ಭಾರತ Vs ಪಾಕ್ ಪಂದ್ಯದ ವೇಳೆ '24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಕೊಂಡೆ' ಎಂದು ಟ್ರೋಲ್ ಆದ ನಟಿ ಊರ್ವಶಿ ರೌಟೇಲಾ!
ಶನಿವಾರ (ಅಕ್ಟೋಬರ್ 14) ಗುಜರಾತ್ ರಾಜ್ಯದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಹುನಿರೀಕ್ಷಿತ ಪಂದ್ಯದಲ್ಲಿ ಇಂಡಿಯಾ ಗೆಲುವಿನ ನಗೆ ಬೀರಿದೆ. ಇದಕ್ಕೆ ಇಡೀ ದೇಶವೇ ಸಂಭ್ರಮಾಚರಣೆ ಮಾಡಿದೆ. ಜೊತೆಗೆ ಬಾಲಿವುಡ್ ಸೆಲಬ್ರಿಟಿಗಳು ಕೂಡ ಫುಲ್ ಖುಷ್ ಆಗಿದ್ದಾರೆ. ಆದರೆ, ಒಬ್ಬರು ಮಾತ್ರ ಖುಷಿಯ ನಡುವೆಯೂ ಬೇಸರದಲ್ಲಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ತಂಡ ಗೆಲುವಿಗೆ ಇಡೀ ದೇಶದ ಜನರು ಖುಷಿಯಾಗಿದ್ದರೇ, ಬಹುಭಾಷಾ ನಟಿ ಊರ್ವಶಿ ರೌಟೇಲಾ ಸ್ಟೇಡಿಯಂನಲ್ಲಿ ತಮ್ಮ ಚಿನ್ನದ ಐಫೋನ್ ಕಳೆದುಕೊಂಡು ಬೇಸರದಲ್ಲಿದ್ದಾರೆ. ಹಾಗಂತ ಜನ ಇವರಿಗೆ ಸಾಂತ್ವನ ಹೇಳಿ, ಸಹಾಯ ಮಾಡುವ ಬದಲು ಕಾಲೆಳೆಯುತ್ತಿದ್ದಾರೆ. ಅದು ಯಾಕೆ ಅಂತೀರಾ ಮುಂದೆ ಓದಿ.

24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಕೊಂಡ ನಟಿ ಊರ್ವಶಿ ರೌಟೇಲಾ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಊರ್ವಶಿ ರೌಟೇಲಾ ಕ್ರೀಡಾಂಗಣದಲ್ಲಿ ತನ್ನ ಐಫೋನ್ ಕಳೆದುಕೊಂಡಿರುವುದಾಗಿ ಘೋಷಿಸಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಬಂದಿದ್ದ ನಟಿ ಮೊಬೈಲ್ ಕಳೆದುಕೊಂಡಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಗಿ ಹೇಳಿದ್ದಾರೆ.
ಊರ್ವಶಿ ರೌಟೇಲಾ ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಸ್ಟೇಡಿಯಂನಲ್ಲಿ ತನ್ನ ದುಬಾರಿ '24-ಕ್ಯಾರೆಟ್ ಗೋಲ್ಡ್ ಐಫೋನ್' ಅನ್ನು ಕಳೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. "ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ರಿಯಲ್ ಗೋಲ್ಡ್ ಐ ಫೋನ್ ಕಳೆದುಹೋಯಿತು! ಯಾರಾದರೂ ಅದನ್ನು ಕಂಡರೆ, ದಯವಿಟ್ಟು ಸಹಾಯ ಮಾಡಿ. ನನ್ನನ್ನು ಸಂಪರ್ಕಿಸಿ! ಸಹಾಯ ಮಾಡಬಹುದು ಎನ್ನುವವರನ್ನು ಟ್ಯಾಗ್ ಮಾಡಿ " ಎಂದಿದ್ದಾರೆ. ಜೊತೆಗೆ ಮೋದಿ ಸ್ಟೇಡಿಯಂ ಮತ್ತು ಅಹಮದಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಊರ್ವಶಿ ರೌಟೇಲಾ ಫೋಸ್ಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ
ಊರ್ವಶಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಹಲವಾರು ನೆಟಿಜನ್‌ಗಳು ಸಹಾನುಭೂತಿ ವ್ಯಕ್ತಪಡಿಸಿದರೆ, ಇತರರು ಊರ್ವಶಿ ರೌಟೇಲಾ ಅವರ ದುಂದುಗಾರಿಕೆಗಾಗಿ ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಅವರನ್ನು ಕಾಲೆಳೆಯುತ್ತಿದ್ದಾರೆ.
ಒಬ್ಬ ಬಳಕೆದಾರ, "ನೋಕಿಯಾ ಫೋನ್ ಬಳಸಿ...ಆಗ ಯಾರು ನಿಮ್ಮ ಫೋನ್ ಕದಿಯುವುದಿಲ್ಲ... ಪಾಗಲ್ ಔರತ್" ಎಂದು ಬರೆದಿದ್ದಾರೆ. ಮತ್ತೊಬ್ಬರು "ಮಿಸ್ ಅಟೆನ್ಶನ್ ಸೀಕರ್" ಎಂದಿದ್ದಾರೆ. ಇನ್ನೊಬ್ಬರು ಆಕೆಯ ಬೇಜವಾಬ್ದಾರಿತನ ಎಂದು ಬೈದಿದ್ದಾರೆ. 'ಸ್ವಲ್ಪವೂ ನಾಚಿಕೆಯಿಲ್ಲವೆ? ಒಂದು ಮೊಬೈಲ್ ಕೂಡ ಜೋಪಾನ ಮಾಡಲು ಬರಲ್ಲ' ಎಂದು ಆಕೆಯನ್ನೇ ದೂಷಿಸಿದ್ದಾರೆ.
ಇನ್ನು, ಊರ್ವಶಿ ರೌಟೇಲಾ ಅವರ ಟ್ವೀಟ್‌ಗೆ ಅಹಮದಾಬಾದ್ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಕಳೆದು ಹೋಗಿರುವ ಮೊಬೈಲ್ ಡಿಟೈಲ್ಸ್‌ಗಳನ್ನು ನೀಡುವಂತೆ ತಿಳಿಸಿದ್ದಾರೆ.
ಊರ್ವಶಿ ರೌಟೇಲಾ ಅವರ ಸಿನಿಮಾಗಳು
ಇತ್ತೀಚೆಗೆ ನಟಿ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ವಾಲ್ಟೇರ್ ವೀರಯ್ಯ ಸಿನಿಮಾದ ಬಾಸ್ ಪಾರ್ಟಿ ಹಾಡಿನಲ್ಲಿ ಸೊಂಟ ಬಳುಕಿಸಿದ್ದರು. ಈ ಹಾಡು ಸಕತ್ ಹಿಟ್ ಆಗಿತ್ತು. ಇದಾದ ಬಳಿಕ ಊರ್ವಶಿ ರಾಮ್ ಪೋತಿನೇನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು, ರಣದೀಪ್ ಹೂಡಾ ಅವರ 'ಇನ್‌ಸ್ಪೆಕ್ಟರ್ ಅವಿನಾಶ್' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಮೈಕೆಲ್ ಮೊರೊನ್ ಜೊತೆಯಲ್ಲಿ ಹಾಲಿವುಡ್‌ಗೂ ಪಾದಾರ್ಪಣೆ ಮಾಡಲಿದ್ದಾರೆ.


Click it and Unblock the Notifications











