For Quick Alerts
  ALLOW NOTIFICATIONS  
  For Daily Alerts

  ಕಾಸ್ಟಿಂಗ್ ಕೌಚ್‌ ಬಗ್ಗೆ ರಣವಿಕ್ರಮ ನಾಯಕಿ ಮಾತು

  |

  ಪುನೀತ್ ರಾಜ್‌ಕುಮಾರ್ ಜೊತೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದ ಅದಾ ಶರ್ಮಾ ಕಾಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ್ದಾರೆ.

  ದಕ್ಷಿಣ ಭಾರತ ಸಿನಿಮಾದಲ್ಲಿ ಹಾಗೂ ಬಾಲಿವುಡ್‌ ಎರಡರಲ್ಲೂ ನಟಿಸಿರುವ ಅದಾ ಶರ್ಮಾ, ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.

  ಈಗಾಗಲೇ ಹಲವು ಬಾಲಿವುಡ್ ನಟಿಯರು ಕಾಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ್ದಾರೆ. ಕೆಲವರು ವೈಯಕ್ತಿಕ ಅನುಭವವನ್ನೂ ಹಂಚಿಕೊಂಡಿದ್ದಾರೆ. ನಟರೂ ಸಹ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

  ಇದೀಗ ಯುವ ನಟಿ ಅದಾ ಶರ್ಮಾ ಕಾಸ್ಟಿಂಗ್ ಕೌಚ್‌ ಬಗ್ಗೆ ಏನು ಮಾತನಾಡಿದ್ದಾರೆ, ತಿಳಿಯೋಣ ಬನ್ನಿ...

  ''ಎಲ್ಲಾ ಸಿನಿ ಉದ್ಯಮದಲ್ಲೂ ಕಾಸ್ಟಿಂಗ್ ಕೌಚ್ ಇದೆ''

  ''ಎಲ್ಲಾ ಸಿನಿ ಉದ್ಯಮದಲ್ಲೂ ಕಾಸ್ಟಿಂಗ್ ಕೌಚ್ ಇದೆ''

  'ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಕೇವಲ ದಕ್ಷಿಣ ಭಾರತ ಸಿನಿಮಾ, ಬಾಲಿವುಡ್‌ನಲ್ಲಿ ಮಾತ್ರವಲ್ಲ ಇಡೀಯ ವಿಶ್ವದಲ್ಲಿಯೇ ಇದೆ' ಎಂದಿದ್ದಾರೆ. ಆ ಮೂಲಕ ಭಾರತದ ಬಹುತೇಕ ಎಲ್ಲಾ ಸಿನಿ ಉದ್ಯಮದಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬುದನ್ನು ಹೇಳಿದ್ದಾರೆ.

  ಆಯ್ಕೆ ನಟಿಯರಿಗೆ ಬಿಟ್ಟದ್ದು: ಅದಾ ಶರ್ಮಾ

  ಆಯ್ಕೆ ನಟಿಯರಿಗೆ ಬಿಟ್ಟದ್ದು: ಅದಾ ಶರ್ಮಾ

  ಕಾಸ್ಟಿಂಗ್ ಕೌಚ್ ಎಲ್ಲಾ ಸಿನಿ ಉದ್ಯಮದಲ್ಲೂ ಇದೆ, ಆದರೆ ಆ ಕೌಚ್‌ ಮೇಲೆ ಕೂರುತ್ತೀರೋ, ಮಲಗುತ್ತೀರೋ ಅಥವಾ ಅದರ ಪಕ್ಕವೇ ನೆಲದ ಮೇಲೆ ಕೂರುತ್ತೀರೋ ಎಂಬ ಆಯ್ಕೆ ನಟಿಯರಿಗೆ ಬಿಟ್ಟದ್ದು, ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

  ರಣ ವಿಕ್ರಮ ಸಿನಿಮಾದಲ್ಲಿ ನಟಿಸಿರುವ ಚೆಲುವೆ

  ರಣ ವಿಕ್ರಮ ಸಿನಿಮಾದಲ್ಲಿ ನಟಿಸಿರುವ ಚೆಲುವೆ

  ಕನ್ನಡದಲ್ಲಿ ರಣ ವಿಕ್ರಮ ಸಿನಿಮಾದಲ್ಲಿ ನಟಿಸಿದ್ದ ಅದಾ ಶರ್ಮಾ, ತೆಲುಗಿನಲ್ಲಿ ಸನ್ ಆಫ್ ಸತ್ಯಮೂರ್ತಿ, ಸುಬ್ರಹ್ಮಣ್ಯಂ ಫಾರ್ ಸೇಲ್, ಹಿಂದಿಯಲ್ಲಿ ಕಮೆಂಡೋ 2-3 ಸಿನಿಮಾದಲ್ಲಿ ನಟಿಸಿದ್ದಾರೆ.

  ಆಯುಷ್ಮಾನ್ ಖುರಾನಾಗೂ ಆಗಿತ್ತು ಅನುಭವ

  ಆಯುಷ್ಮಾನ್ ಖುರಾನಾಗೂ ಆಗಿತ್ತು ಅನುಭವ

  ಇತ್ತೀಚೆಗೆ ನಟ ಆಯುಷ್ಮಾನ್ ಖುರಾನಾ ಸಹ ತಮ್ಮೊಂದಿಗೆ ನಡೆದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದರು. ಗುಪ್ತಾಂಗ ತೋರಿಸಿದರೆ ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದರಂತೆ ಒಬ್ಬ ನಿರ್ಮಾಪಕರು.

  English summary
  Actress Adah Sharma talks about casting couch in Indian movie industry. She said casting couch exist in universe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X