ನಗ್ನ ಫೋಟೋ ಹಾಕಿ ಸಂಚಲನ ಸೃಷ್ಟಿಸಿದ 'ರಣವಿಕ್ರಮ' ನಟಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದ ಅದಾ ಶರ್ಮಾ ಈಗ ನಗ್ನ ಫೋಟೋ ಹಾಕಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
ಹಿಂದಿ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಮಿಂಚುತ್ತಿರುವ ಅದಾ ಶರ್ಮಾ ಈಗ ಹೊಸ ಸಿನಿಮಾ ಮಾಡ್ತಿದ್ದು, ಈ ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ. ಈ ಹಿನ್ನೆಲೆ ತಮ್ಮ ನಗ್ನ ಫೋಟೋ ಹಾಕಿ ಆರಂಭದಲ್ಲೇ ಪ್ರಚಾರಕ್ಕೆ ಇಳಿದಿದ್ದಾರೆ.
''ಮ್ಯಾನ್ ಟು ಮ್ಯಾನ್ ಇದು ನನ್ನ ಮುಂದಿನ ಸಿನಿಮಾ. ಇದುವರೆಗಿನ ನನ್ನ ಸಿನಿ ಜರ್ನಿಯಲ್ಲಿ ಇಂತಹ ಪಾತ್ರ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈಗ ಮಾಡ್ತಿದ್ದೇನೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ. ಒಂದು ಅದ್ಭುತ ಲವ್ ಸ್ಟೋರಿ. ಇನ್ನುಳಿದಿದ್ದು ನಿಮ್ಮ ಕಲ್ಪನೆಗೆ ಬಿಟ್ಟಿದ್ದು'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಚೊಚ್ಚಲ ಚಿತ್ರದಿಂದಲೂ ಚಾಲೆಂಜಿಂಗ್ ಪಾತ್ರಗಲ್ಲಿ ಅಭಿನಯಿಸುತ್ತಿರುವ ಅದಾ ಶರ್ಮಾ, ಇದೇ ಮೊದಲ ಬಾರಿಗೆ ಪುರಷನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ನವೀನ್ ಕಸ್ತೂರಿಯಾ ಈ ಚಿತ್ರದಲ್ಲಿ ನಾಯಕನಾಗಿದ್ದು, ಸೇನ್ ಗುಪ್ತಾ ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರದ ಬಗ್ಗೆ ಹಾಗೂ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಅದಾ ಶರ್ಮಾ, ನಾನು ಪುರುಷನ ಪಾತ್ರ ಮಾಡುತ್ತಿದ್ದೇನೆ ಎಂದು ಮಾತ್ರ ಹೇಳಿದ್ದಾರೆ. 2008ರಲ್ಲಿ ತೆರೆಕಂಡಿದ್ದ 1920 ಚಿತ್ರದ ಮೂಲಕ ಜರ್ನಿ ಆರಂಭಿಸಿದ್ದ ಅದಾ ಶರ್ಮಾ, ಹಾರ್ಟ್ ಅಟ್ಯಾಕ್, ಸನ್ ಆಫ್ ಸತ್ಯಮೂರ್ತಿ, ಕಮಾಂಡೋ 2, ಕಮಾಂಡೋ 3 ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











