇ ಕಾರಣವೆಂದು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ಸಂಸದೆ ಮಿಮಿ ಚ್ಕರವರ್ತಿ, ಡಿಹೈಡ್ರೇಷನ್ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದರು ಮತ್ತು ರಕ್ತದೊತ್ತಡ ಕಡಿಮೆಯಾಗಿದೆ ಎಂದು ಕುಟುಂಬದ ಆಪ್ತ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. ಸದ್ಯ ಮಿಮಿ ಚಕ್ರವರ್ತಿ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮಿಮಿ ಚಕ್ರವರ್ತಿ ಈ ಮೊದಲು ಪಿತ್ತಕೋಶ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಇನ್ನು ನಕಲಿ ಲಸಿಕೆ ಮಾರಾಟ ಮಾಡುತ್ತಿದ್ದ ಅನೇಕರನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ. "ಇತ್ತೀಚಿಗೆ ನಡೆಸಿದ ಲಸಿಕೆ ಕ್ಯಾಂಪ್ ಗೆ ಮಿಮಿ ಚಕ್ರವರ್ತಿಯನ್ನು ಆಹ್ವಾನ ಮಾಡಲಾಗಿತ್ತು. ಅಲ್ಲಿ ಲಸಿಕೆ ಪಡೆಯುವಂತೆ ಚಕ್ರವರ್ತಿ ಜನರನ್ನು ಉತ್ತೇಜಿಸಿಸಿದ್ದರು" ಎಂದು ಟಿಎಂಸಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ನಕಲಿ ಲಸಿಕೆಯೇ ಕಾರಣನಾ ಎನ್ನುವುದು ಬಹಿರಂಗ ವಾಗಬೇಕಿದೆ. ಇನ್ನು ಕೊರೊನಾ ಭೀಕರತೆಯ ನಡುವೆ ನಕಲಿ ಲಸಿಕೆ ಹಗರಣ ಜನರನ್ನು ಮತ್ತಷ್ಟು ಭಯಬೀತರನ್ನಾಗಿಸಿದೆ.


Click it and Unblock the Notifications











