»   » ಈ ಬೆಡಗಿಗೆ ಬಿಕಿನಿ ಧರಿಸಲು ಯಾವುದೇ ಮುಜುಗರ ಇಲ್ಲವಂತೆ!

ಈ ಬೆಡಗಿಗೆ ಬಿಕಿನಿ ಧರಿಸಲು ಯಾವುದೇ ಮುಜುಗರ ಇಲ್ಲವಂತೆ!

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಬೆಡಗಿ ಕಮ್ ರೂಪದರ್ಶಿ ಊರ್ವಶಿ ರೌಟೇಲ ಅವರು ಬಾಲಿವುಡ್ ಮೂಲಕ ತಮ್ಮ ಸಿನಿ ಜರ್ನಿ ಪ್ರಾರಂಭಿಸಿದ್ದು, ನಿರ್ದೇಶಕ ಅನಿಲ್ ಶರ್ಮಾ ಅವರ ಆಕ್ಷನ್-ರೊಮ್ಯಾನ್ಸ್ ಚಿತ್ರ ಸಿಂಗ್ ಸಾಬ್ ದಿ ಗ್ರೇಟ್' ಎಂಬ ಚಿತ್ರದಲ್ಲಿ ಮೊದಲನೇ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ನಂತರ ಕನ್ನಡದಲ್ಲಿ ದರ್ಶನ್ ಜೊತೆ 'Mr ಐರಾವತ' ಚಿತ್ರದಲ್ಲಿ ಮಿಂಚಿದ್ದರು.

ಇದೀಗ ಹಿಂದಿ ಚಿತ್ರ 'ಸನಮ್ ರೇ'ಯಲ್ಲಿ ಯಾಮಿ ಗೌತಮ್ ಹಾಗೂ ಪುಲಿಕಟ್ ಸಾಮ್ರಾಟ್ ಜೊತೆ ಈ ಬೆಡಗಿಯೂ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ಇವರಿಗೆ ಬಿಕಿನಿ ಸೀನ್ ಇದ್ದು, ಇವರಿಗೆ ಬಿಕಿನಿ ಧರಿಸಲು ಯಾವುದೇ ರೀತಿಯ ಮುಜುಗರ ಇಲ್ಲವಂತೆ. ಜೊತೆಗೆ ಊರ್ವಶಿ ರೌಟೇಲ ಅವರು ಸಖತ್ ಪರ್ಫೆಕ್ಟ್ ಬಾಡಿ ಫಿಟ್ ಆಗಿರೋ ಫಿಗರ್ ಕಾಪಾಡಿಕೊಂಡು ಬರುತ್ತಿದ್ದಾರೆ.[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']

Actress Urvashi Rautela always ready to get into a sexy bikini look

ಯಾವಾಗಲೂ ವರ್ಕೌಟ್ ಮಾಡುವ ಮೂಲಕ ಇದೀಗ ಬಿಕಿನಿಗೆ ಫಿಟ್ ಆಗುವಂತಹ ದೇಹಸಿರಿಯನ್ನು ಗ್ಲಾಮರ್ ನಟಿ ಊರ್ವಶಿ ರೌಟೇಲ ಹೊಂದಿದ್ದಾರೆ. 'ಸನಮ್ ರೇ' ಚಿತ್ರದ ನಿರ್ದೇಶಕರು ಹೇಳುವಂತೆ ಚಿತ್ರದಲ್ಲಿ ಊರ್ವಶಿ ಅವರಿಗೆ ಬಿಕಿನಿ ಧರಿಸಿ ನಟಿಸುವ ಒಂದು ದೃಶ್ಯವಿದ್ದು, ಇದಕ್ಕೆ ಊರ್ವಶಿ ಅವರು ಒಪ್ಪಿಕೊಂಡಿದ್ದಾರಂತೆ.

ಈ ಬಿಕಿನಿ ಪುರಾಣದ ಬಗ್ಗೆ ನಟಿ ಊರ್ವಶಿ ರೌಟೇಲ ಅವರನ್ನು ಪ್ರಶ್ನಿಸಿದಾಗ ಅವರು ಹೀಗಂತಾರೆ, "ನನಗೆ ನ್ಯಾಚುರಲ್ ಟೋನ್ಡ್ ಬಾಡಿ ಇರುವುದರಿಂದ ನನಗೆ ಬಿಕಿನಿ ಹಾಕಲು ತುಂಬಾ ಸುಲಭವಾಗುತ್ತದೆ.

ನಾನು ತುಂಬಾ ಶಿಸ್ತು ಬದ್ದವಾಗಿ ಇರುವುದರಿಂದ ನಾನು ಯಾವಾಗಲೂ ಬಿಕಿನಿ ಧರಿಸಲು ತಯಾರಾಗಿ ಇರುತ್ತೇನೆ. ನಾನು ಯಾವುದೇ ಹೆಚ್ಚಿನ ಸಮಯಗಳನ್ನು ತೆಗೆದುಕೊಳ್ಳದೆ ಬಿಕಿನಿ ಸೀನ್ ನ ಶಾಟ್ ಓಕೆ ಮಾಡಿದ್ದನ್ನು ಕಂಡು ನನ್ನ 'ಸನಮ್ ರೇ' ಚಿತ್ರದ ನಿರ್ದೇಶಕರು ಹಾಗು ಇಡೀ ಚಿತ್ರತಂಡ ತುಂಬಾ ಖುಷಿಪಟ್ಟಿದ್ದಾರೆ'[ಚಾಲೆಂಜಿಂಗ್ ಸ್ಟಾರ್ 'Mr ಐರಾವತ' ನ, ಸ್ಪೆಷಾಲಿಟಿ ಏನು?]

Actress Urvashi Rautela always ready to get into a sexy bikini look

"ನನ್ನ ಬಿಕಿನಿ ಲುಕ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಕಂಡು ನಾನು ತುಂಬಾ ಖುಷಿಯಾಗಿದ್ದೇನೆ, ಈ ಮೊದಲು ನನ್ನ ದೇಹಸಿರಿಯ ಬಗ್ಗೆ ಹೆಚ್ಚಿನ ಮಹತ್ವ ಕೊಡುತ್ತಿರಲಿಲ್ಲ, ಆದ್ರೆ ಇದೀಗ ನಾನು ತುಂಬಾ ಕೇರ್ ತೆಗೆದುಕೊಂಡು ದೇಹಸಿರಿಯನ್ನು ನೋಡಿಕೊಳ್ಳುತ್ತಿದ್ದೇನೆ. ಇನ್ನು ಹಾರ್ಡ್ ವರ್ಕೌಟ್ ಮಾಡುವ ಮೂಲಕ ಬಾಡಿ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತೇನೆ.'

ನಾನು ಈಗ ಮಾತ್ರವಲ್ಲದೇ ಚಿಕ್ಕಂದಿನಿಂದಲೂ ಹಾರ್ಡ ವರ್ಕ್ ಮಾಡುತ್ತಿದ್ದೆ, ಜೊತೆಗೆ ಚಿಕ್ಕಂದಿನಲ್ಲಿ ಯಾವಾಗಲೂ ಬಾಸ್ಕೆಟ್ ಬಾಲ್ ಹಾಗೂ ಟೆನ್ನಿಸ್ ಆಡುತ್ತಿದ್ದೆ. ಎಂದು ತಮ್ಮ ದೇಹಸಿರಿಯ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ ಕನ್ನಡದ 'ಐರಾವತ'ನ ರಾಣಿ

22 ರ ಹರೆಯದ ಈ ಚೆಲುವೆ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಐರಾವತ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಇದೀಗ 'ಸನಮ್ ರೇ' ಚಿತ್ರದ ಶೂಟಿಂಗ್ ಗಾಗಿ ಕೆನಡಾಕ್ಕೆ ಹಾರಿದ್ದಾರೆ. ಒಟ್ನಲ್ಲಿ ಬಿಕಿನಿ ಲುಕ್ ಗೆ ಈ ವಯ್ಯಾರಿಗೆ ದೊರಕಿದ ಬೆಸ್ಟ್ ಕಾಂಪ್ಲಿಮೆಂಟ್ಸ್ ಗೆ ಫುಲ್ ಖುಷ್ ಆಗಿದ್ದಾರೆ.

English summary
Actress Urvashi Rautela, who is cherishing her journey in Bollywood has been confident to don a bikini in her upcoming film Sanam Re. She is confident and has always worked towards having a perfectly fit figure. Urvashi has no qualms about wearing a bikini whenever her director wants her to get into the wear as per the script's demand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada