'ದಂಗಲ್' ನಟಿ ಜೈರಾಗೆ ಕಿರುಕುಳ ನೀಡಿದ್ದ ಆರೋಪಿ ಬಂಧನ

By Naveen

ಬಾಲಿವುಡ್ ನಟಿ ಜೈರಾ ವಾಸಿಂ ಗೆ ವಿಮಾನಯಾನದ ವೇಳೆ ಕಿರುಕುಳ ನೀಡಿದ ಘಟನೆ ನಿನ್ನೆ ನಡೆದಿತ್ತು. ಇನ್ನು ಕಿರುಕುಳ ನೀಡಿದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

'ದಂಗಲ್‌' ನಟಿಗೆ ಜೈರಾಗೆ ಕಾಟ ಕೊಟ್ಟವ ಅರೆಸ್ಟ್

39 ವರ್ಷ ವಯಸ್ಸಿನ ವಿಕಾಸ್ ಸಚ್ ದೇವ್‌ ಬಂಧಿತ ಆರೋಪಿಯಾಗಿದ್ದಾನೆ. ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಜೈರಾ ಅವರು ಕಿರುಕುಳ ಅನುಭವಿಸಿದ್ದರು. ಟಾಟಾ ವಿಸ್ತಾರ ವಿಮಾನದಲ್ಲಿ ಮಧ್ಯ ವಯಸ್ಸಿನ ಸಹ ಪ್ರಯಾಣಿಕನೊಬ್ಬ ತನಗೆ ಕಿರುಕುಳ ನೀಡಿದ್ದಾನೆ ಎಂದು 17 ವರ್ಷದ ಜೈರಾ ಆರೋಪಿದ್ದರು.

Actress Zaira Wasim molestation case mumbai police arrest accused

ವಿಮಾನಯಾನದ ವೇಳೆ ತನಗಾದ ಕಿರುಕುಳ ಬಗ್ಗೆ ವಿಮಾನದಿಂದ ತಿಳಿದ ತಕ್ಷಣ ಹೇಳಿಕೊಂಡಿದ್ದನ್ನು ಮಾನುಷಿ ಚಿಲ್ಲರ್ ಅವರು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಆ ವ್ಯಕ್ತಿಯ ಚಿತ್ರವನ್ನು ಸೆರೆ ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಿಂಬದಿ ಸೀಟಿನಿಂದ ಜೈರಾ ಇದ್ದ ಸೀಟಿಗೆ ಕಾಲು ಚಾಚಿದ್ದಾನೆ. ಆತನ ಕಾಲಿನ ಚಿತ್ರವನ್ನು ಸೆರೆ ಹಿಡಿದಿದ್ದರು.

ವಿಡಿಯೋ ಹಂಚಿಕೊಂಡ ನಂತರ ಬಳಿಕ ಪೊಲೀಸರು ಐಪಿಸಿ ಸೆಕ್ಷನ್ 354 ಹಾಗೂ ಪೋಸ್ಟೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣ ಕುರಿತಂತೆ ಎಫ್ಐಆರ್ ಹಾಕಿದ್ದರು. ಏರ್ ವಿಸ್ತಾರ ವಿಮಾನಯಾನ ಸಂಸ್ಥೆ ಕೂಡಾ ಕ್ಷಮೆಯಾಚಿಸಿ, ತನಿಖೆಗೆ ಸಹಕರಿಸುವುದಾಗಿ ಹೇಳಿತ್ತು.

More from Filmibeat

English summary
Mumbai police on Sunday arrested the man who allegedly molested Dangal actress Zaira Wasim on board a flight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X