ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ ಆದಿಪುರುಷ್ ಅಬ್ಬರ; 3 ದಿನಗಳಲ್ಲಿ ಚಿತ್ರ ಗಳಿಸಿದ್ದೆಷ್ಟು? ಇಂದಿನಿಂದ ಶುರು ಅಗ್ನಿಪರೀಕ್ಷೆ!

ಕಳೆದ ಶುಕ್ರವಾರ ( ಜೂನ್ 16 ) ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಆದಿಪುರುಷ್ ಚಿತ್ರ ಬಿಡುಗಡೆಗೊಂಡಿತು. ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ಹಾಗೂ ಕೃತಿ ಸೆನನ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.

ಮೂಲ ಹಿಂದಿ ಚಿತ್ರವಾಗಿರುವ ಈ ಚಿತ್ರ ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಸಹ ಈ ಚಿತ್ರ ಡಬ್ ಆಗಿದ್ದು ಪ್ಯಾನ್ ಇಂಡಿಯಾ ಬಿಡುಗಡೆಯಾಗಿದೆ. ಇನ್ನು ಚಿತ್ರ ಬಿಡುಗಡೆಗೊಂಡು ಮೊದಲ ಪ್ರದರ್ಶನ ಮುಗಿದ ಬೆನ್ನಲ್ಲೇ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡಿತು.

Adipurush collects 340 crores from 3 days in worldwide box office

ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಪಾತ್ರಗಳ ವಸ್ತ್ರ, ವೇಷದ ಕುರಿತು ವ್ಯಂಗ್ಯವಾಡಿದರು ಹಾಗೂ ಹೀನಾಯವಾಗಿ ಟ್ರೋಲ್ ಮಾಡಿದರು. ಅಲ್ಲದೇ ಚಿತ್ರದಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ ಎಂಬ ಕಾರಣಕ್ಕೂ ಸಹ ಚಿತ್ರತಂಡ ಹೀನಾಯವಾಗಿ ಟೀಕೆಗೆ ಒಳಗಾಯಿತು.

ಹೀಗೆ ದೊಡ್ಡ ಮಟ್ಟದಲ್ಲಿ ಟ್ರೋಲ್ ಆದ ಆದಿಪುರುಷ್ ಚಿತ್ರದ ಕಲೆಕ್ಷನ್ ಸಹ ತುಸು ಡಲ್ ಹೊಡೆದಿತ್ತು ಎಂದೇ ಹೇಳಬಹುದಾಗಿದೆ. ಚಿತ್ರಕ್ಕೆ ಹಾಕಿದ್ದ ಬಜೆಟ್‌ಗೆ ತಕ್ಕಂತಹ ಕಲೆಕ್ಷನ್ ಬಾರದೇ ಹಿನ್ನಡೆ ಅನುಭವಿಸಿದೆ. ಆದರೆ ಚಿತ್ರದ ಕಲೆಕ್ಷನ್ ತೀರ ಕಳಪೆ ಮಟ್ಟದಲ್ಲಿದೆ ಎಂದೇನಲ್ಲ. ಮೊದಲ ಮೂರೂ ದಿನಗಳೂ ಸಹ ನೂರು ಕೋಟಿಗಿಂತ ಅಧಿಕ ಗಳಿಕೆಯನ್ನು ಚಿತ್ರ ಮಾಡಿದ್ದು, ಸಮಾಧಾನಕರ ಕಲೆಕ್ಷನ್ ಇದಾಗಿದೆ.

ಹೌದು, ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 140 ಕೋಟಿ ಗಳಿಕೆ ಮಾಡಿದ್ದ ಆದಿಪುರುಷ್ ಎರಡನೇ ದಿನ 100 ಕೋಟಿ ಗಳಿಸಿದೆ ಹಾಗೂ ಮೂರನೇ ದಿನವೂ 100 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರ ಮೊದಲ ಮೂರು ದಿನಗಳಲ್ಲಿ ವಿಶ್ವದಾದ್ಯಂತ 340 ಕೋಟಿ ಗಳಿಕೆ ಮಾಡಿದೆ. ಬಾಹುಬಲಿ ದ ಬೆಗಿನಿಂಗ್, ಬಾಹುಬಲಿ ದ ಕನ್ಕ್ಲೂಷನ್ ಹಾಗೂ ಸಾಹೋ ಬಳಿಕ 300 ಕೋಟಿ ದಾಟಿದ ಪ್ರಭಾಸ್ ನಟನೆಯ ನಾಲ್ಕನೇ ಚಿತ್ರ ಇದಾಗಿದೆ.

ಇನ್ನು ಮೊದಲ ಮೂರು ದಿನಗಳಲ್ಲಿ ಸತತವಾಗಿ ನೂರು ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿರುವ ಆದಿಪುರುಷ್ ಇಂದಿನಿಂದ ( ಜೂನ್ 19 ) ಅಸಲಿ ಅಗ್ನಿಪರೀಕ್ಷೆಯನ್ನು ಎದುರಿಸಲಿದೆ. ವಾರಾಂತ್ಯದ ರಜಾ ದಿನ ಮುಗಿದಿದ್ದು, ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಲಿದ್ದು, ಕಲೆಕ್ಷನ್ ಸಹ ಇಳಿಕೆಯಾಗಲಿದೆ. ಒಟ್ಟಿನಲ್ಲಿ ಇಂದಿನಿಂದ ಆದಿಪುರುಷ್ ಕಡಿಮೆ ಬುಕಿಂಗ್ ಪಡೆದುಕೊಂಡು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುವಲ್ಲಿ ವಿಫಲವಾದರೆ ಲಾಭ ಪಡೆದುಕೊಳ್ಳುವಲ್ಲಿ ಎಡವಿ ನಷ್ಟ ಅನುಭವಿಸಿದರೂ ಆಶ್ಚರ್ಯವಿಲ್ಲ.

ಸದ್ಯ ಆದಿಪುರುಷ್ ಚಿತ್ರ 151 ಕೋಟಿ ಶೇರ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಹೇಳುತ್ತಿದ್ದು, ಚಿತ್ರ ಲಾಭದ ಗಡಿ ಮುಟ್ಟಲು 242 ಕೋಟಿ ಶೇರ್ ಕಲೆಕ್ಷನ್ ಮಾಡಬೇಕಿದೆ. ಈ ಮೂಲಕ ಚಿತ್ರ ಇನ್ನೂ ಸಹ 91 ಕೋಟಿ ಶೇರ್ ಕಲೆಕ್ಷನ್ ಮಾಡಲೇಬೇಕಿದೆ.

ಇನ್ನು ಚಿತ್ರದ ಇಂದಿನ ಬುಕಿಂಗ್ ಸಾಮಾನ್ಯವಾಗಿದ್ದು, ಹೆಚ್ಚೇನೂ ಹೌಸ್‌ಫುಲ್ ಕಂಡುಬರುತ್ತಿಲ್ಲ. ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿ ಬುಕಿಂಗ್ ತುಸು ಚೆನ್ನಾಗಿದ್ದು, ಬೆಂಗಳೂರಿನಲ್ಲಿ ಸಾಮಾನ್ಯವಾಗಿದೆ. ಸಂಜೆ ಪ್ರದರ್ಶನಗಳ ಬುಕಿಂಗ್ ಸುಧಾರಿಸಿಕೊಳ್ಳುವ ಸಾಧ್ಯತೆ ಇದ್ದು, ಚಿತ್ರ ನಾಲ್ಕನೇ ದಿನ 60 ಕೋಟಿ ಗ್ರಾಸ್ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಇದೆ.

More from Filmibeat

English summary
Adipurush collects 340 crores from 3 days in world wide box office. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X