For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ಹೂ ಗಿಡದ ಉಡುಗೆಯಲ್ಲಿ ಮಿಂಚಿದ 'ರಣವಿಕ್ರಮ' ಸುಂದರಿ

  |

  ಬಹುಭಾಷಾ ನಟಿ ಅದಾ ಶರ್ಮಾ ಹೊಸ ಫೋಟೋಶೂಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಹೂ ಗಿಡವನ್ನೇ ಉಡುಗೆಯಾಗಿ ಮಾಡಿಕೊಂಡು ಕ್ಯಾಮರಾಗೆ ಪೋಸ್ ನೀಡಿರುವ ಅದಾ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.

  ಇತ್ತೀಚಿಗೆ ನಟಿಮಣಿಯರ ಫೋಟೋಶೂಟ್ ಅಚ್ಚರಿ ಮೂಡಿಸುತ್ತಿವೆ. ತರಹೇವಾರಿ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ನೆಟ್ಟಿಗರಿಂದ ಹಿಗ್ಗಾಮುಗ್ಗ ಟ್ರೋಲ್ ಆದ ಉದಾಹರಣೆಗಳು ಇದೆ. ಇದೀಗ ಅದಾ ಶರ್ಮಾ ವಿಭಿನ್ನ, ವಿಚಿತ್ರ ರೀತಿಯ ಫೋಟೋಶೂಟ್ ಮಾಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

  ಹಾಟ್ ಅವತಾರದಲ್ಲಿ ಹೊಸ ಚಾಲೆಂಜ್ ಹಾಕಿದ 'ರಣವಿಕ್ರಮ' ನಟಿ

  ಫೋಟೋಶೂಟ್ ವಿಡಿಯೋವನ್ನು ಅದಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದಾ ಫೋಟೋಗೆ ಸಿಕ್ಕಾಪಟ್ಟೆ ಕಾಮೆಂಟ್ಸ್ ಹರಿದು ಬಂದಿವೆ. ಹೂ ಗಿಡವನ್ನೇ ಉಡುಗೆಯಾಗಿ ಮಾಡಿಕೊಂಡಿದ್ದಲ್ಲದೆ, ಉದ್ದವಾದ ಕೂದಲು ನೀಲಿ ಬಣ್ಣಕ್ಕೆ ತಿರುಗಿರುವುದು ಮತ್ತಷ್ಟು ಅಚ್ಚರಿ ಮೂಡಿಸುತ್ತಿದೆ. ಫೋಟೋ ಜೊತೆಗೆ 'ಅದಾ ಶರ್ಮಾಗೆ 100 ವರ್ಷ' ಎಂದು ಬರೆದುಕೊಂಡಿದ್ದಾರೆ. ಫೋಟೋನೋಡಿ ಬೆರಗಾಗಿದ್ದ ನೆಟ್ಟಿಗರು ಕ್ಯಾಪ್ಷನ್ ನೋಡಿ ತಲೆಕೆಡಿಸಿಕೊಂಡಿದ್ದಾರೆ.

  ಉತ್ತರ ಭಾರತದ ನಟಿ ಅದಾ ಶರ್ಮಾ ಖ್ಯಾತಿಗಳಿಸಿದ್ದ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ. ತಮಿಳು, ತೆಲುಗು ಸಿನಿಮಾಗಳ ಜೊತೆಗೆ ಕನ್ನಡ ಸಿನಿಮಾದಲ್ಲೂ ಅದಾ ಮಿಂಚಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ಅದಾ ಬಣ್ಣಹಚ್ಚಿದ್ದಾರೆ. ಸದ್ಯ ಅದಾ ಶರ್ಮಾ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Rana Vikrama Fame Actress Adah Sharma different look in her new Photoshoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X