For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಸಿನಿಮಾ ನಿರ್ದೇಶಕನಿಗೆ ಐಶಾರಾಮಿ ಕಾರು: ಕೋಟಿಗಳಲ್ಲಿ ಬೆಲೆ

  |

  ಪ್ರಭಾಸ್ ನಟಿಸಿರುವ 'ಆದಿಪುರುಷ್' ಸಿನಿಮಾ ಟೀಸರ್ ಇತ್ತೀಚಿಗೆ ಬಿಡುಗಡೆ ಆಗಿ ತೀವ್ರ ಟೀಕೆಗೆ ಒಳಗಾಯಿತು. ಸಿನಿಮಾದ ನಿರ್ದೇಶಕ ಓಂ ರಾವತ್ ಅನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಲಾಯ್ತು.

  ಆದರೂ ಸಹ 'ಆದಿಪುರುಷ್' ಸಿನಿಮಾದ ನಿರ್ಮಾಪಕ ಭೂಷಣ್‌ಕುಮಾರ್, ನಿರ್ದೇಶಕ ಓಂ ರಾವತ್‌ಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

  'ಆದಿಪುರುಷ್ ಸಿನಿಮಾವನ್ನು ಕೂಡಲೇ ಬ್ಯಾನ್ ಮಾಡಿ': ಅಯೋಧ್ಯೆ ಪ್ರಧಾನ ಅರ್ಚಕರ ಆಗ್ರಹ!'ಆದಿಪುರುಷ್ ಸಿನಿಮಾವನ್ನು ಕೂಡಲೇ ಬ್ಯಾನ್ ಮಾಡಿ': ಅಯೋಧ್ಯೆ ಪ್ರಧಾನ ಅರ್ಚಕರ ಆಗ್ರಹ!

  ಟಿ ಸಿರೀಸ್ ಸಂಸ್ಥೆಯ ಮಾಲೀಕರೂ ಆಗಿರುವ ಭೂಷಣ್ ಕುಮಾರ್, ನಿರ್ದೇಶಕ ಓಂ ರಾವತ್‌ಗೆ ಫೆರಾರಿ ಎಫ್‌8 ಟಿರ್ಬೊಟ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಐಶಾರಾಮಿ ಕಾರಿನ ಬೆಲೆ ನಾಲ್ಕು ಕೋಟಿಗೂ ಹೆಚ್ಚು!

  ಫೆರಾರಿ ನಿರ್ಮಿಸಿರುವ ಅತಿ ವೇಗದ ಕಾರುಗಳಲ್ಲಿ ಒಂದು ಈ ಎಫ್‌8 ಟಿರ್ಬೊಟ್. 8 ಕ್ಕಿಂತಲೂ ಕಡಿಮೆ ಮೈಲೇಜ್‌ನ ಈ ಕಾರು ನಾಲ್ಕು ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳಬಹುದು. ಕಾರಿನ ಸೀಟು ಸಾಮರ್ಥ್ಯ ಎರಡು ಮಾತ್ರ. ಈ ಐಶಾರಾಮಿ ಹಾಗೂ ವೇಗದ ಕಾರು ಓಂ ರಾವತ್‌ಗೆ ಧಕ್ಕಿದೆ.

  'ಆದಿಪುರುಷ್' ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಭೂಷಣ್ ಕುಮಾರ್ ಹಾಗೂ ಓಂ ರಾವತ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿತ್ತು. ಪ್ರಭಾಸ್‌ ಜೊತೆಗೂ ಓಂ ರಾವತ್‌ಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿತ್ತು. ಆದರೆ ಭೂಷಣ್ ಕುಮಾರ್, ಓಂ ರಾವತ್‌ಗೆ ಐಶಾರಾಮಿ ಕಾರು ನೀಡುವ ಮೂಲಕ ನಮ್ಮ ನಡುವೆ ಎಲ್ಲವೂ ಸರಿಯಿದೆ ಎಂಬ ಸಂದೇಶ ರವಾನಿಸಿದ್ದಾರೆ.

  ಅಜಯ್ ದೇವಗನ್ ನಟಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ತಾನಾಜಿ' ಮೂಲಕ ಓಂ ರಾವತ್ ನಿರ್ದೇಶನ ಆರಂಭಿಸಿದರು. ಎರಡನೇ ಸಿನಿಮಾ ಆಗಿ ಬಿಗ್‌ಬಜೆಟ್ ಸಿನಿಮಾ 'ಆದಿಪುರುಷ್' ಅನ್ನು ಕೈಗೆತ್ತಿಕೊಂಡಿದ್ದಾರೆ. ಭಾರತದಲ್ಲಿಯೇ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಎನ್ನಲಾಗುವ 'ಆದಿಪುರುಷ್' ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಕಳಪೆ ವಿಎಫ್‌ಎಕ್ಸ್‌ನಿಂದಾಗಿ ಹಾಗೂ ರಾಮಾಯಣದ ಪಾತ್ರಗಳನ್ನು ತಿರುಚಿರುವ ಕಾರಣಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ.

  'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

  English summary
  Prabhas's Adipurush movie producer Bhushan Kumar gifted a swanky car to director Om Raut.
  Wednesday, October 19, 2022, 17:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X