For Quick Alerts
  ALLOW NOTIFICATIONS  
  For Daily Alerts

  ಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್‌ನಲ್ಲಿ ಫ್ಲೈಟ್ ಏರಿದ 'Mr.ಐರಾವತ'ನ ಊರ್ವಶಿ

  |

  ಕಾಸ್ಟ್ಯೂಮ್ ವಿಚಾರಕ್ಕೆ ಸೆಲೆಬ್ರೆಟಿಗಳು ಟ್ರೋಲ್ ಆಗೋದು ಹೊಸದೇನು ಅಲ್ಲ. ಚಿತ್ರವಿಚಿತ್ರ ಕಾಸ್ಟ್ಯೂಮ್‌ಗಳಲ್ಲಿ ಬಾಲಿವುಡ್ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡು ಮುಜುಗರ ಎದುರಿಸಿದ ಸಂದರ್ಭಗಳು ಇವೆ. ಬಾಲಿವುಡ್ ನಟಿ, ಮಾಡೆಲ್ ಊವರ್ಶಿ ರೌಟೇಲಾ ಹರಿದ ಜೀನ್ಸ್ ತೊಟ್ಟು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಪಿಂಕ್ ಶಿಮರ್ ಟೀಶರ್ಟ್‌ ಮತ್ತು ಟೋರ್ನ್ ಜೀನ್ಸ್‌ನಲ್ಲಿ ಮುಂಬೈ ಏರ್‌ಪೋರ್ಟ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ತಮಿಳಿನ 'ದಿ ಲೆಜೆಂಡ್' ಸಿನಿಮಾದಲ್ಲಿ ಊರ್ವಶಿ ನಟಿಸಿದ್ದು, ಪ್ರಮೋಷನ್‌ಗಾಗಿ ವಿದೇಶಕ್ಕೆ ಹಾರಿದ್ದಾರೆ. ಚೆಂದುಳ್ಳಿ ಚೆಲುವೆಯ ಸರ್‌ಪ್ರೈಸಿಂಗ್ ಏರ್‌ಪೋರ್ಟ್‌ ಲುಕ್ ಈಗ ಸಖತ್ ವೈರಲ್ಲಾಗಿದೆ.

  ಊರ್ವಶಿ ರೌಟೇಲಾ ಏರ್‌ಪೋರ್ಟ್‌ಗೆ ಬಂದಿಳಿದಾಗ ಪಾಪರಾಜಿಗಳು ಮುತ್ತಿಕೊಂಡಿದ್ದರು. ಕ್ಯಾಮೆರಾಗಳ ಕಡೆ ಕೊಂಚ ಹೊತ್ತು ಪೋಸ್ ಕೊಟ್ಟು ನಿಂತ ಚೆಲುವೆ ನಂತರ ಕೈ ಬೀಸಿ, ಏರ್‌ಪೋರ್ಟ್ ಒಳಗೆ ಹೋಗಿದ್ದರು. ಫ್ಲೈಟ್‌ ಒಳಗೂ ಸಾಕಷ್ಟು ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ಊರ್ವಶಿ ಶೇರ್ ಮಾಡಿದ್ದಾರೆ. ಅದರಲ್ಲೂ ಫ್ಲೈಟ್‌ನಲ್ಲಿ ಕಾಲ ಮೇಲೆ ಕಾಲ್ ಹಾಕಿಕೊಂಡು ಕೂತಿರುವ ಫೋಟೋ ಕೊಂಚ ವಿಚಿತ್ರವಾಗಿ ಕಾಣುತ್ತಿದೆ. ಸಾಮಾನ್ಯವಾಗಿ ಟೋರ್ನ್ ಜೀನ್ಸ್ ಅಂದ್ರೆ, ಮುಂದೆ ಹರಿದಿರೋದನ್ನು ನೋಡಿರುತ್ತೇವೆ. ಆದರೆ ಊವರ್ಶಿ ಹಿಂದೆಯೂ ಹರಿದಿರುವಂತೆ ಸ್ಪೆಷಲ್ ಆಗಿ ಡಿಸೈನ್ ಮಾಡಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

  ಸೊಂಟ ಬಳುಕಿಸಿರುವ ಸ್ಟಾರ್ ನಟಿಗೆ ಕುಣಿಯಲು ತೆಲುಗು ನಟ ಸ್ಪೂರ್ತಿಯಂತೆಸೊಂಟ ಬಳುಕಿಸಿರುವ ಸ್ಟಾರ್ ನಟಿಗೆ ಕುಣಿಯಲು ತೆಲುಗು ನಟ ಸ್ಪೂರ್ತಿಯಂತೆ

  'ಮೈ ತುಂಬಾ ಬಟ್ಟೆ ಹಾಕಿಕೊಂಡರೆ ನೆಮ್ಮದಿಯಾಗಿ ರಾತ್ರಿ ಪ್ರಯಾಣ ಮಾಡಬಹುದು. ಆದರೆ ಈ ರೀತಿ ಮೈ ಕಾಣುವಂತೆ ಬಟ್ಟೆ ಹಾಕಿಕೊಳ್ಳೋದು ಬೇಕಿತ್ತಾ' ಅಂತ ಕೇಳುತ್ತಿದ್ದಾರೆ. ಮತ್ತೊಬ್ಬರು 'ತುತ್ತು ಅನ್ನ ತಿನ್ನೋಕೆ, ಹಾಡು ನೆನಪಾಯಿತು' ಎಂದು ಕಾಮೆಂಟ್ ಮಾಡಿದ್ದಾರೆ.

   'ಐರಾವತ' ದರ್ಶನ್ ಜೊತೆ ನಟಿಸಿದ್ದ ಚೆಲುವೆ

  'ಐರಾವತ' ದರ್ಶನ್ ಜೊತೆ ನಟಿಸಿದ್ದ ಚೆಲುವೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮಿಸ್ಟರ್ ಐರಾವತ ಸಿನಿಮಾದಲ್ಲಿ ಊರ್ವಶಿ ರೌಟೇಲಾ ನಾಯಕಿಯಾಗಿ ಮಿಂಚಿದ್ದರು. ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಮಿಂಚಿದ್ದ ಊರ್ವಶಿ ಸಿನಿರಸಿಕರು ಮನಗೆದ್ದಿದ್ದರು. ಎ. ಪಿ ಅರ್ಜುನ್ ನಿರ್ದೇಶನದ ಈ ಚಿತ್ರದಲ್ಲಿ ಪತ್ರಕರ್ತೆ ಪ್ರಿಯಾ ಪಾತ್ರದಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ನಂತರ ಮತ್ತೆ ಯಾವುದೇ ಕನ್ನಡ ಸಿನಿಮಾದಲ್ಲಿ ಈ ಚೆಲುವೆ ನಟಿಸಲಿಲ್ಲ.

  ವರ್ಜಿನಿಟಿ ಎನ್ನುವುದು ಮಹಿಳೆಯ ಆಯ್ಕೆಯಾಗಬೇಕು ಎಂದ 'ಐರಾವತ' ನಟಿ ಊರ್ವಶಿವರ್ಜಿನಿಟಿ ಎನ್ನುವುದು ಮಹಿಳೆಯ ಆಯ್ಕೆಯಾಗಬೇಕು ಎಂದ 'ಐರಾವತ' ನಟಿ ಊರ್ವಶಿ

   40 ಕೋಟಿ ಮೌಲ್ಯದ ಕಾಸ್ಟ್ಯೂಮ್‌ನಲ್ಲಿ ಕ್ಯಾಟ್‌ವಾಕ್

  40 ಕೋಟಿ ಮೌಲ್ಯದ ಕಾಸ್ಟ್ಯೂಮ್‌ನಲ್ಲಿ ಕ್ಯಾಟ್‌ವಾಕ್

  ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬೆಳೆದ ಚೆಲುವೆ ಊರ್ವಶಿ ರೌಟೇಲಾ, ಹಿಂದೆ ಒಮ್ಮೆ 40 ಕೋಟಿ ಮೌಲ್ಯದ ಕಾಸ್ಟ್ಯೂಮ್‌ ತೊಟ್ಟು ರ್ಯಾಂಪ್ ವಾಕ್ ಮಾಡಿದ್ದರು. ಚಿನ್ನ ಹಾವೂ ವಜ್ರ ಮಿಶ್ರಿತವಾದ ಆ ಕಾಸ್ಟ್ಯೂಮ್ ಅನ್ನು ಬಹಳ ವಿಭಿನ್ನವಾಗಿ ವಿನ್ಯಾಸ ಮಾಡಲಾಗಿತ್ತು. ಅರಬ್ ಫ್ಯಾಷನ್ ವೀಕ್‌ಗಾಗಿ ನಟಿ ಊರ್ವಶಿ ಇಂಥಾದೊಂದು ದುಬಾರಿ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದರು.

   ಆ ವೀಡಿಯೋ ಟ್ರೋಲ್ ಮಾಡಿದ್ದ ಊರ್ವಶಿ ಗರಂ

  ಆ ವೀಡಿಯೋ ಟ್ರೋಲ್ ಮಾಡಿದ್ದ ಊರ್ವಶಿ ಗರಂ

  ಕೆಲ ದಿನಗಳ ಹಿಂದೆ ಮದುವೆ ಸಮಾರಂಭದ ವೇಳೆ ಹಿರಿಯ ನಿರ್ಮಾಪಕ ಬೋನಿ ಕಪೂರ್ ಊರ್ವಶಿ ಹಿಂಭಾಗ ಮುಟ್ಟಿದ್ದರು. ಈ ವಿಡಿಯೋ ವೈರಲ್ ಮಾಡಿದ್ದ ಸಾಮಾಜಿಕ ಜಾಲತಾಣಗಳ ವಿರುದ್ಧ ಐದು ತಿಂಗಳ ಬಳಿಕ ಐರಾವತ ಬೆಡಗಿ ಊರ್ವಶಿ ರೌಟೇಲಾ ಗರಂ ಆಗಿದ್ದರು. 'ಬೋನಿ ಕಪೂರ್ ಅವರ ಕೈ ನನ್ನ ಹಿಂಭಾಗಕ್ಕೆ ಟಚ್ ಆಗಿತ್ತು. ಇದಕ್ಕೆ ನಾನು ಬೇರೆ ಅರ್ಥ ಕಲ್ಪಿಸಿರಲಿಲ್ಲ. ಆದರೆ ಬೆಳಗಾಗುವಷ್ಟರಲ್ಲಿ ಆ ವಿಡಿಯೋ ವೈರಲ್ ಆಗಿತ್ತು. ಇದರಿಂದ ನನಗೆ ತುಂಬಾ ಮುಜುಗರವಾಗಿತ್ತು,' ಅಂತ ಊರ್ವಶಿ ಅಸಮಾಧಾನ ವ್ಯಕ್ತಪಡಿಸಿದ್ದರು.

   ಮಕ್ಕಳ ಮುಖದಲ್ಲಿ ನಗು ಮೂಡಿಸಲು 67 ಲಕ್ಷ ದಾನ ಮಾಡಿದ ನಟಿ

  ಮಕ್ಕಳ ಮುಖದಲ್ಲಿ ನಗು ಮೂಡಿಸಲು 67 ಲಕ್ಷ ದಾನ ಮಾಡಿದ ನಟಿ

  ಊರ್ವಶಿ ರೌಟೇಲಾ ಸಾಮಾಜಿಕ ಕಳಕಳಿ ಎಲ್ಲರಿಗೂ ಸ್ಫೂರ್ತಿ ತುಂಬುವಂತದ್ದು. 'ದಿ ಸ್ಮೈಲ್ ಟ್ರೈನ್' ಅನ್ನುವ ಎನ್‌ಜಿಓ ಜೊತೆ ನಟಿ ಕೈ ಜೋಡಿಸಿದ್ದಾರೆ. ಪ್ರಪಂಚದಾದ್ಯಂತ ಸೀಳ್ದುಟಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಮೊಗದಲ್ಲಿ ನಗು ಮೂಡಿಸಲು ಶ್ರಮಿಸುತ್ತಿದ್ದಾರೆ. ಊರ್ವಶಿ ಈ ಎನ್‌ಜಿಓಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

  Recommended Video

  PuneethRajkumar ಅವರ ಹೆಸರಿನಲ್ಲಿ ಪ್ರಶಸ್ತಿ, ಪ್ರಶಸ್ತಿ ಪ್ರದಾನ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ *Sandalwood
  English summary
  Actress Urvashi Rautela Trolled On Social Media For her Outfit. Know More about her new dress.
  Friday, July 22, 2022, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X