ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ್ರೂ ಬಾಕ್ಸ್ಆಫೀಸ್‌ನಲ್ಲಿ ಅಬ್ಬರಿಸಿದ ಆದಿಪುರುಷ್; ಮೊದಲ ದಿನದ ಕಲೆಕ್ಷನ್ ಎಷ್ಟು?

ನಿನ್ನೆ ( ಜೂನ್ 16 ) ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿದೆ. ಪ್ರಭಾಸ್ ಸಿನಿಮಾ ಎಂದಮೇಲೆ ದೊಡ್ಡ ಮಟ್ಟದ ಕ್ರೇಜ್ ಕಾಮನ್. ಇನ್ನು ಈ ಬಾರಿ ಹಿಂದಿ ಸಿನಿಮಾದಲ್ಲಿ ನಟಿಸಿದ್ದ ಪ್ರಭಾಸ್ ಈ ಮೂಲಕ ಬಾಲಿವುಡ್ ಪ್ರವೇಶವನ್ನೂ ಸಹ ಮಾಡಿದ್ದಾರೆ.

ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾ ಯಾವ ರೀತಿ ಸದ್ದು ಮಾಡಬಹುದು ಎಂಬ ಅಂಶ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು. ಇನ್ನು ರಾಮಾಯಣದ ಕಥೆಯನ್ನಾಧರಿಸಿದ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಅಭಿನಯಿಸಿದ್ದರೆ, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ ಹಾಗೂ ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ಮಾಡಿದ್ದಾರೆ.

Adipurush grossed 95 crores on day 1 in India and 130 crores in worldwide box office as per reports

ಇನ್ನು ಚಿತ್ರ ಬಿಡುಗಡೆಗೊಳ್ಳುವ ಮುನ್ನ ಈ ಹಿಂದಿನ ಪ್ರಭಾಸ್ ಚಿತ್ರಗಳ ಹಾಗೆ ದೊಡ್ಡ ಮೆಚ್ಚುಗೆಯನ್ನೇನೂ ಪಡೆದುಕೊಂಡಿರಲಿಲ್ಲ. ಚಿತ್ರದ ಟೀಸರ್‌ನಲ್ಲಿನ ಕಳಪೆ ವಿಎಫ್ಎಕ್ಸ್ ವಿಪರೀತ ಟ್ರೋಲ್ ಆಗಿತ್ತು. ಇದರಿಂದ ಮತ್ತೆ ವಿಎಫ್ಎಕ್ಸ್ ಸುಧಾರಿಸಲು ಸಮಯ ತೆಗೆದುಕೊಂಡ ಚಿತ್ರತಂಡ ನಿಗದಿತ ದಿನಕ್ಕಿಂತ ತಡವಾಗಿ ಚಿತ್ರವನ್ನು ಬಿಡುಗಡೆ ಮಾಡಿತು.

ಆದರೆ ಬಿಡುಗಡೆಗೂ ಸ್ವಲ್ಪ ಸಮಯ ಇರುವಾಗ ಚಿತ್ರತಂಡ ಹಂಚಿಕೊಂಡಿದ್ದ ಟ್ರೈಲರ್ ಹಾಗೂ ಹಾಡುಗಳು ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟಿಸಿದ್ದವು. ಚಿತ್ರತಂಡ ಸಿನಿ ರಸಿಕರಲ್ಲಿ ಹಾಗೂ ಪ್ರಭಾಸ್ ಅಭಿಮಾನಿಗಳಲ್ಲಿ ನಂಬಿಕೆಯನ್ನು ಹುಟ್ಟುಹಾಕಿತ್ತು. ಆದರೆ ಚಿತ್ರ ಬಿಡುಗಡೆಯಾದ ಬಳಿಕ ಈ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಆದಿಪುರುಷ್ ಚಿತ್ರತಂಡ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ.

ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಅಭಿಮಾನಿಗಳು ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದು, ಸಾಮಾನ್ಯ ಸಿನಿ ರಸಿಕರಲ್ಲಿ ಬಹುತೇಕರು ಚಿತ್ರ ಚೆನ್ನಾಗಿಯೇ ಇಲ್ಲ ಎಂದರೆ ಇನ್ನೂ ಕೆಲವರು ಒಮ್ಮೆ ನೋಡಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಆದಿಪುರುಷ್ ನಿರೀಕ್ಷಿಸಿದ್ದ ಗೆಲುವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದೇ ಹೇಳಬಹುದಾಗಿದೆ.

ಇನ್ನು ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಚಿತ್ರದ ಎರಡನೆ ದಿನ ಬುಕಿಂಗ್ ಚೆನ್ನಾಗಿದೆ. ಅಂದಹಾಗೆ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿರಬಹುದು ಎಂಬ ಕುತೂಹಲ ಸಿನಿ ರಸಿಕರಲ್ಲಿ ಇದ್ದು, ಚಿತ್ರತಂಡ ಈ ಕುರಿತು ಇನ್ನೂ ಮಾಹಿತಿ ಹಂಚಿಕೊಳ್ಳಬೇಕಿದೆ. ಆದರೆ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ಚಿತ್ರ ಮೊದಲ ದಿನ ಮಾಡಿರುವ ಕಲೆಕ್ಷನ್ ಮಾಹಿತಿ ನೀಡಿದ್ದಾರೆ.

ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಮಾಹಿತಿ ಪ್ರಕಾರ ಆದಿಪುರುಷ್ ಚಿತ್ರ ಮೊದಲ ದಿನ ಭಾರತದಲ್ಲಿ 95 ಕೋಟಿ ಕಲೆಕ್ಷನ್ ಮಾಡಿದ್ದು, ವಿಶ್ವದಾದ್ಯಂತ 130 ಕೋಟಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಪ್ರಭಾಸ್ ಮೊದಲ ದಿನದ ಗಳಿಕೆಯಲ್ಲಿ ಮೂರು ಬಾರಿ ನೂರು ಕೋಟಿ ಕ್ಲಬ್ ಸೇರಿದ ಏಕೈಕ ನಟ ಎನಿಸಿಕೊಂಡಿದ್ದಾರೆ.

More from Filmibeat

English summary
Adipurush grossed 95 crores on day 1 in India and 130 crores in worldwide box office as per reports. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X