ಬಿಡುಗಡೆಗೂ ಮುನ್ನ ಆದಿಪುರುಷ್ ಅಬ್ಬರ; ಪಠಾಣ್ ದಾಖಲೆ ಉಡೀಸ್, ಕೆಜಿಎಫ್ ದಾಖಲೆ ಮುರಿಯುತ್ತಾ?

ಇದೇ ಶುಕ್ರವಾರ ( ಜೂನ್ 16 ) ಈ ವರ್ಷದ ಬಹು ನಿರೀಕ್ಷತ ಚಿತ್ರಗಳಲ್ಲಿ ಒಂದಾದ ಸಿನಿಮಾ ಆದಿಪುರುಷ್ ಬಿಡುಗಡೆಯಾಗಲಿದೆ. ಪ್ರಭಾಸ್ ರಾಮನ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಕೃತಿ ಸೆನನ್ ಸೀತೆಯ ಪಾತ್ರವನ್ನು ನಿರ್ವಹಿಸಿದ್ದು, ಈ ಜೋಡಿಯ ಕಾಂಬಿನೇಶನ್‌ನಲ್ಲಿ ರಾಮ - ಸೀತೆ ಕಥೆ ಹೇಗೆ ಇರಲಿದೆ ಎಂದು ಸಿನಿ ರಸಿಕರು ಕಾತರರಾಗಿದ್ದಾರೆ.

ಲೋಕಮಾನ್ಯ - ಏಕ್ ಯುಗ್ ಪುರುಷ್ ಹಾಗೂ ತಾನ್ಹಾಜಿ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಓಂ ರಾವತ್ ಆದಿಪುರುಷ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೂಲತಃ ಹಿಂದಿ ಚಿತ್ರವಾಗಿರುವ ಆದಿಪುರುಷ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಸಹ ಡಬ್ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

Adipurush beats Pathaan in most interests on book my show

ಇನ್ನು ಈ ಎಲ್ಲಾ ಅವತರಣಿಕೆಗಳ ಮುಂಗಡ ಬುಕಿಂಗ್ ಈಗಾಗಲೇ ತೆರೆದಿದ್ದು, ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಟಿಕೆಟ್‌ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಭಾನುವಾರ ( ಜೂನ್ 11 ) ಆದಿಪುರುಷ್ ಚಿತ್ರದ ಮುಂಗಡ ಬುಕಿಂಗ್ ಆರಂಭವಾಗಿದ್ದು, ಈ ಅಡ್ವಾನ್ಸ್ ಬುಕಿಂಗ್‌ನಲ್ಲಿ ಆದಿಪುರುಷ್ ಈ ವರ್ಷ ಬಿಡುಗಡೆಗೊಂಡಿದ್ದ ಪಠಾಣ್ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.

ಹೌದು, 2023ರಲ್ಲಿ ಬಿಡುಗಡೆಗೊಂಡ ಚಿತ್ರಗಳ ಪೈಕಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಶನ್‌ನ ಪಠಾಣ್ ಸಿನಿಮಾ ಬಿಡುಗಡೆಗೂ ಮುನ್ನ ಬುಕ್ ಮೈ ಶೋನಲ್ಲಿ ಅತಿಹೆಚ್ಚು ಇಂಟರೆಸ್ಟ್‌ಗಳನ್ನು ಪಡೆದುಕೊಂಡ ಚಿತ್ರ ಎನಿಸಿಕೊಂಡಿತ್ತು. ಪಠಾಣ್ ಸಿನಿಮಾ 721000 ಇಂಟರೆಸ್ಟ್‌ಗಳನ್ನು ಪಡೆದುಕೊಂಡಿತ್ತು.

ಇದೀಗ ಆದಿಪುರುಷ್ ಬಿಡುಗಡೆಗೆ ಇನ್ನೂ ಎರಡು ದಿನಗಳು ಬಾಕಿ ಇರುವಾಗ 9 ಲಕ್ಷ ಇಂಟರೆಸ್ಟ್‌ಗಳನ್ನು ಪೂರೈಸಿದ್ದು, ಪಠಾಣ್ ದಾಖಲೆಯನ್ನು ಹಿಂದಿಕ್ಕಿ ಈ ವರ್ಷ ಬಿಡುಗಡೆಗೂ ಮುನ್ನ ಬುಕ್ ಮೈಶೋನಲ್ಲಿ ಅತಿಹೆಚ್ಚು ಇಂಟರೆಸ್ಟ್ ಗಳಿಸಿರುವ ಚಿತ್ರ ಎಂಬ ದಾಖಲೆ ಬರೆದಿದೆ.

ಇನ್ನು ಇದು ಈ ವರ್ಷದ ಅಂಕಿಅಂಶವಾದರೆ ಇಲ್ಲಿಯವರೆಗೂ ಬುಕ್ ಮೈ ಶೋನಲ್ಲಿ ಅತಿಹೆಚ್ಚು ಇಂಟರೆಸ್ಟ್ ಪಡೆದುಕೊಂಡ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

1. ವಿಕ್ರಮ್ ( ತಮಿಳು ) - 2.3 ಮಿಲಿಯನ್ ಇಂಟೆರೆಸ್ಟ್

2. ವಾಲಿಮೈ ( ತಮಿಳು ) - 2.2 ಮಿಲಿಯನ್ ಇಂಟೆರೆಸ್ಟ್

3. ಕೆಜಿಎಫ್ ಚಾಪ್ಟರ್ 2 ( ಕನ್ನಡ, ಪ್ಯಾನ್ ಇಂಡಿಯಾ ) - 2.1 ಮಿಲಿಯನ್ ಇಂಟೆರೆಸ್ಟ್

4. ಆರ್ ಆರ್ ಆರ್ ( ತೆಲುಗು, ಪ್ಯಾನ್ ಇಂಡಿಯಾ ) - 1.7 ಮಿಲಿಯನ್ ಇಂಟೆರೆಸ್ಟ್

5. ಬಾಹುಬಲಿ 2 ( ತೆಲುಗು, ಪ್ಯಾನ್ ಇಂಡಿಯಾ ) - 1.1 ಮಿಲಿಯನ್ ಇಂಟೆರೆಸ್ಟ್

6. ಆದಿಪುರುಷ್ ( ಹಿಂದಿ, ಪ್ಯಾನ್ ಇಂಡಿಯಾ ) - 9 ಲಕ್ಷ ಇಂಟೆರೆಸ್ಟ್ ( ಬಿಡುಗಡೆಗೆ ಇನ್ನೂ ಎರಡು ದಿನಗಳು ಬಾಕಿ )

7. ಪುಷ್ಪ ದ ರೈಸ್ ( ತೆಲುಗು, ಪ್ಯಾನ್ ಇಂಡಿಯಾ ) - 864000 ಇಂಟೆರೆಸ್ಟ್

8. ರಾಧೆ ಶ್ಯಾಮ್ ( ತೆಲುಗು,ಪ್ಯಾನ್ ಇಂಡಿಯಾ ) - 830000 ಇಂಟೆರೆಸ್ಟ್

ಹೀಗೆ ಈ ವರ್ಷ ಅತಿಹೆಚ್ಚು ಇಂಟರೆಸ್ಟ್ ಪಡೆದುಕೊಂಡಿರುವ ಚಿತ್ರ ಎನಿಸಿಕೊಂಡಿರುವ ಆದಿಪುರುಷ್ ಉಳಿದ ಎರಡು ದಿನಗಳಲ್ಲಿ ಯಾವ ರೀತಿಯ ಬುಕಿಂಗ್ ಪಡೆದುಕೊಳ್ಳಲಿದೆ ಹಾಗೂ ಮೇಲಿನ ಪಟ್ಟಿಯಲ್ಲಿ ಯಾವ ಚಿತ್ರವನ್ನು ಹಿಂದಿಕ್ಕಲಿದೆ ಕಾದು ನೋಡಬೇಕಿದೆ.

More from Filmibeat

English summary
Adipurush beats Pathaan in most interests on book my show. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X