For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್‌ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬಾಲಿವುಡ್ ನಟಿ: ತಬ್ಬಿಬ್ಬಾದ ಅಭಿಮಾನಿಗಳು!

  |

  ಫೆಬ್ರವರಿ 16. ಬಾಕ್ಸಾಫೀಸ್​​​ ಸುಲ್ತಾನ್​ ದರ್ಶನ್​ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಪ್ರತಿ ವರ್ಷ ಆ ದಿನ ಬಂದರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಯುಗಾದಿ, ದೀಪಾವಳಿ ರೀತಿಯಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಇದ್ದಕ್ಕಿದಂತೆ ನಟಿ ಊವರ್ಶಿ ರೌಟೇಲಾ ಇಂದು(ಆಗಸ್ಟ್ 29) ನಟ ದರ್ಸನ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಯ್ಯೋ ಇವತ್ತಲ್ಲ ದರ್ಶನ್ ಹುಟ್ಟುಹಬ್ಬ ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ನಟಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆಯಷ್ಟೇ(ಆಗಸ್ಟ್ 28) ಸ್ಟೇಡಿಯಂನಲ್ಲಿ ಊರ್ವಶಿ ಭಾರತ- ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದರು.

  ಚಾಲೆಂಜಿಗ್ ಸ್ಟಾರ್ ದರ್ಶನ್‌ ನಟನೆಯ 'ಮಿಸ್ಟರ್ ಐರಾವತ' ಚಿತ್ರದಲ್ಲಿ ಊರ್ವಶಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಈ ಸಿನಿಮಾ ಒಂದು ರೇಂಜಿಗೆ ಸಕ್ಸಸ್ ಕಂಡಿತ್ತು. ದಿಢೀರನೇ ಮುಂಬೈ ಬ್ಯೂಟಿ ಟ್ವಿಟ್ಟರ್‌ನಲ್ಲಿ ನಟ ದರ್ಶನ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದನ್ನು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಪ್ಪಿ ತಪ್ಪಿ ಆಕೆಯ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ಯಾ ಎನ್ನುವ ಅನುಮಾನವೂ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ಫೆಬ್ರವರಿ 16ರಂದೇ ಊರ್ವಶಿ, ನಟ ದರ್ಶನ್‌ಗೆ ಹುಟ್ಟುಹಬ್ಬ ಶುಭಾಶಯ ಕೋರಿದ್ದರು. ಹಾಗಾಗಿ ಆಕೆಗೆ ದರ್ಶನ್ ಹುಟ್ಟುಹಬ್ಬದ ದಿನಾಂಕ ಚೆನ್ನಾಗಿ ಗೊತ್ತಿರುತ್ತದೆ. ಆದರೂ ಯಾಕೆ ಇಂದು ಶುಭ ಕೋರಿದರು ಎಂದ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.

  ಚಿಯಾನ್‌ ವಿಕ್ರಮ್‌ಗೆ ಪವನ್ ಕುಮಾರ್ ಕಥೆ 'ದ್ವಿತ್ವ'ದ್ದೇ ಇರಬಹುದಾ?ಚಿಯಾನ್‌ ವಿಕ್ರಮ್‌ಗೆ ಪವನ್ ಕುಮಾರ್ ಕಥೆ 'ದ್ವಿತ್ವ'ದ್ದೇ ಇರಬಹುದಾ?

  ಕಾಮೆಂಟ್ ಬಾಕ್ಸ್‌ನಲ್ಲಿ ದರ್ಶನ್ ಅಭಿಮಾನಿಗಳು ಊರ್ವಶಿ ಟ್ವೀಟ್ ನೋಡಿ 'ಶುಭ ಕೋರಿದ್ದಕ್ಕೆ ಧನ್ಯವಾದ, ಆದರೆ ಇಂದು ದರ್ಶನ್ ಅವರ ಹುಟ್ಟುಹಬ್ಬ ಅಲ್ಲ' ಎಂದು ಹೇಳುತ್ತಿದ್ದಾರೆ. 'ಕ್ರಾಂತಿ' ಸಿನಿಮಾ ಪ್ರಮೋಷನ್ ವಿಚಾರಕ್ಕೆ ದರ್ಶನ್ ಹೆಸರು ಟ್ರೆಂಡಿಂಗ್‌ನಲ್ಲಿ ಇರುವುದು ನೋಡಿ ಹುಟ್ಟುಹಬ್ಬ ಎಂದು ಊರ್ವಶಿ ಕನ್‌ಫ್ಯೂಸ್ ಆಗಿರಬಹುದು ಎನ್ನುವುದು ಕೆಲವರ ವಾದ. ಒಟ್ನಲ್ಲಿ ಊರ್ವಶಿ ರೌಟೇಲಾ ಮಾಡಿರುವ ಟ್ವೀಟ್ ಸಿಕ್ಕಾಪಟ್ಟೆ ವೈರಲ್ಲಾಗಿದೆ.

  ಮಿ. ಐರಾವತ'ನ ಜೋಡಿಯಾಗಿದ್ದ ಊವರ್ಶಿ

  ಮಿ. ಐರಾವತ'ನ ಜೋಡಿಯಾಗಿದ್ದ ಊವರ್ಶಿ

  7 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಮಿ.ಐರಾವತ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಊರ್ವಶಿ ರೌಟೇಲಾ ನಟಿಸಿದ್ದರು. ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಮಿಂಚಿದ್ದ ಊರ್ವಶಿ ಸಿನಿರಸಿಕರು ಮನಗೆದ್ದಿದ್ದರು. ಎ. ಪಿ ಅರ್ಜುನ್ ನಿರ್ದೇಶನದ ಈ ಚಿತ್ರದಲ್ಲಿ ಪತ್ರಕರ್ತೆ ಪ್ರಿಯಾ ಪಾತ್ರದಲ್ಲಿ ಬಾಲಿವುಡ್ ಬ್ಯೂಟಿ ಗಮನ ಸೆಳೆದಿದ್ದರು. ಸಿನಿಮಾ ಸಾಂಗ್ಸ್‌ನಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು. 'ಮಿ. ಐರಾವತ' ನಂತರ ಮತ್ತೆ ಯಾವುದೇ ಕನ್ನಡ ಸಿನಿಮಾದಲ್ಲಿ ಈಕೆ ನಟಿಸಲಿಲ್ಲ.

  ಒಳ್ಳೆ ಚಿತ್ರವನ್ನು ಕನ್ನಡ ಪ್ರೇಕ್ಷಕರು ಕೈ ಬಿಡಲಿಲ್ಲ: ಎಮೋಷನಲ್ ಹಿಟ್ 'ಲವ್ 360' ರೀಮೆಕ್ ರೈಟ್ಸ್‌ಗೆ ಸಖತ್ ಡಿಮ್ಯಾಂಡ್!ಒಳ್ಳೆ ಚಿತ್ರವನ್ನು ಕನ್ನಡ ಪ್ರೇಕ್ಷಕರು ಕೈ ಬಿಡಲಿಲ್ಲ: ಎಮೋಷನಲ್ ಹಿಟ್ 'ಲವ್ 360' ರೀಮೆಕ್ ರೈಟ್ಸ್‌ಗೆ ಸಖತ್ ಡಿಮ್ಯಾಂಡ್!

  ಸಾಮಾಜಿಕ ಕೆಲಸಗಳಿಂದಲೂ ಗುರ್ತಿಸಿಕೊಂಡ ನಟಿ

  ಸಾಮಾಜಿಕ ಕೆಲಸಗಳಿಂದಲೂ ಗುರ್ತಿಸಿಕೊಂಡ ನಟಿ

  ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಸ್ಫೂರ್ತಿ ತುಂಬುವಂತದ್ದು. 'ದಿ ಸ್ಮೈಲ್ ಟ್ರೈನ್' ಅನ್ನುವ ಎನ್‌ಜಿಓ ಜೊತೆ ನಟಿ ಕೈ ಜೋಡಿಸಿದ್ದಾರೆ. ಪ್ರಪಂಚದಾದ್ಯಂತ ಸೀಳ್ದುಟಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಮೊಗದಲ್ಲಿ ನಗು ಮೂಡಿಸಲು ಆಕೆ ಶ್ರಮಿಸುತ್ತಿದ್ದಾರೆ. ಆ ಎನ್‌ಜಿಓಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಊರ್ವಶಿ ಕೆಲಸ ಮಾಡುತ್ತಿದ್ದಾರೆ.

  ಊರ್ವಶಿ ಸ್ಟೇಡಿಯಂಗೆ ಬಂದರೂ ಪಂತ್ ಆಡಲಿಲ್ಲ!

  ಊರ್ವಶಿ ಸ್ಟೇಡಿಯಂಗೆ ಬಂದರೂ ಪಂತ್ ಆಡಲಿಲ್ಲ!

  ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ನಟಿ ಊರ್ವಶಿ ರೌಟೇಲಾ ಟ್ವಿಟ್ ವಾರ್ ಭಾರೀ ಸದ್ದು ಮಾಡಿತ್ತು. ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ "ರಿಷಬ್ ಪಂತ್ ನನ್ನ ಹಿಂದೆ ಬಿದ್ದಿದ್ದಾರೆ. ಇನ್ನಿಲ್ಲದಂತೆ ನನ್ನನ್ನು ಕಾಡಿದ್ದರು" ಎಂದು ಹೇಳಿಕೆ ನೀಡಿದ್ದರು. ಟೀಂ ಇಂಡಿಯಾ ಆಟಗಾರ ಪಂತ್ ಇದಕ್ಕೆ ಇನ್‌ಸ್ಟಾಗ್ರಾಂನಲ್ಲಿ ತಿರುಗೇಟು ನೀಡಿದ್ದರು. ನಂತರ ಇಬ್ಬರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಮುಂದುವರೆದಿತ್ತು. ನಿನ್ನೆ ನಡೆದ ಭಾರತ- ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಊರ್ವಶಿ ಹೋಗಿದ್ದರು. ಆದರೆ ಪಂತ್‌ಗೆ ಆಡುವ ಅವಕಾಶವೇ ಸಿಗಲಿಲ್ಲ.

  ಹೊಸ ದಾಖಲೆ ಬರೆದ ಸುದೀಪ್ ಫ್ಯಾನ್ಸ್

  ಹೊಸ ದಾಖಲೆ ಬರೆದ ಸುದೀಪ್ ಫ್ಯಾನ್ಸ್

  ಸ್ಯಾಂಡಲ್‌ವುಡ್‌ನಲ್ಲಿ ಅತಿಹೆಚ್ಚು ಟ್ವೀಟ್ ಆದ ಬರ್ತ್‌ಡೇ ಟ್ಯಾಗ್ ಅನ್ನುವ ದಾಖಲೆ ಈಗ ಸುದೀಪ್ ಫ್ಯಾನ್ಸ್ ಪಾಲಾಗಿದೆ. ಇದೇ ವರ್ಷ ನೆಚ್ಚಿನ ನಟನ ಹುಟ್ಟುಹಬ್ಬ ಸಂಭ್ರದಲ್ಲಿ ದರ್ಶನ್‌ ಫ್ಯಾನ್ಸ್ ಮಾಡಿದ್ದ 42 ಲಕ್ಷ ಟ್ವೀಟ್‌ನ ಮೀರಿಸಿ, ಸುದೀಪ್ ಫ್ಯಾನ್ಸ್ 44 ಲಕ್ಷ ಟ್ವೀಟ್ ಮಾಡಿದ್ದಾರೆ. ಕಿಂಗ್‌ ಕಿಚ್ಚ ಬರ್ತ್‌ಡೇ ಸಿಡಿಪಿ 44 ಲಕ್ಷ ಟ್ವೀಟ್ ಆಗಿದೆ. ಇದು ಸ್ಯಾಂಡಲ್‌ವುಡ್‌ನಲ್ಲಿ ಅತಿದೊಡ್ಡ ಬರ್ತ್‌ಡೇ ಸಿಡಿಪಿ ಟ್ರೆಂಡ್ ಎನಿಸಿಕೊಂಡಿದೆ.

  English summary
  Urvashi Rautela Wishes Darshan Happy Birthday Tweet Goes Viral. Know More.
  Monday, August 29, 2022, 16:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X