ಆದಿಪುರುಷ್ ಕರ್ನಾಟಕ ಬುಕಿಂಗ್ಸ್ ಆರಂಭದ ದಿನಾಂಕ ಪ್ರಕಟಿಸಿದ ಚಿತ್ರತಂಡ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಮುಂದಿನ ಶುಕ್ರವಾರ ( ಜೂನ್ 16 ) ಬಿಡುಗಡೆಗೊಳ್ಳಲಿದೆ. ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದ್ದು, ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಆದಿಪುರುಷ್ ಚಿತ್ರವನ್ನು ಮೊದಲ ದಿನವೇ ವೀಕ್ಷಿಸಲು ಕಾತರರಾಗಿದ್ದಾರೆ.

ಹೀಗಾಗಿ ಎಲ್ಲರೂ ಟಿಕೆಟ್ ಅನ್ನು ಮುಂಗಡವಾಗಿ ಖರೀದಿಸಲು ಕಾಯುತ್ತಿದ್ದು, ಇದೀಗ ಚಿತ್ರತಂಡ ದೇಶದ ಯಾವ ಭಾಗಗಳಲ್ಲಿ ಯಾವ ದಿನ ಮುಂಗಡ ಬುಕಿಂಗ್ ಆರಂಭಗೊಳ್ಳಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.

 Adipurush Karnataka advance bookings will be opened tomorrow

ಇನ್ನು ಆದಿಪುರುಷ್ ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಹಿಂದಿ ಜತೆಗೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ತೆರೆಗೆ ಬರಲಿದೆ. ಕರ್ನಾಟಕದಲ್ಲಿ ಆದಿಪುರುಷ್ ಚಿತ್ರದ ವಿತರಿಸುವ ಹಕ್ಕನ್ನು ಕೆಆರ್‌ಜಿ ಸ್ಟುಡಿಯೊಸ್ ಬಾಚಿಕೊಂಡಿದೆ.

ಈ ವಿಷಯವನ್ನು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ ಸಂತಸ ವ್ಯಕ್ತಪಡಿಸಿದ್ದ ಕೆಆರ್‌ಜಿ ಸ್ಟುಡಿಯೊಸ್ ಇಂದು ( ಜೂನ್ 10 ) ಅಡ್ವಾನ್ಸ್ ಬುಕಿಂಗ್ ಯಾವಾಗ ಶುರುವಾಗಲಿದೆ ಎಂಬುದನ್ನು ತಿಳಿಸಿದೆ. ನಾಳೆ ಭಾನುವಾರ ( ಜೂನ್ 11 ) ಬೆಳಗ್ಗೆ 11ರಿಂದ ಮುಂಗಡ ಬುಕಿಂಗ್ ಶುರುವಾಗಲಿದೆ.

ಇನ್ನು ಟಿಕೆಟ್ ದರ ಎಷ್ಟಿರಲಿದೆ ಎಂಬ ಕುತೂಹಲ ಸಿನಿ ರಸಿಕರು ಹಾಗೂ ಅಭಿಮಾನಿಗಳಲ್ಲಿ ಮೂಡಿದೆ. ಚಿತ್ರಕ್ಕೆ ಕ್ಲೀನ್ ಯು ಸರ್ಟಿಫಿಕೇಟ್‌ ಅನ್ನು ಸೆನ್ಸಾರ್ ಬೋರ್ಡ್ ನೀಡಿದ್ದು, 2 ಗಂಟೆ 59 ನಿಮಿಷಗಳ ರನ್ ಟೈಮ್ ಚಿತ್ರವಿರಲಿದೆ. ಚಿತ್ರ 500 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ದೊಡ್ಡಮಟ್ಟದ ಲಾಭದ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಟಿಕೆಟ್‌ಗಳಿಗೆ ದೊಡ್ಡ ಮಟ್ಟದ ಬೇಡಿಕೆಗಳು ಉಂಟಾಗಲಿದ್ದು, ನಿರ್ಮಾಪಕರೊಬ್ಬರು ಚಿತ್ರದ 10,000 ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ.

ಹೌದು, ದ ಕಾಶ್ಮೀರ್ ಫೈಲ್ಸ್ ಹಾಗೂ ಕಾರ್ತಿಕೇಯ 2 ಚಿತ್ರಗಳ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಆದಿಪುರುಷ್ ಚಿತ್ರದ ಒಟ್ಟು ಹತ್ತು ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಿದ್ದಾರೆ. ತೆಲಂಗಾಣ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಹಾಗೂ ವೃದ್ಧಾಶ್ರಮಗಳಿಗೆ ಈ ಹತ್ತು ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಆದಿಪುರುಷ್ ಚಿತ್ರತಂಡ ಈ ಸುದ್ದಿಯನ್ನು ಅಧಿಕೃತವಾಗಿ ತಿಳಿಸಿದ್ದು, ಮಾನವರಿಗೆ ರಾಮನ ಪ್ರತಿ ಭಾಗ ಸಹ ಪಾಠವಾಗಿದೆ, ಈ ತಲೆಮಾರಿನವರು ರಾಮನ ಬಗ್ಗೆ ತಿಳಿಯಬೇಕು ಹಾಗೂ ಆತನ ದೈವಿಕ ಹೆಜ್ಜೆಗಳನ್ನು ಅನುಸರಿಸಬೇಕು ಎಂಬ ಕಾರಣಕ್ಕೆ ಅಭಿ‍ಷೇಕ್ ಅಗರ್ವಾಲ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಜೂನ್‌ನಲ್ಲಿ ಮಹಾನ್ ಪುರುಷ ರಾಮನನ್ನು ಸಂಭ್ರಮಿಸೋಣ ಎಂದು ಪೋಸ್ಟ್ ಹಂಚಿಕೊಂಡಿದೆ.

ಇನ್ನು ಮೊದಲಿಗೆ ತನ್ನ ಕಳಪೆ ವಿಎಫ್‌ಎಕ್ಸ್ ಹಾಗೂ ಮೇಕಿಂಗ್‌ನಿಂದ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದ ಆದಿಪುರುಷ್ ನಂತರ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾದ ಬಳಿಕ ಸಿಕ್ಕಾಪಟ್ಟೆ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಂಡಿದೆ.

ಅದರಲ್ಲಿಯೂ ಚಿತ್ರದ ಜೈ ಶ್ರೀ ರಾಮ್ ಹಾಗೂ ರಾಮ್ ಸೀಯಾ ರಾಮ್ ಹಾಡುಗಳು ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲೆ ಸಿನಿ ರಸಿಕರಿಗೆ ಇದ್ದ ಅಭಿಪ್ರಾಯವೇ ಬದಲಾಗಿದ್ದು, ಕೆಟ್ಟ ವಿಎಫ್ಎಕ್ಸ್ ಈ ಚಿತ್ರವನ್ನು ನೋಡುವುದು ವೇಸ್ಟ್ ಎಂದಿದ್ದವರೆಲ್ಲಾ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ.

More from Filmibeat

English summary
Adipurush Karnataka bookings will be opened tomorrow. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X