Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Urfi Javed : ಅಡಲ್ಟ್ ಚಿತ್ರ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉರ್ಫಿ ಜಾವೇದ್!
ಟಿವಿ ನಟಿ ಉರ್ಫಿ ಜಾವೇದ್ ಹೆಚ್ಚು ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು. ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿ ಇರುತ್ತಾರೆ. ಪ್ರತಿ ದಿನ ಒಂದಲ್ಲಾ ಒಂದು ವಿಭಿನ್ನ ಬಗೆಯ ಉಡುಗೆ ತೊಟ್ಟ ಪೋಸ್ಟ್‌ಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಇದು ಅವರ ಅಭಿಮಾನಿಗಳಿಗೂ ತುಂಬಾ ಇಷ್ಟವಾಗುತ್ತೆ. ಅಲ್ಲದೇ ಉರ್ಫಿ ಜಾವೇದ್ ಫೋಟೊಗಳಿಗೂ ಭಾರಿ ಬೇಡಿಕೆ ಇದೆ. ಇನ್ನು ಇತ್ತೀಚಿಗೆ ಉರ್ಫಿಯ ಒಂದು ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಮಹಿಳಾ
ಪ್ರಧಾನ
ಥ್ರಿಲ್ಲರ್
ಚಿತ್ರಕ್ಕೆ
ಗ್ರೀನ್
ಸಿಗ್ನಲ್
ಕೊಟ್ಟ
ನಟಿ
ಹರಿಪ್ರಿಯಾ
ಇದರಲ್ಲಿ ಅಡಲ್ಟ್ ಚಿತ್ರ ನಿರ್ಮಿಸಿದ ಪ್ರಕರಣದಲ್ಲಿ ಪೊಲೀಸರು ಉರ್ಫಿಯನ್ನು ಬಂಧಿಸುತ್ತಿದ್ದಾರೆ. ಮತ್ತೊಂದು ಕಡೆ ಉರ್ಫಿ ಜಾವೇದ್ ತಲೆಕೆಡಿಸಿಕೊಳ್ಳುವುದು ಕೂಡ ಕಂಡು ಬಂದಿದೆ. ಅಷ್ಟಕ್ಕೂ ಈ ವಿಡಿಯೋದ ಅಸಲಿಯತ್ತೇನು ಮುಂದೆ ಒದಿ.

ವಯಸ್ಕರ ಸಿನಿಮಾ ಮಾಡಿದ ಉರ್ಫಿ ಜಾವೇದ್ ವಯಸ್ಕರ ಸಿನಿಮಾ ಮಾಡಿದ ಉರ್ಫಿ ಜಾವೇದ್
ಉರ್ಫಿ ಅಡಲ್ಟ್ ಸಿನಿಮಾ ಚಿತ್ರೀಕರಣ ಸಂದರ್ಭ ಸಿಕ್ಕಿ ಬಿದ್ದಿರೋದಾಗಿ ಈ ವಿಡಿಯೋ ಸಾರುತ್ತಿದೆ. ರೋಹಿತ್ ಗುಪ್ತಾ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೋ ಶೇರ್ ಆಗಿದೆ. ಇಲ್ಲಿ ಆಗಿರೋದು ಇಷ್ಟು. ಕಚೇರಿಯಲ್ಲಿ ಹುಡುಗಿಯೊಬ್ಬಳೊಂದಿಗೆ ಉರ್ಫಿ ಬಂದು ಕೂರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲಿ ಒಬ್ಬ ಕಾಸ್ಟಿಂಗ್ ಡೈರೆಕ್ಟರ್ ಉರ್ಫಿಯೊಂದಿಗೆ ಚಿತ್ರದ ಬಗ್ಗೆ ಚರ್ಚಿಸಲು ಪ್ರಾರಂಭಿಸುತ್ತಾರೆ. ಈ ಚಿತ್ರ ತುಂಬಾ ರಹಸ್ಯವಾಗಿ ಇರಬೇಕು ಎಂದು ನಿರ್ದೇಶಕರು ಉರ್ಫಿಗೆ ಹೇಳುತ್ತಾರೆ. ಚಿತ್ರದ ಶೂಟಿಂಗ್‌ನಿಂದ ಹಿಡಿದು ಕಾಸ್ಟಿಂಗ್‌ವರೆಗೆ ಎಲ್ಲವೂ ಗೌಪ್ಯವಾಗಿರುತ್ತದೆ ಎಂದು ಹೇಳಿದಕ್ಕೆ ಉರ್ಫಿ ತನ್ನ ಜೊತೆಗಿದ್ದ ಹುಡುಗಿಯನ್ನು ಹೊರಗೆ ಹೋಗುವಂತೆ ಹೇಳುತ್ತಾರೆ. ಬಳಿಕ ಈ ಚಿತ್ರದ ಹೆಸರು 'ಟೈಟಾನಿಕ್' ಎಂದು ನಿರ್ದೇಶಕರು ಹೇಳುತ್ತಾರೆ.
ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ವಿಲನ್
ನಿರ್ದೇಶಕರು ಉರ್ಫಿಗೆ ಈ ಚಿತ್ರದ ಬಗ್ಗೆ ಹೇಳುತ್ತಾ ಈ ಸಿನಿಮಾದಲ್ಲಿ ನಟ ರಣ್‌ಬೀರ್ ಕಪೂರ್ ಕೂಡ ನಟಿಸಲಿದ್ದಾರೆ. ಆದರೆ ಅವರು ಈ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿ ರಣಬೀರ್ ಜೊತೆ ಮಾತನಾಡುವಂತೆ ಉರ್ಫಿಗೆ ಹೇಳುತ್ತಾರೆ. ಇದೇ ಸಮಯದಲ್ಲಿ ರೋಹಿತ್ ಎಂಬಾತ ರಣಬೀರ್ ಧ್ವನಿಯಲ್ಲಿ ಉರ್ಫಿಯೊಂದಿಗೆ ಮಾತನಾಡುತ್ತಾನೆ. ಆಗ ಉರ್ಫಿ ನಿರ್ದೇಶಕರನ್ನು ನಾಯಕ ಯಾರು ಎಂದು ಕೇಳುತ್ತಾರೆ. ಆಗ ನಿರ್ದೇಶಕರು ಹೊರ ದೇಶದ ಸ್ಟಾರ್ ಎಂದು ಉತ್ತರಿಸುತ್ತಾರೆ. ಬಳಿಕ ನಿರ್ದೇಶಕ ರೋಹಿತ್ ಆ ಕಲಾವಿದನೊಂದಿಗೆ ಕಚೇರಿಗೆ ಬರುತ್ತಾನೆ. ಇದನ್ನು ನೋಡಿದ ಉರ್ಫಿ ತುಂಬಾ ಶಾಕ್‌ಗೆ ಒಳಗಾಗುತ್ತಾರೆ. ಯಾಕೆಂದರೆ ಅಸಲಿಗೆ ಆತ ನಟನಂತೆ ಕಾಣುವುದಿಲ್ಲ.

ಉರ್ಫಿಯನ್ನು ಆಡಿಷನ್ ನೀಡುವಂತೆ ಹೇಳುವ ಡೈರೆಕ್ಟರ್
ಈ ನಟನ ಬಗ್ಗೆ ಉರ್ಫಿ ನಿರ್ದೇಶಕರನ್ನು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಅವರು ಈ ನಟ ಉಗಾಂಡಾದವರು ವಿಶೇಷ ಪಾತ್ರ ಇದೆ. ಹೀಗಾಗಿ ಇವರೇ ನಮ್ಮ ಸಿನಿಮಾಗೆ ಸೂಕ್ತ ಎಂದು ಒಪ್ಪಿಸಿ ಉರ್ಫಿಯನ್ನು ಆಡಿಷನ್ ನೀಡುವಂತೆ ಹೇಳುತ್ತಾರೆ. ಉಗಾಂಡ ನಟ ಮತ್ತು ಉರ್ಫಿ ಇಬ್ಬರೂ ಆಡಿಷನ್ ನೀಡುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ಪೋಲೀಸ್ ವೇಷಧಾರಿಗಳು ಎಂಟ್ರಿ ಆಗುತ್ತಾರೆ. ಆಗ ಪೋಲೀಸರು ಏನಾಗುತ್ತಿದೆ ಇಲ್ಲಿ ಎಂದು ಕೇಳಿದಕ್ಕೆ ಅಲ್ಲಿಯೇ ಇದ್ದ ನಿರ್ದೇಶಕ ಉರ್ಫಿ ವಯಸ್ಕರ ಚಿತ್ರದ ಚಿತ್ರೀಕರಣಕ್ಕೆ ನಮ್ಮನ್ನು ಕರೆದಿದ್ದರು ಎಂದು ಹೇಳುತ್ತಾರೆ. ಆಗ ಉರ್ಫಿಗೆ ಇಲ್ಲಿ ಏನು ನಡೆಯುತ್ತಿದೆ ಅನ್ನೋದು ತಿಳಿಯದೆ ಶಾಕ್‌ಗೆ ಒಳಗಾಗುತ್ತಾರೆ. ಹೀಗೆ ಕೆಲ ಸಮಯದ ನಂತರ ಉರ್ಫಿಗೆ ಸತ್ಯ ಏನು ಎಂದು ತಿಳಿಯುತ್ತೆ. ಆಗಲೇ ಇದು ಏಪ್ರಿಲ್ ಫೂಲ್ ಮಾಡಿರುವ ವಿಡಿಯೊ ಎಂದು ಉರ್ಫಿಗೆ ಗೊತ್ತಾಗುತ್ತೆ.
Recommended Video


ನನ್ನ ವೃತ್ತಿ ಜೀವನವೇ ಹಾಳಾಗಿ ಹೋಯ್ತು
ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಕೂಡ ಆಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಉರ್ಫಿ " ನನ್ನ ವೃತ್ತಿಜೀವನವೇ ಹಾಳಾಗಿ ಹೋಯ್ತು ಎಂದು ಅಂದುಕೊಂಡೆ. ಅವರ ಈ ಚೇಷ್ಟೆ ವಿಡಿಯೋವನ್ನು ಜನರು ತುಂಬಾ ಮೆಚ್ಚಿಕೊಳ್ಳಬಹುದು. ಆದರೆ ನನಗೆ ಜೀವವೇ ಹೋದ ಹಾಗಾಯಿತ್ತು." ಎಂದಿದ್ದಾರೆ. ಈ ವಿಡಿಯೋ ನೋಡಿ ಹಲವರು ಉರ್ಫಿ ಪರಿಸ್ಥಿತಿ ಹೇಗಾಗಿರಬೇಡ ಎಂದು ಕಮೆಂಟ್ ಮಾಡುತ್ತಿದ್ದಾರೆ.