For Quick Alerts
  ALLOW NOTIFICATIONS  
  For Daily Alerts

  ವರ್ಜಿನಿಟಿ ಎನ್ನುವುದು ಮಹಿಳೆಯ ಆಯ್ಕೆಯಾಗಬೇಕು ಎಂದ 'ಐರಾವತ' ನಟಿ ಊರ್ವಶಿ

  |

  ದರ್ಶನ್ ನಾಯಕರಾಗಿರುವ 'ಐರಾವತ' ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಪ್ರವೇಶ ನೀಡಿದ್ದ ನಟಿ ಊರ್ವಶಿ ರೌಟೇಲಾ ಅಭಿನಯದ 'ವರ್ಜಿನ್ ಭಾನುಪ್ರಿಯಾ' ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ನಾಯಕಿ ಊರ್ವಶಿ ಅವರ ಸುತ್ತ ನಡೆಯುವ ಈ ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆಗಳೇ ಹೆಚ್ಚಾಗಿ ಬಂದಿವೆ.

  Recommended Video

  Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

  ಈ ಚಿತ್ರ ಮಹಿಳೆಯರ ಕನ್ಯತ್ವದ ಕುರಿತಾದ ವಸ್ತು ಹೊಂದಿದೆ. ಕಥೆಯಲ್ಲಿ ಬೋಲ್ಡ್‌ನೆಸ್ ಇದ್ದರೂ ಅದನ್ನು ಪ್ರಸ್ತುತಡಿಸಿರುವ ರೀತಿ ಕಳಪೆಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಹಾಗೆಯೇ ಊರ್ವಶಿ ಅಭಿನಯಕ್ಕೂ ಅಷ್ಟೇನೂ ಮೆಚ್ಚುಗೆ ವ್ಯಕ್ತವಾಗಿಲ್ಲ. ಈ ನಡುವೆ ಊರ್ವಶಿ ಚಿತ್ರದ ವಸ್ತುವನ್ನು ಸಾಮಾಜಿಕ ಸನ್ನಿವೇಶದೊಂದಿಗೆ ಹೋಲಿಸಿ ಮಾತನಾಡಿದ್ದಾರೆ. ಮುಂದೆ ಓದಿ...

  ಕನ್ಯತ್ವ ಕಳೆದುಕೊಂಡರೆ ಕಳಂಕ ಏಕೆ?

  ಕನ್ಯತ್ವ ಕಳೆದುಕೊಂಡರೆ ಕಳಂಕ ಏಕೆ?

  ಮಹಿಳೆಯರ ವರ್ಜಿನಿಟಿ ವಿಚಾರದಲ್ಲಿ ಈಗಲೂ ದ್ವಿಮುಖ ನೀತಿಯಿದೆ. ಹಾಗೆಯೇ ಮಹಿಳೆಯರ ಮೇಲೆ ಕಳಂಕ ಹೊರಿಸುವ ಪರಿಸ್ಥಿತಿ ಬದಲಾಗಿಲ್ಲ. ಇದು ನಿಲ್ಲಬೇಕಿದೆ. ಹಾಗೆಯೇ ಕನ್ಯತ್ವ ಪರೀಕ್ಷೆಯೂ ಅನೇಕ ಕಡೆ ಚಾಲ್ತಿಯಲ್ಲಿದೆ. ಅದನ್ನು ಕೂಡ ನಿಲ್ಲಿಸಬೇಕಾಗಿದೆ ಎಂದು ಊರ್ವಶಿ ಹೇಳಿದ್ದಾರೆ.

  ದರ್ಶನ್ ನಾಯಕಿ ಊರ್ವಶಿ ಮದುವೆ ಫೋಟೋ ವೈರಲ್: ಹುಡುಗ ಯಾರು?ದರ್ಶನ್ ನಾಯಕಿ ಊರ್ವಶಿ ಮದುವೆ ಫೋಟೋ ವೈರಲ್: ಹುಡುಗ ಯಾರು?

  ಅತ್ತ ಕಾಮಸೂತ್ರ, ಇತ್ತ ನಿಬಂಧನೆ

  ಅತ್ತ ಕಾಮಸೂತ್ರ, ಇತ್ತ ನಿಬಂಧನೆ

  'ಭಾರತ ವಿರೋಧಾಭಾಸಗಳ ಭೂಮಿ. ಒಂದು ಕಡೆ ನಾವು 'ಕಾಮಸೂತ್ರ'ಯ ಭೂಮಿಯೂ ಹೌದು, ಶೃಂಗಾರಮಯ ಶಿಲ್ಪಗಳನ್ನು ಹೊಂದಿರುವ ದೇವಸ್ಥಾನಗಳಿವೆ. ಮತ್ತೊಂದೆಡೆ ಮಹಿಳೆಯರ ಕನ್ಯತ್ವದ ಮೇಲೆ ನಿಬಂಧನೆಗಳನ್ನು ಹೇರುವ ಸಮಾಜವೂ ಇದೆ' ಎಂದಿದ್ದಾರೆ.

  ಪರೀಕ್ಷೆಗೆ ಒಳಪಡಬೇಕಾದ ಸಂಪ್ರದಾಯ

  ಪರೀಕ್ಷೆಗೆ ಒಳಪಡಬೇಕಾದ ಸಂಪ್ರದಾಯ

  ಮಹಿಳೆಯರ ವರ್ಜಿನಿಟಿ ಕುರಿತು ನಮ್ಮಲ್ಲಿ ಬಹಳ ಸಾಂಪ್ರದಾಯಿಕ ನಿಲುವುಗಳಿವೆ. ಕನ್ಯತ್ವವನ್ನು ಮಹಿಳೆಯ ನಡತೆ, ನೈತಿಕ ಮೌಲ್ಯ ಇತ್ಯಾದಿಗಳನ್ನು ಅಳೆಯುವ ಮಾನದಂಡವನ್ನಾಗಿ ಬಳಸುತ್ತೇವೆ. ನಮ್ಮ ದೇಶದ ಅನೇಕ ಕಡೆ ಮದುವೆಗೂ ಮುನ್ನ ಮಹಿಳೆಯನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಬೇಕೆಂಬ ನಿಯಮಗಳಿವೆ ಎಂದು ಊರ್ವಶಿ ಹೇಳಿದ್ದಾರೆ.

  ತನ್ನ ಕ್ರಶ್ ಹೆಸರು ಹೇಳಿದ ದರ್ಶನ್ ನಾಯಕಿ ಊರ್ವಶಿ ರೌಟೇಲಾತನ್ನ ಕ್ರಶ್ ಹೆಸರು ಹೇಳಿದ ದರ್ಶನ್ ನಾಯಕಿ ಊರ್ವಶಿ ರೌಟೇಲಾ

  ಯುವ ಜನರು ಬದಲಾಗುತ್ತಿದ್ದಾರೆ

  ಯುವ ಜನರು ಬದಲಾಗುತ್ತಿದ್ದಾರೆ

  ಮಹಿಳೆಯರ ಮೇಲೆ ವರ್ಜಿನಿಟಿಯ ಆಲೋಚನೆಗಳನ್ನು ಹೇಗೆ ಹೇರಲಾಗಿದೆ ಎಂದರೆ ಮಹಿಳೆಯರು ಕನ್ಯತ್ವ ಮರಳಿ ಪಡೆಯುವ ಚಿಕಿತ್ಸೆ ಹಾಗೂ ಇತರೆ ಪ್ರಕ್ರಿಯೆಗಳಿಗೆ ಒಳಪಡುವುದನ್ನೂ ಮಾಡಲಾಗುತ್ತದೆ. ಈ ದ್ವಿಮುಖ ನೀತಿಯನ್ನು ನಿಲ್ಲಿಸಬೇಕಿದೆ. ಆದರೆ ಒಂದು ಒಳ್ಳೆಯ ಸಂಗತಿಯೆಂದರೆ ಜನರು ಬದಲಾಗುತ್ತಿದ್ದಾರೆ. ಯುವ ಜನರು ತಮ್ಮ ಹೆಂಡತಿ ವರ್ಜಿನ್ ಆಗಿರಲೇಬೇಕು ಎಂಬ ಬೇಡಿಕೆ ಇರಿಸುತ್ತಿಲ್ಲ.

  ನೃತ್ಯ ಹೇಳಿಕೊಟ್ಟು ಬಂದ ಐದು ಕೋಟಿ ಹಣ ಕೊರೊನಾ ಸಂಕಷ್ಟಕ್ಕೆ ನೀಡಿದ ನಟಿನೃತ್ಯ ಹೇಳಿಕೊಟ್ಟು ಬಂದ ಐದು ಕೋಟಿ ಹಣ ಕೊರೊನಾ ಸಂಕಷ್ಟಕ್ಕೆ ನೀಡಿದ ನಟಿ

  ನಮ್ಮ ಆಯ್ಕೆಯಾಗಬೇಕು

  ನಮ್ಮ ಆಯ್ಕೆಯಾಗಬೇಕು

  ವರ್ಜಿನಿಟಿ ಕಳೆದುಕೊಳ್ಳುವ ವಿಚಾರದಲ್ಲಿ ಒತ್ತಡಗಳು ಇರಬಾರದು. ಮಹಿಳೆ ತನ್ನ ವರ್ಜಿನಿಟಿ ಕಳೆದುಕೊಂಡರೆ ಅದೊಂದು ಅಪರಾಧ ಅಥವಾ ನಾಚಿಕೆಗೇಡು ಎಂಬಂತೆ ಕುಟುಂಬ ಅಥವಾ ಸಾಮಾಜಿಕ ಒತ್ತಡಗಳು ಬರಬಾರದು. ಕನ್ಯತ್ವ ಉಳಿಸಿಕೊಳ್ಳುವುದು ಅಥವಾ ಕಳೆದುಕೊಳ್ಳುವುದು ಎರಡೂ ಆಕೆಯ ಆಯ್ಕೆಯ ವಿಚಾರವಾಗಿರಬೇಕಷ್ಟೇ, ಇದು ಯಾರದ್ದೋ ಒತ್ತಡದಿಂದ ಆಗಬಾರದು ಎಂದು ಊರ್ವಶಿ ಹೇಳಿದ್ದಾರೆ.

  English summary
  Actress Urvashi Rautela said that virginity should be a girls personal choice.
  Monday, July 20, 2020, 10:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X