ಐದೇ ದಿನಕ್ಕೆ ಮುಗಿದ 'ಆದಿಪುರುಷ್' ಹವಾ; ಬಾಕ್ಸ್ ಆಫೀಸ್ ಕಲೆಕ್ಷನ್ ಹರೋಹರ!

ಕಳೆದ ಶುಕ್ರವಾರ ( ಜೂನ್ 16 ) ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ಪ್ರಭಾಸ್ ನಟನೆಯ ಈ ಮೊದಲ ಹಿಂದಿ ಚಿತ್ರ ಬಿಡುಗಡೆಗೂ ಮುನ್ನ ಕುತೂಹಲ ಸೃಷ್ಟಿಸಿತ್ತು ಹಾಗೂ ಟೀಸರ್‌ನಲ್ಲಿದ್ದ ಕಳಪೆ ವಿಎಫ್ಎಕ್ಸ್ ಕಾರಣದಿಂದಾಗಿ ಹೀನಾಯವಾಗಿ ಟ್ರೋಲ್ ಆಗಿತ್ತು.

ಹೀಗೆ ಬಿಡುಗಡೆಗೂ ಮುನ್ನವೇ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದ ಆದಿಪುರುಷ್ ಬಿಡುಗಡೆಯಾದ ನಂತರವೂ ಸಹ ಅದೇ ರೀತಿಯ ವಿಮರ್ಶೆಗಳನ್ನು ಪಡೆದುಕೊಂಡಿದೆ. ಹೌದು, ಆದಿಪುರುಷ್ ತನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಕೆಟ್ಟ ಟೀಕೆಗಳನ್ನು ಪಡೆದುಕೊಳ್ತಿದೆ. ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಇದು ರಾಮಾಯಣ ಅಲ್ಲ, ಮಾಡರ್ನ್ ಅಪ್‌ಡೇಟೆಡ್ ರಾಮಾಯಣ ಎಂದು ಅಸಮಾಧಾನ ಹೊರಹಾಕಿದ್ದರು. ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಚಿತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳು ಕೇಳಿಬಂದವು.

 Adipurush collects 395 crores from 5 days in worldwide box office

ಚಿತ್ರದಲ್ಲಿ ಎಲ್ಲಾ ಪಾತ್ರಗಳ ವಸ್ತ್ರದ ವಿಧಾನ ರಾಮಾಯಣಕ್ಕೆ ಹೋಲಿಕೆಯಾಗ್ತಿಲ್ಲ, ಪಾತ್ರಗಳ ಲುಕ್ ಅನ್ನೂ ಸಹ ದೊಡ್ಡ ಮಟ್ಟದಲ್ಲಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಹನುಮಂತನ ಪಾತ್ರದಲ್ಲೂ ಸಹ ಬದಲಾವಣೆ ಇದೆ ಎಂದು ಆರೋಪಿಸಿದ್ದ ಸಿನಿ ರಸಿಕರು ಹನುಮಂತ ಹೇಳುವ ಬಹುತೇಕ ಡೈಲಾಗ್‌ಗಳು ಈಗಿನ ಕಾಲದಲ್ಲಿ ಮಾತನಾಡುವ ಹಾಗೆ ಇದೆ, ಈ ಸಂಭಾಷಣೆಗಳನ್ನು ಕೇಳಿದಾಗ ಇದೊಂದು ಪೌರಾಣಿಕ ಚಿತ್ರ ಎನಿಸುವುದೇ ಇಲ್ಲ ಎಂದು ಕಿಡಿಕಾರಿದ್ದರು.

ಹೀಗೆ ಸಾಲು ಸಾಲು ವಿವಾದ ಹಾಗೂ ವಿರೋಧಕ್ಕೆ ಕಾರಣವಾದ ಆದಿಪುರುಷ್ ಚಿತ್ರ ಬಿಡುಗಡೆ ದಿನ ಬೃಹತ್ ಮಟ್ಟದ ಗಳಿಕೆಯನ್ನು ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾಗದಿದ್ದರೂ ಸಹ ಸಮಾಧಾನಕರ ಕಲೆಕ್ಷನ್ ಮಾಡಿತ್ತು. ಹೌದು, ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 140 ಕೋಟಿ ಗಳಿಕೆ ಮಾಡಿದ್ದ ಆದಿಪುರುಷ್ ಎರಡನೇ ದಿನ 100 ಕೋಟಿ ಗಳಿಸಿತು ಹಾಗೂ ಮೂರನೇ ದಿನವೂ 100 ಕೋಟಿ ಗಳಿಕೆ ಮಾಡಿತು. ಇನ್ನು ನಾಲ್ಕನೇ ದಿನ ಮೊದಲ ಸೋಮವಾರ 35 ಕೋಟಿ ವಿಶ್ವ ಬಾಕ್ಸ್ ಆಫೀಸ್ ಗ್ರಾಸ್ ಕಲೆಕ್ಷನ್ ಮಾಡಿದ ಆದಿಪುರುಷ್ ಐದನೇ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಕೇವಲ 20 ಕೋಟಿ ಗಳಿಕೆ ಮಾಡಿದೆ.

ಈ ಮೂಲಕ ಆದಿಪುರುಷ್ ಐದು ದಿನಗಳಲ್ಲಿ ವಿಶ್ವದಾದ್ಯಂತ 395 ಕೋಟಿ ಗಳಿಕೆಯನ್ನು ಮಾಡಿದೆ. ಮೊದಲ 3 ದಿನಗಳಲ್ಲಿ 340 ಕೋಟಿಯನ್ನು ಗಳಿಸಿದ್ದ ಆದಿಪುರುಷ್ ನಂತರದ ಎರಡು ದಿನಗಳಲ್ಲಿ 55 ಕೋಟಿಯನ್ನು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದು, ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿದೆ. ಒಟ್ಟಿನಲ್ಲಿ ಆದಿಪುರುಷ್ ಕಲೆಕ್ಷನ್ ಮೂರು ದಿನಗಳ ಅಬ್ಬರದ ಬಳಿಕ ಹರೋಹರ ಎಂಬಂತಾಗಿದೆ.

ಇನ್ನು ಆದಿಪುರುಷ್ ಚಿತ್ರ 500 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ತಯಾರಾಗಿದ್ದು, 5 ದಿನಗಳಲ್ಲಿ 395 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಇದರಲ್ಲಿ 180 ಕೋಟಿ ಶೇರ್ ಕಲೆಕ್ಷನ್ ಇದೆ. ಚಿತ್ರ ಬ್ರೇಕ್ ಈವನ್ ಸಾಧಿಸಿ ಲಾಭ ಗಳಿಸಲಾರಂಭಿಸಲು 242 ಗಳಿಸಬೇಕಿದ್ದು, ಇನ್ನೂ 62 ಕೋಟಿ ಶೇರ್ ಕಲೆಕ್ಷನ್ ಮಾಡಬೇಕಿದೆ. 5 ಮತ್ತು ನಾಲ್ಕನೇ ದಿನದ ಕಲೆಕ್ಷನ್ ಮೊದಲ ಮೂರು ದಿನಗಳ ಕಲೆಕ್ಷನ್‌ಗಿಂತ ತೀರ ಕೆಳಮಟ್ಟದಲ್ಲಿದ್ದು ಆದಿಪುರುಷ್ ಬ್ರೇಕ್ ಈವನ್ ತಲುಪುವುದರಲ್ಲಿ ಸಣ್ಣ ಪ್ರಮಾಣದ ಅನುಮಾನ ಮೂಡಿದೆ.

More from Filmibeat

English summary
Adipurush collects 395 crores from 5 days in worldwide box office. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X