'ದಂಗಲ್' ಖ್ಯಾತಿಯ ನಟಿ ಜೈರಾ ವಾಸೀಮ್ ಗೆ ಲೈಂಗಿಕ ಕಿರುಕುಳ!
ಬಾಲಿವುಡ್ ನಟಿ 'ದಂಗಲ್' ಚಿತ್ರದ ಖ್ಯಾತಿಯ ಜೈರಾ ವಾಸೀಮ್ ಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ತಮ್ಮ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಜೈರಾ ವಾಸೀಮ್ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ನಟಿ ಜೈರಾ ವಾಸೀಮ್ ದೆಹಲಿ ಮುಂಬೈ ನಡುವೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ವಿಸ್ತಾರ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುವಾಗ ವ್ಯಕ್ತಿಯೊಬ್ಬ ಜೈರಾ ವಾಸೀಮ್ ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ವಿಮಾನದಲ್ಲಿ ಜೈರಾ ವಾಸೀಮ್ ಹಿಂದಿನ ಸೀಟ್ ನಲ್ಲಿ ಕುಳಿತ್ತಿದ್ದ ಈತ ಜೈರಾ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಆ ಕಿರಾತಕ ತನ್ನ ಕಾಲಿನಿಂದ ಜೈರಾ ವಾಸೀಮ್ ದೇಹವನ್ನು ಮುಟ್ಟಿದ್ದಾನೆ. ಈ ವೇಳೆ ವಿಮಾನದ ಸಿಬ್ಬಂದಿ ಹೇಳಿದರು ಅವರು ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಜೈರಾ ವಾಸೀಮ್ ತಮ್ಮ ದುಖಃವನ್ನು ಹಂಚಿಕೊಂಡಿದ್ದಾರೆ.
17 ವರ್ಷದ ಜೈರಾ ವಾಸೀಮ್ 'ದಂಗಲ್' ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಮೊದಲ ಸಿನಿಮಾದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಮತ್ತು ಜನಪ್ರಿಯತೆಯನ್ನು ಪಡೆದ ಜೈರಾ ವಾಸೀಮ್ ಇತ್ತೀಚಿಗಷ್ಟೆ ಅಮೀರ್ ಖಾನ್ ನಿರ್ಮಾಣದ 'ಸೀಕ್ರೆಟ್ ಸೂಪರ್ ಸ್ಟಾರ್' ಸಿನಿಮಾದಲ್ಲಿ ನಟಿಸಿದ್ದರು.


Click it and Unblock the Notifications










