Urvashi Rautela: ಭಾರತ-ಪಾಕ್ ಮ್ಯಾಚ್ ವೇಳೆ ಫೋನ್ ಕಳೆದುಕೊಂಡಿದ್ದ ಊರ್ವಶಿ: ವಾಪಸ್ ಕೊಟ್ಟವರಿಗೆ ಬಹುಮಾನ ಘೋಷಣೆ

ಇತ್ತೀಚೆಗೆ ನಡೆದ ಭಾರತ- ಪಾಕ್ ವಿಶ್ವಕಪ್ ಕ್ರಿಕೆಟ್ ಪಂದ್ಯ ಭಾರೀ ಕ್ರೇಜ್ ಹುಟ್ಟು ಹಾಕಿತ್ತು. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಗೆದ್ದಿತ್ತು. ಸಾವಿರಾರು ಜನ ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯ ವೀಕ್ಷಿಸಿ ಖುಷಿಪಟ್ಟರು. ಸಿನಿಮಾ ತಾರೆಯರು ಕೂಡ ಇದ್ದರು.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಅನುಷ್ಕಾ ಶರ್ಮಾ ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರು ಪಂದ್ಯ ವೀಕ್ಷಿಸಿದರು. ನಟಿ ಊರ್ವಶಿ ರೌಟೇಲಾ ಕೂಡ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿ ಖುಷಿಪಟ್ಟರು. ಈ ಸಂಭ್ರಮದಲ್ಲೇ ತಮ್ಮ ಐಫೋನ್‌ ಅನ್ನು ಕಳೆದುಕೊಂಡಿದ್ದಾರೆ. ನನ್ನ 24 ಕ್ಯಾರೆಟ್ ಗೋಲ್ಡನ್ ಐ ಫೋನ್ ವಾಪಸ್ ಕೊಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳಿತ್ತಿದ್ದಾರೆ. ಇದೀಗ ತಮ್ಮ ಫೋನ್ ಮರಳಿ ಕೊಟ್ಟವರಿಗೆ ಬಹುಮಾನ ಕೂಡ ಘೋಷಿಸಿದ್ದಾರೆ.

Urvashi-Rautela-announces-reward-iPhone

"ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಕೊಂಡೆ. ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ದಯವಿಟ್ಟು ಸಹಾಯ ಮಾಡಿ. ಆದಷ್ಟು ಬೇಗ ನನ್ನನ್ನು ಸಂಪರ್ಕಿಸಿ" ಎಂದು ಊರ್ವಶಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಆಕೆ ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನೂ ಹಂಚಿಕೊಂಡಿದ್ದಾರೆ. ಆದರೆ, ಎರಡು ದಿನವಾದರೂ ತನ್ನ ಫೋನ್‌ ಪತ್ತೆಯಾಗದ ಕಾರಣ ಊರ್ವಶಿ ಫೋನ್ ತಂದವರಿಗೆ ಬಹುಮಾನ ಘೋಷಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಹಲವರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇದೇ ವೇಳೆ ಅನೇಕರು ತಮ್ಮ ವಸ್ತುಗಳನ್ನು ಕಳೆದುಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ಊರ್ವಶಿ ಕೂಡ ತನ್ನ ಚಿನ್ನದ ಐಫೋನ್ ಕಳೆದುಕೊಂಡಿದ್ದಾರೆ. ಹೇಗಾದರೂ ಅದನ್ನು ಮರಳಿ ಪಡೆಯಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಐಫೋನ್ ಕಳೆದುಹೋಗಿದೆ ಎಂದು ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ಅವರು ಅಹಮದಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿದ್ದು ಅವರು ಕೂಡ ಸ್ಪಂದಿಸಿದ್ದಾರೆ. ಸದ್ಯ ಊರ್ವಶಿ ಮಾಮೂಲಿ ಫೋನ್ ಬಳಸುತ್ತಿದ್ದು, ಚಿನ್ನದ ಐಫೋನ್‌ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

ಇನ್ನು ಅಹಮದಾಬಾದ್‌ನ ಮಾಲ್‌ನಲ್ಲಿ ಊರ್ವಶಿ ಐಫೋನ್ ಲಾಸ್ಟ್ ಲೊಕೇಶನ್ ತೋರಿಸಿದ್ದು ಗೊತ್ತಾಗಿದೆ. ಇದೇ ವಿಷಯವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನಾನು ಬಹುಮಾನ ನೀಡುತ್ತೇನೆ. ನನ್ನ ಫೋನ್‌ನ ಕೊನೆಯ ಲೊಕೇಶನ್ ಮಾಲ್‌ನಲ್ಲಿ ತೋರಿಸಿದೆ" ಎಂದು ಬರೆದುಕೊಂಡಿದ್ದಾರೆ. ಆದರೆ ಆ ಬಹುಮಾನ ಏನು ಎನ್ನುವುದನ್ನು ಆಕೆ ಹೇಳಿಲ್ಲ.

Urvashi-Rautela-announces-reward-iPhone

ಊರ್ವಶಿ ತನ್ನ ಚಿನ್ನದ ಐಫೋನ್ ವಾಪಸ್ ಪಡೆಯಲು ಮಾಡಿರುವ ಪ್ರಯತ್ನಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. ಅಂದು ಸ್ಟೇಡಿಯಂನಲ್ಲಿ ಲಕ್ಷಗಟ್ಟಲೆ ಜನ ಸೇರಿದ್ದರು, ಆ ವೇಳೆ ಯಾರಾದರೂ ಐಫೋನ್ ಕದ್ದಿದ್ದರೆ ವಾಪಸ್ ಸಿಗುವ ಸಾಧ್ಯತೆ ಇಲ್ಲ ಎಂದು ಕೆಲವರು ಈ ನಾಯಕಿಗೆ ಸಲಹೆಯನ್ನೂ ನೀಡುತ್ತಿದ್ದರು. ಬಾಲಿವುಡ್ ನಟಿ ಊರ್ವಶಿ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಐಟಂ ಸಾಂಗ್‌ಗಳಲ್ಲಿ ಕುಣಿದಿರುವುದೇ ಹೆಚ್ಚು. ಕನ್ನಡದ 'ಮಿಸ್ಟರ್ ಐರಾವತ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು.

ಐಷಾರಾಮಿ ಜೀವನ ನಡೆಸುವ ಊರ್ವಶಿ ತಮ್ಮ ರ್ಯಾಂಪ್‌ವಾಕ್‌ಗಳಿಮದ ಪದೇ ಪದೆ ಸುದ್ದಿಯಾಗುತ್ತಾರೆ. ಕೋಟ್ಯಾಂತರ ಬೆಲೆ ಬಾಳುವ ಉಡುಗೆ ಹಾಗೂ ಆಕ್ಸಸರೀಸ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿರುತ್ತಿರುತ್ತಾರೆ. 15ನೇ ವಯಸ್ಸಿನಲ್ಲೇ ಮಾಡೆಲಿಂಗ್ ಆರಂಭಿಸಿದ ಚೆಲುವೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕಮಾಲ್ ಮಾಡಿದರು.

2013ರಲ್ಲಿ 'ಸಿಂಗ್‌ ಸಾಬ್ ದಿ ಗ್ರೇಟ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. 'ಸನಮ್ ರೇ', 'ಗ್ರೇಟ್ ಗ್ರ್ಯಾಂಡ್ ಮಸ್ತಿ', 'ಹೇಟ್ ಸ್ಟೋರಿ-4', 'ದಿ ಲೆಜೆಂಡ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ವಾಲ್ತೇರು ವೀರಯ್ಯ', 'ಏಜೆಂಟ್', 'ಬ್ರೋ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.

More from Filmibeat

English summary
Urvashi Rautela announces reward for exchange of lost 24k gold iPhone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X