»   » ಡರ್ಟಿ ಗರ್ಲ್ ವಿದ್ಯಾ ಬಾಲನ್ ಮದುವೆ ಊ ಲಾ ಲಾ

ಡರ್ಟಿ ಗರ್ಲ್ ವಿದ್ಯಾ ಬಾಲನ್ ಮದುವೆ ಊ ಲಾ ಲಾ

Posted By:
Subscribe to Filmibeat Kannada
ಆಹಾ ವಿದ್ಯಾ ಬಾಲನ್ ಮದುವೆಯಂತೆ ನಿಮಗು ನಮಗು ಏನಂತೆ, ಲೋಕವೆಲ್ಲ ಗುಲ್ಲಂತೆ ಎಂಬಂತೆ ಟಾಂ ಟಾಂ ಟಾಂ ಆಗಿದೆ. ಆದರೆ ಈ ಬಗ್ಗೆ ವಿದ್ಯಾ ಬಾಲನ್ ಕಡೆಯಿಂದ ಅಕ್ಕಿ ಕಾಳಷ್ಟೂ ವಿವರಗಳು ಲಭ್ಯವಿಲ್ಲ. ಆದರೂ ಮದುವೆ ಸಿದ್ಧತೆಗಳು ಮಾತ್ರ ಗಪ್ ಚಿಪ್ ಆಗಿ ನಡೆಯುತ್ತಿವೆ.

ಮಂಗಳವಾರ (ಡಿ.11) ಸಂಗೀತ್ ಸಂಭ್ರಮ ನಡೆಯಲಿದೆಯಂತೆ. ಪ್ರಳಯ ಫಿಕ್ಸ್ ಆಗಿದ್ದು ಒಂದು ವೇಳೆ ಮುಂದೂಡಲ್ಪಟ್ಟರೆ ಡಿಸೆಂಬರ್ 14ಕ್ಕೆ ಮದುವೆ ನಡೆಯಲಿದೆ. ಇದೊಂಥರಾ ಕಿಚಡಿ ಮದುವೆ. ಅರ್ಧ ಸೌತು ಇನ್ನರ್ಧ ನಾರ್ಥ್ ಶೈಲಿಯಲ್ಲಿ ಮದುವೆ.

ವಿದ್ಯಾ ಬಾಲನ್ ಭಾವಿ ಗಂಡ ಸಿದ್ಧಾರ್ಥ್ ರಾಯ್ ಕಪೂರ್ ಪಂಜಾಬಿಯಾದ ಕಾರಣ ಅವರ ಸಂಪ್ರದಾಯಕ್ಕೂ ಮಣೆಹಾಕಲಾಗಿದೆ. ವಿದ್ಯಾ ಬಾಲನ್ ದಕ್ಷಿಣದ ಸಂಪ್ರದಾಯಕ್ಕೂ ಪೀಠ ಹಾಕಿದ್ದಾರೆ. ಇವರಿಬ್ಬರ ಮದುವೆ ಶ್ರೀ ಸುಬ್ರಹ್ಮಣ್ಯ ಸಮಾಜ್ ದೇವಸ್ಥಾನದಲ್ಲಿ ನಡೆಯಲಿದೆ ಇದೇ ಶುಕ್ರವಾರ (ಡಿ.14) ನಡೆಯಲಿದೆ ಎನ್ನುತ್ತವೆ ಮೂಲಗಳು.

ಇಷ್ಟೆಲ್ಲಾ ಸುದ್ದಿಗಳು ಕೇಳಿಬರುತ್ತಿದ್ದರೂ ಇನ್ನೂ ಅಧಿಕೃತ ಘೋಷಣೆ ಮಾತ್ರ ಹೊರಬಿದ್ದಿಲ್ಲ. ಎನಿ ಟೈಮ್ ಮದುವೆ ಟೈಮ್ ಬಹಿರಂಗವಾಗಬಹುದು. ಅಲ್ಲಿಯವರೆಗೂ ಕಾಯ್ತಾ ಇರಿ ಎನ್ನುತ್ತವೆ ವಿದ್ಯಾ ಕುಟುಂಬ ಮೂಲಗಳು. ಅಂದಹಾಗೆ ಸಂಗೀತ್ ಸಂಭ್ರಮದಲ್ಲಿ ಊ ಲಾ ಲಾ ಎಂದೂ ಸ್ಟೆಪ್ ಹಾಕಲಿದ್ದಾರಂಎತೆ ವಿದ್ಯಾ ಬಾಲನ್. (ಏಜೆನ್ಸೀಸ್)

English summary
The Dirty Girl fame actress Vidya Balan is getting ready to tie the knot with Siddharth Roy Kapur. According to sources, the ceremony that is slated to take place on December 14, 2012 will be conducted in both Punjabi and South Indian style.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada