For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಮುಗಿಸಿ 'ಆದಿಪುರುಷ್' ಆರಂಭಿಸಿದ ಪ್ರಭಾಸ್

  |

  ಬಾಲಿವುಡ್ ಇಂಡಸ್ಟ್ರಿಯ ಮೆಗಾ ಸಿನಿಮಾ ಆದಿಪುರುಷ್ ಅಪ್‌ಡೇಟ್‌ಗಾಗಿ ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ. ಬಹುದೊಡ್ಡ ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ತಯಾರಾಗುತ್ತಿರುವ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಗೂ ಮುಂಚೆ ನಟ ಪ್ರಭಾಸ್ ನಟನೆಯ ಎರಡ್ಮೂರು ಚಿತ್ರಗಳು ರಿಲೀಸ್ ಆಗುವ ಸಾಧ್ಯತೆ ಇದ್ದರೂ ಆದಿಪುರುಷ್ ಸಿನಿಮಾದ ವಿಶೇಷತೆಯೇ ಬೇರೆ.

  ಈಗಷ್ಟೇ ಸಿಕ್ಕಿರುವ ಮಾಹಿತಿ ಪ್ರಕಾರ, ಮುಂಬೈನಲ್ಲಿ 'ಆದಿಪುರುಷ್' ಚಿತ್ರೀಕರಣ ಆರಂಭಿಸಿದೆ. ಸುಮಾರು ಹತ್ತು ದಿನಗಳ ಕಾಲ ವಾಣಿಜ್ಯ ನಗರಿಯಲ್ಲಿ ಪ್ರಭಾಸ್ ಶೂಟಿಂಗ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಭಾಸ್‌ಗೆ ಬಾಲಿವುಡ್ ನಟಿ ಕೃತಿ ಸನೂನ್ ಸಾಥ್ ಕೊಡಲಿದ್ದಾರೆ. ಓಂ ರಾವತ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಈಗಾಗಲೇ ಶುಟಿಂಗ್ ಪ್ರಾರಂಭಿಸಿತ್ತು. ಆದರೆ, ಕೋವಿಡ್ ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣಕ್ಕೆ ಅಲ್ಪ ವಿರಾಮ ನೀಡಿತ್ತು. ಈಗ ಮತ್ತೆ ಶೂಟಿಂಗ್‌ಗೆ ಚಾಲನೆ ಕೊಟ್ಟಿದೆ.

  ರಾಮ್ ಚರಣ್ ಮತ್ತು ಪ್ರಭಾಸ್ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳು ಫುಲ್ ಖುಷ್ರಾಮ್ ಚರಣ್ ಮತ್ತು ಪ್ರಭಾಸ್ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳು ಫುಲ್ ಖುಷ್

  ಆದಿಪುರುಷ್ ಪೌರಾಣಿಕ ಕಥೆಯಾಧರಿಸಿ ತಯಾರಾಗುತ್ತಿರುವ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃತಿ ಸನೂನ್ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ...

  'ಸಲಾರ್' ಚಿತ್ರೀಕರಣ ಮುಗಿಸಿದ ಪ್ರಭಾಸ್

  'ಸಲಾರ್' ಚಿತ್ರೀಕರಣ ಮುಗಿಸಿದ ಪ್ರಭಾಸ್

  'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಷನ್‌ನಲ್ಲಿ 'ಸಲಾರ್' ಸಿನಿಮಾ ಮಾಡುತ್ತಿರುವ ಪ್ರಭಾಸ್ ಹೈದರಾಬಾದ್‌ನಲ್ಲಿ ಎರಡನೇ ಶೆಡ್ಯೂಲ್ ಮುಗಿಸಿದ್ದಾರೆ. ಕೊರೊನಾ ಎರಡನೇ ಲಾಕ್‌ಡೌನ್ ಬಳಿಕ ಜುಲೈ 3 ರಂದು 'ಸಲಾರ್' ಚಿತ್ರೀಕರಣ ಆರಂಭಿಸಿದ್ದರು. ಈಗ ಹೈದರಾಬಾದ್‌ ಶೂಟಿಂಗ್ ಮುಗಿಸಿ ಮುಂಬೈಗೆ ಪ್ರಭಾಸ್ ಬಂದಿಳಿದಿದ್ದಾರೆ. ಇನ್ನು 'ಸಲಾರ್' ಸಿನಿಮಾದ ಚಿತ್ರೀಕರಣದ ವೇಳೆ ಹಲವು ಫೋಟೋಗಳು ಲೀಕ್ ಆಗಿದ್ದು, ಸಹಜವಾಗಿ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಪ್ರಮುಖವಾಗಿ ಆಕ್ಷನ್ ದೃಶ್ಯಗಳು ಸೋರಿಕೆಯಾಗಿದೆ.

  ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್

  ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್

  ಆದಿಪುರುಷ್ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಗಸ್ಟ್ 16 ರಂದು ಸೈಫ್ ಅಲಿ ಖಾನ್ ಅವರ ಹುಟ್ಟುಹಬ್ಬವಿದ್ದ ಹಿನ್ನೆಲೆ ಇನ್ಸ್ಟಾಗ್ರಾಂನಲ್ಲಿ ಪ್ರಭಾಸ್ ಶುಭಾಶಯ ಕೋರಿದ್ದರು. ''ಹುಟ್ಟುಹಬ್ಬದ ಶುಭಾಶಯಗಳು ಸೈಫ್ ಅಲಿ ಖಾನ್ ಜೀ. ಆದಿಪುರುಷ್ ಸಿನಿಮಾದಲ್ಲಿ ನಿಮ್ಮನ್ನು ನೋಡಲು ಎಲ್ಲರೂ ಕಾಯುತ್ತಿದ್ದಾರೆ'' ಎಂದು ಪೋಸ್ಟ್ ಹಾಕಿದ್ದರು.

  'ಸಲಾರ್' ಸಿನಿಮಾದ ಪ್ರಭಾಸ್ ಫೋಟೋ ಲೀಕ್; ಟ್ವಿಟ್ಟರ್ ನಲ್ಲಿ ಸಖತ್ ಟ್ರೆಂಡ್'ಸಲಾರ್' ಸಿನಿಮಾದ ಪ್ರಭಾಸ್ ಫೋಟೋ ಲೀಕ್; ಟ್ವಿಟ್ಟರ್ ನಲ್ಲಿ ಸಖತ್ ಟ್ರೆಂಡ್

  ರಿಲೀಸ್ ದಿನಾಂಕ ಘೋಷಿಸಿ ಒಂದು ವರ್ಷ

  ರಿಲೀಸ್ ದಿನಾಂಕ ಘೋಷಿಸಿ ಒಂದು ವರ್ಷ

  ಆದಿಪುರುಷ್ ಸಿನಿಮಾ ಆಗಸ್ಟ್ 11, 2022 ರಂದು ವರ್ಲ್ಡ್‌ವೈಡ್ ಬಿಡುಗಡೆಯಾಗಲಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಭಾರತದ ಹಲವು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕಳೆದ ವರ್ಷ ಆಗಸ್ಟ್ 11 ರಂದು ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿದ್ದರು. ಈಗ ಸರಿಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಕೋವಿಡ್ ಮೂರನೇ ಅಲೆ ಇಲ್ಲವಾದರೇ ಹೇಳಿದ ದಿನಾಂಕಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ.

  450 ಕೋಟಿ ಬಜೆಟ್

  450 ಕೋಟಿ ಬಜೆಟ್

  ಆದಿಪುರುಷ್ ಚಿತ್ರಕ್ಕೆ ಒಟ್ಟು 400-450 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಬಂಡವಾಳದ ಅರ್ಧದಷ್ಟು ಹಣ ಸಂಭಾವನೆಯಿಂದ ಕೂಡಿದೆ. ವಿಎಫ್‌ಎಕ್ಸ್‌ಗಾಗಿ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಆದಿಪುರುಷ್ ಶೂಟಿಂಗ್ ಪ್ರಾರಂಭವಾಗಿತ್ತು. ಕೋವಿಡ್ ಎರಡನೇ ಅಲೆ ಹಿನ್ನೆಲೆ ಅನಿರೀಕ್ಷಿತವಾಗಿ ಚಿತ್ರೀಕರಣ ನಿಲ್ಲಿಸಬೇಕಾಯಿತು. ಸಲಾರ್, ಆದಿಪುರುಷ್ ಬಿಟ್ಟು ನಾಗ್ ಅಶ್ವಿನ್ ಜೊತೆ 21ನೇ ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ.

  English summary
  Prabhas and Kriti Sanon starrer Adipurush new schedule begins in Mumbai. Shoot will go for next 10 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X