ನಿರ್ಮಾಪಕರು ಬಂದು ಅಳುತ್ತಿದ್ರು, ಅದಕ್ಕೆ ಬಾತ್‌ರೂಂ ವೀಡಿಯೋ ಲೀಕ್ ಮಾಡಲು ಒಪ್ಪಿಕೊಂಡೆ ಎಂದ ನಟಿ
ನಟ- ನಟಿಯರ ಖಾಸಗಿ ವೀಡಿಯೋ, ಫೋಟೊಗಳು ಲೀಕ್ ಆಗಿ ಕೆಲವೊಮ್ಮೆ ಭಾರೀ ಸುದ್ದಿ ಆಗಿಬಿಡುತ್ತದೆ. ಇತ್ತೀಚೆಗೆ ಡೀಪ್‌ಫೇಕ್ ವೀಡಿಯೋಗಳ ಹಾವಳಿ ಜಾಸ್ತಿ ಆಗಿದೆ. ಕೆಲವರು ಪಬ್ಲಿಸಿಟಿಗಾಗಿ ಹೀಗೆ ಖಾಸಗಿ ವೀಡಿಯೋಗಳನ್ನು ಲೀಕ್ ಮಾಡಿರುವ ಉದಾಹರಣೆ ಕೂಡ ಇದೆ. ಕಳೆದ ವರ್ಷ ನಟಿ ಊರ್ವಶಿ ರೌಟೇಲಾ ಬಾತ್ ರೂಮ್ ವೀಡಿಯೋ ಹರಿದಾಗಿತ್ತು.
ಅಂದಹಾಗೆ ಅದು ನಟಿ ಊರ್ವಶಿ ಅವರ ಖಾಸಗಿ ವೀಡಿಯೋ ಆಗಿರಲಿಲ್ಲ. ಬದಲಿಗೆ 'ಘುಸ್ಪೈಥಿಯಾ' ಚಿತ್ರದ ಸನ್ನಿವೇಶ ಆಗಿತ್ತು. ಚಿತ್ರದ ಬಗ್ಗೆ ಬಝ್ ಕ್ರಿಯೇಟ್ ಮಾಡಲು ಹೀಗೆ ವೀಡಿಯೋ ಹರಿಬಿಟ್ಟಿದ್ದಾರೆ ಬಳಿಕ ಊರ್ವಶಿ ಒಪ್ಪಿಕೊಂಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಯಾಕೆ ಅಂದು ಆ ನಿರ್ಧಾರಕ್ಕೆ ಬಂದೆ ಎಂದು ವಿವರಿಸಿದ್ದಾರೆ.

ಕನ್ನಡದ 'ಐರಾವತ' ಚಿತ್ರದಲ್ಲಿ ಕೂಡ ಊವರ್ಶಿ ರೌಟೇಲಾ ನಾಯಕಿಯಾಗಿ ನಟಿಸಿದ್ದರು. ಉತ್ತರಕಾಂಡ ಮೂಲದ ಊರ್ವಶಿ ಮಾಡೆಲ್ ಆಗಿ ಗಮನ ಸೆಳೆದಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದಾರೆ. ಇತ್ತೀಚೆಗೆ ತೆಲುಗಿನ 'ಡಾಕು ಮಹಾರಾಜ್' ಚಿತ್ರದಲ್ಲಿ ಬಾಲಕೃಷ್ಣ ಜೊತೆ ನಟಿಸಿದ್ದರು. ಚಿತ್ರದ ಹಾಡೊಂದರಲ್ಲಿ ಇರುವ ಸ್ಟೆಪ್ಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿದ್ದರು.
ಇತ್ತೀಚೆಗೆ ಐಟಂ ಸಾಂಗ್‌ಗಳಲ್ಲಿ ಊರ್ವಶಿ ಹೆಚ್ಚು ಹೆಜ್ಜೆ ಹಾಕುತ್ತಿದ್ದಾರೆ. ದೊಡ್ಡ ಅವಕಾಶಗಳೇನು ಆಕೆಯ ಕೈಯಲ್ಲಿ ಇಲ್ಲ. ಬಾಲಿವುಡ್ ಬಬಲ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಮಾತನಾಡಿದ್ದಾರೆ. ಬೇಕಂತಲೇ ಆ ಬಾತ್‌ರೂಮ್ ವೀಡಿಯೋ ಲೀಕ್ ಮಾಡಿದ್ದು. ಮೊದಲೇ ಈ ಬಗ್ಗೆ ಚಿತ್ರದ ನಿರ್ಮಾಪಕರು ಆಕೆಯ ಜೊತೆ ಚರ್ಚಿಸಿದ್ದರಂತೆ.
"ನಾವು 2019ರಲ್ಲಿ 'ಘುಸ್ಪೈಥಿಯಾ' ಸಿನಿಮಾ ಚಿತ್ರೀಕರಣ ಶುರು ಮಾಡಿದ್ದೆವು. ಬಳಿಕ ಕೋವಿಡ್ ಆರ್ಭಟ ಶುರುವಾಯಿತು. ಕಾರಣಾಂತರಗಳಿಂದ ಚಿತ್ರೀಕರಣ ತಡವಾಯಿತು. ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದರು. ಸಿನಿಮಾ ಬಿಡುಗಡೆ ಮಾಡಬೇಕಿತ್ತು. ಅದು ಅದ್ಭುತ ಸಿನಿಮಾ. ಆದರೆ ನಿರ್ಮಾಪಕರು ಸಿನಿಮಾ ಬಗ್ಗೆ ಕ್ರೇಜ್ ಇಲ್ಲ. ಬಿಡುಗಡೆ ಆಗುತ್ತಿಲ್ಲ. ಹೀಗೆ ಆದರೆ ಕಷ್ಟ, ನನ್ನ ಆಸ್ತಿ ಮಾರಿಕೊಳ್ಳಬೇಕಾಗುತ್ತದೆ ಎಂದು ನನ್ನ ಬಳಿ ಅಳಲು ತೋಡಿಕೊಂಡರು. ಬಳಿಕ ನನ್ನಅನುಮತಿ ಪಡೆದು ಆ ವೀಡಿಯೋ ಲೀಕ್ ಮಾಡಿದರು. ಅದು ಖಾಸಗಿ ವೀಡಿಯೋ ಅಲ್ಲ. ಚಿತ್ರದಲ್ಲಿದ್ದ ಸನ್ನಿವೇಶದ ತುಣುಕು" ಎಂದು ಊರ್ವಶಿ ಹೇಳಿದ್ದಾರೆ.
"ನಿರ್ಮಾಪಕರು ಮನವಿ ಮಾಡಿದ್ದಕ್ಕೆ ನಾನು ಒಪ್ಪಿಕೊಂಡೆ. ಇದನ್ನು ಜಾಗೃತಿ ಮೂಡಿಸುವ ಪ್ರಯತ್ನ ಎನ್ನಬಹುದು. ಮಹಿಳೆಯರ ಇಂತಹ ವೀಡಿಯೋ ಲೀಕ್ ಆದರೆ ಏನೆಲ್ಲಾ ಆಗಬಹುದು, ಎಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವ ಅರಿವು ಮೂಡಿಸುವ ಪ್ರಯತ್ನ ಆಗಿತ್ತು" ಎಂದು ಊರ್ವಶಿ ತಿಳಿಸಿದ್ದಾರೆ.
'ಡಾಕು ಮಹಾರಾಜ್' ಬಳಿಕ ಮತ್ತೆ ಮೂರು ಸಿನಿಮಾಗಳಲ್ಲಿ ಊರ್ವಶಿ ರೌಟೇಲಾ ನಟಿಸುತ್ತಿದ್ದಾರೆ. 'ಬ್ಲ್ಯಾಕ್ ರೋಸ್' ಎಂಬ ಸಿನಿಮಾ ತಡವಾಗುತ್ತಿದೆ. 'ವೆಲ್‌ಕಮ್ ಟು ದಿನ ಜಂಗಲ್', 'ಕಸೂರ್- 2' ಆಕೆ ನಟಿಸುತ್ತಿರುವ ಮತ್ತೆರಡು ಸಿನಿಮಾಗಳು. ಫ್ಯಾಷನ್ ಶೋಗಳಲ್ಲಿ ಊರ್ವಶಿ ಹೆಚ್ಚು ಮಿಂಚುತ್ತಾರೆ. ದುಬಾರಿ ಕಾಸ್ಟ್ಯೂಮ್, ಆಭರಣ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿರುತ್ತಾರೆ. ಒಂದಷ್ಟು ಆಲ್ಬಮ್ ಸಾಂಗ್‌ಗಳಲ್ಲಿ ಕೂಡ ಬೆಡಗಿ ಹೆಜ್ಜೆ ಹಾಕಿದ್ದಾರೆ.
'ಐರಾವತ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಊರ್ವಶಿ ಬಣ್ಣ ಹಚ್ಚಿದ್ದರು. ಬಳಿಕ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಲಿಲ್ಲ. 2013ರಲ್ಲಿ 'ಸಿಂಗ್ ಸಾಬ್ ದಿ ಗ್ರೇಟ್' ಸಿನಿಮಾ ಮೂಲಕ ಊರ್ವಶಿ ಬಾಲಿವುಡ್ ಪ್ರವೇಶಿಸಿದ್ದರು. ತೆಲುಗು, ತಮಿಳು, ಬೆಂಗಾಲಿ ಸಿನಿಮಾಗಳಲ್ಲಿ ಕೂಡ ಆಕೆ ಮಿಂಚಿದ್ದಾರೆ.


Click it and Unblock the Notifications











