Don't Miss!
- News
ಬೆಂಗಳೂರು ಪೊಲೀಸ್ ವಿರುದ್ಧ ಸುಲಿಗೆ ಆರೋಪ: ಕಿರುಕುಳ ನೀಡಿ ಹಣ ಸುಲಿಗೆ, ದೆಹಲಿ ಮಹಿಳೆ ಆರೋಪ
- Automobiles
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ವೀಣಾ ಮಲಿಕ್ ಗೆ ಗಂಡನ ಪ್ರೇಮದ ಕಾಣಿಕೆ
ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ಎಲ್ಲಿ? ಬಾಲಿವುಡ್ ನಲ್ಲೂ ಅವರ ಸುಳಿವಿಲ್ಲ. ಮದುವೆಯಾದ ಮೇಲೆ ಮಗುವಾಯಿತು ಎಂಬ ಸುದ್ದಿ ಬಿಟ್ಟರೆ ಅವರು ಎಲ್ಲಿ ಕಾಣೆಯಾದರು ಎಂದು ಬಾಲಿವುಡ್ ಮಂದಿ ದುರ್ಬೀನು ಹಾಕಿ ಹುಡುಕುವಂತಾಗಿದೆ.
ಅಯ್ಯೋ ನಾನು ಎಲ್ಲೂ ಹೋಗಿಲ್ಲ ದುಬೈನಲ್ಲೇ ಇದ್ದೇನೆ ಎಂದು ತಮ್ಮ ಪತಿ, ಪುತ್ರನೊಂದಿಗಿನ ಫೋಟೋಗಳನ್ನು ರವಾನಿಸಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ತಮ್ಮ 31ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.
ತೀರಾ ಖಾಸಗಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ವೀಣಾ ಸಂಭ್ರಮಕ್ಕೆ ಕೇವಲ ಅವರ ಪತಿ ಅಸದ್ ಬಷೀರ್ ಖಾನ್ ಹಾಗೂ ಪುತ್ರ ಅಬ್ರಾಮ್ ಮಾತ್ರ ಸಾಕ್ಷಿಯಾಗಿದ್ದಾರೆ. ಇಲ್ಲಿವೆ ನೋಡಿ ವೀಣಾ 31ರ ಬರ್ತ್ ಡೇ ಚಿತ್ರಗಳು.

ವೀಣಾ ಅವರ ಗ್ಲಾಮರ್ ಕಡಿಮೆಯಾಗಿಲ್ಲ
ದುಬೈ ಮೂಲದ ಉದ್ಯಮಿ ಅಸದ್ ಅವರ ಕೈಹಿಡಿದ ಮೇಲೆ ವೀಣಾ ಆಚರಿಸಿಕೊಳ್ಳುತ್ತಿರುವ ಎರಡನೇ ಹುಟ್ಟುಹಬ್ಬವಿದು. ಮದುವೆ, ಮಗುವಾದ ಮೇಲೂ ವೀಣಾ ಮಲಿಕ್ ಅವರ ಗ್ಲಾಮರ್ ನಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯೇನೂ ಆಗಿಲ್ಲ.

ಬುರ್ಜ್ ಅಲ್ ಅರಬ್ ನಲ್ಲಿ ಸೆಲೆಬ್ರೇಟ್
ಈ ಬಾರಿ ವೀಣಾ ಮಲಿಕ್ ಹುಟ್ಟುಹಬ್ಬ ಸಂಭ್ರಮ ಸ್ವಲ್ಪ ಗ್ರ್ಯಾಂಡ್ ಆಗಿಯೇ ನಡೆದಿದೆ. ದುಬೈನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾಗಿರುವ ಬುರ್ಜ್ ಅಲ್ ಅರಬ್ ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.

27ನೇ ಮಹಡಿಯಲ್ಲಿ ಬರ್ತ್ ಡೇ ಸಂಭ್ರಮ
ಇನ್ನೊಂದು ವಿಶೇಷ ಎಂದರೆ ಬುರ್ಲ್ ಅಲ್ ಅರಬ್ ಇರುವುದು ಬುರ್ಜ್ ಉಲ್ ಅರಬ್ ಬಹುಮಹಡಿ ಕಟ್ಟಡದ 27ನೇ ಮಹಡಿಯಲ್ಲಿದೆ. ಇದೊಂದು ಸಪ್ತತಾರಾ ವೈಭೋಗದ ಹೋಟೆಲ್.

ಮರೆಯಲಾಗದ ಪ್ರೇಮದ ಕಾಣಿಕೆ
27ನೇ ಮಹಡಿ ಎಂದರೆ ಕೇಳಬೇಕೆ? ವೀಣಾ ಅವರ ಗಂಡ ಮರೆಯಲಾಗದ ಪ್ರೇಮದ ಕಾಣಿಕೆಯನ್ನೇ ಕೊಟ್ಟಿದ್ದಾರೆ. ಈ ಬಗ್ಗೆ ವೀಣಾ ಅವರ ಗಂಡ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅಸದ್ ಅವರ ಟ್ವೀಟ್ ಸಂಭ್ರಮ
"Every moment matters when I am with u. Having you in my life makes me realize how important & wonderful LOVE is! ‘HBD'." ಎಂದಿದ್ದಾರೆ ಅಸದ್.

ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ
ವೀಣಾ ಮಲಿಕ್ ಅವರು ತಮ್ಮ ಗಂಡನ ಬಗ್ಗೆ ಮಾತನಾಡುತ್ತಾ, ತಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಬೇಕು ಬೇಡಗಳನ್ನೆಲ್ಲಾ ಈಡೇರುಸುತ್ತಿದ್ದಾರೆ. ಈ ಬಾರಿ ನನ್ನ ಮಗನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಮರೆಯಲಾಗದ ಅನುಭವ ಎಂದಿದ್ದಾರೆ.