For Quick Alerts
  ALLOW NOTIFICATIONS  
  For Daily Alerts

  ತಿಳಿಗಪ್ಪು ಸೀರೆಯಲ್ಲಿ ವೀಣಾ ಮನ್ಮಥ ಬಾಣ

  By ರವಿಕಿಶೋರ್
  |

  ಪಾಕಿಸ್ತಾನದ ಖತರ್ನಾಕ್ ಬೆಡಗಿ ವೀಣಾ ಮಲಿಕ್ ಕೇವಲ ಬಿಕಿನಿ, ಶಾರ್ಟ್ಸ್ ಗಳಲ್ಲಷ್ಟೇ ಅಲ್ಲದೆ ಸೀರೆಯಲ್ಲೂ ಚಕ್ಕೋತ ಹಣ್ಣು. ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುತ್ತಿರುವ ಈ ಪಾಕ್ ಬೆಡಗಿ ಸೀರೆಯುಟ್ಟು ಎಲ್ಲರ ಗಮನಸೆಳೆಯುತ್ತಿದ್ದಾರೆ. ಮುಡಿಗೆ ಮಲ್ಲಿಗೆ ಹೂವಿನ ಸಿಂಗಾರ ರಸಿಕ ಶಿಖಾಮಣಿಗಳ ನಿದ್ದೆಗೆಡಿಸಿದೆ.

  ಈಗಾಗಲೆ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಎಂಬ ಚಿತ್ರದ ಮೂಲಕ ಕನ್ನಡಕ್ಕೂ ಅಡಿಯಿಟ್ಟಿರುವ ವೀಣಾ ಮಲಿಕ್ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಈ ಹಿಂದೆ ಆಕೆ ಬಿ ಗ್ರೇಡ್ ಚಿತ್ರದಲ್ಲೂ ಅಭಿನಯಿಸಿ ತಮ್ಮ ಅಷ್ಟೌಶ್ವರ್ಯಗಳನ್ನು ತೆರೆದಿಟ್ಟಿದ್ದರು.

  ಸೀರೆಯಲ್ಲಿ ನಸುನಾಚಿದ ನಾಚಿದ ವೀಣಾ ಮಲಿಕ್

  ಸೀರೆಯಲ್ಲಿ ನಸುನಾಚಿದ ನಾಚಿದ ವೀಣಾ ಮಲಿಕ್

  ಒಂದಷ್ಟು ಬ್ಲೀಚ್ ಜಾಸ್ತಿ ಆಯಿತು ಅನ್ನಿಸಿದರೂ ನಾಚಿಕೆಯನ್ನು ತೋರಿಸುವುದರಲ್ಲಿ ವೀಣಾಗೆ ಸರಿಸಾಟಿ ಯಾರು? ಎಂದೆನಿಸುತ್ತದೆ. ಐಟಂ ಹಾಡಿಗೂ ಅಡಿಯಿಟ್ಟಿರುವ ವೀಣಾ ಸೀರೆಯಲ್ಲೇ ಐಟಂ ಡಾನ್ಸ್ ಮಾಡಿದರೂ ಅಚ್ಚರಿಯಿಲ್ಲ.

  ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ

  ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ

  ಸೀರೆಯ ಕೈಚಳಕ ಏನೆಲ್ಲಾ ಮಾಡುತ್ತದೆ ನೋಡಿ. ವೀಣಾ ಮಲಿಕ್ ಹೇಳಿಕೇಳಿ ಅಂಥಹಾ ರೂಪಸಿಯೇನು ಅಲ್ಲ. ಆದರೆ ಆಕೆ ಉಟ್ಟ ಸೀರೆ ಆಕೆ ಸೌಂದರ್ಯಪ್ರಜ್ಞೆಗೆ ಕನ್ನಡಿ ಹಿಡಿದಿದೆ. ಸೀರೆಗೆ ಎಂಥಹಾ ಪವರ್ ಇದೆಯಪ್ಪಾ ಎಂದು ಒಂದು ಕ್ಷಣ ಅನ್ನಿಸುತ್ತದೆ.

  ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ

  ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ

  ಈ ಫೋಟೋ ನೋಡುತ್ತಿದ್ದರೆ 'ಗಾಂಧಿನಗರ' ಚಿತ್ರದ "ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ ನಿನಗೆಂದೇ ಬರೆದ ಪ್ರೇಮದ ಓಲೆ ಅದನೋದಲು ಹರಿವುದು ಜೇನಿನ ಹೊಳೆ....ಹಾಡು ಹಾಗೆಯೇ ನೆನಪಿಗೆ ಬರುತ್ತದೆ.

  ಉಡಿಸುವೆ ಬೆಳಕಿನ ಸೀರೆಯಾ ನೀ ಚೂರು...

  ಉಡಿಸುವೆ ಬೆಳಕಿನ ಸೀರೆಯಾ ನೀ ಚೂರು...

  'ಪಂಚರಂಗಿ' ಬೆಡಗಿಯಂತೆ ಇಲ್ಲೂ ವೀಣಾ ಕಂಗೊಳಿಸಿದ್ದಾರೆ. ಈ ಫೋಟೋಗೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಹಾಗೆ ಸುಮ್ಮನೆ ನೆನಪಾಗುತ್ತದೆ. ಉಡಿಸುವೆ ಬೆಳಕಿನ ಸೀರೆಯ..ಚೂರು ನೀ ಸಹಕರಿಸು..ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು.. ಅದೆ ಚೆಂದ...ಹಾಗೆಂದೇ.. ಭಾವಿಸು....!!!!

  ಚಿಗುರೆಲೆ ಕೆಣಕಿದಾಗ ವೀಣಾ ನೆನಪಾದಾಗ

  ಚಿಗುರೆಲೆ ಕೆಣಕಿದಾಗ ವೀಣಾ ನೆನಪಾದಾಗ

  ಹಣ್ಣೆಲೆ ಚಿಗುರಿದಾಗ ಚಿತ್ರದ ಹಾಡನ್ನು ನೆನಪಿಸಿಕೊಳ್ಳದೆ ವಿಧಿ ಇಲ್ಲ. ಹೂವು ಚೆಲುವೆಲ್ಲಾ ನಂದೆಂದಿತು, ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು...ನವಿಲೊಂದು ನಾಟ್ಯದಲ್ಲಿ ತಾನೇ ದೊರೆಯೆಂದಿತು...ಕೆದರುತ ಗರಿ ಕುಣಿಯುವ ಪರಿ ಕಣ್ಣಿಗೆ ತಂಪೆಂತು ಹೆಣ್ಣು ನಾತ್ಯದರಸಿ ಪಾರ್ವತಿಯೆ ಹೆಣ್ಣೆಂದಿತು...

  ಆಹಾ ಎಂಥ ಸೌಂದರ್ಯ ಕಂಡೆ

  ಆಹಾ ಎಂಥ ಸೌಂದರ್ಯ ಕಂಡೆ

  ಓ...ಎಂಥ ಸೌಂದರ್ಯ ಕಂಡೆ..ಓ... ಹೋ..ಎಂಥ ಸೌಂದರ್ಯ ಕಂಡೆ..ಎ..ಆದಿ ಶಕ್ತಿಯೋ, ಮಹಾಲಕ್ಷ್ಮಿಯೋ, ವಾಣಿ..ಯೋ ಕಾಣೆ ನಾ...ಅ..ಅ...ಹೊಳೆಯುವ ಕಣ್ಣುಗಳೋ, ಬೆಳಗುವ ದೀಪಗಳೋ..


  ಇಲ್ಲಿವೆ ನೋಡಿ ತಿಳಿಗಪ್ಪು ಸೀರೆಯಲ್ಲಿ ವೀಣಾರ ವಿವಿಧ ಭಾವ ಭಂಗಿಗಳು. ಒಂದಕ್ಕಿಂತ ಒಂದು ಸೂಪರ್. ನಾರಿಯ ಸೀರೆಗೆ ಯಾರಾದರೂ ಮರುಳಾಗದವರುಂಟೇ? ಸೀರೆಯಲ್ಲೇ ಮನ್ಮಥನ ಬಾಣ ಬಿಟ್ಟಿದ್ದಾರೆ ವೀಣಾ.

  ಈಕೆ ಮೊದಲೇ ಕೃಷ್ಣ ಸುಂದರಿ. ಅದರಲ್ಲೂ ತಿಳಿಗಪ್ಪು ಸೀರೆ ಎಂದರೆ ಕೇಳಬೇಕೆ. ಕಣ್ಣಾರೆ ನೋಡಿ ಸವಿದರೇನೇ ಚೆಂದ. ಒಂದೊಂದೇ ಸ್ಲೈಡ್ ಗಳನ್ನು ಸರಿಸುತ್ತಾ ಹೋದರೆ ವೀಣಾರ ಸೀರೆಯ ವಿಭಿನ್ನ ಚಮತ್ಕಾರಗಳನ್ನು ನೋಡುತ್ತಾ ಸಾಗಬಹುದು.

  English summary
  Check out actress Veena Malik's black saree magic. Spicy Actress Veena Malik in Saree Hot Pics at Nagna Satyam Movie Launch. Veena Malik New Hot Pics in Saree.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X